1 ಲಕ್ಷ ರೂ. ಮೌಲ್ಯದ ಕಟ್ಟಿಗೆ ವಶ

ಬೆಳಗಾವಿ: ಅಕ್ರಮವಾಗಿ ಕಟ್ಟಿಗೆ ಸಾಗಣೆ ಮಾಡುತ್ತಿದ್ದ ಮೂರು ಟ್ರಾೃಕ್ಟರ್‌ಗಳನ್ನು ಗುರುವಾರ ವಶಪಡಿಸಿಕೊಂಡು ಮೂವರು ಆರೋಪಿಗಳನ್ನು ಸಿಐಡಿ ಅರಣ್ಯ ಸಂಚಾರಿ ದಳದ ಪೊಲೀಸರು ಬಂಧಿಸಿದ್ದಾರೆ.
ಮರಕುಂಬಿ ನಿವಾಸಿ ಮಲ್ಲಿಕಜಾನ್ ನಬೀಸಾಬ್ ಕುಡಗುಂಟಿ, ಮಮದಾಪುರ ನಿವಾಸಿ ಪುಂಡಲೀಕ ಅಪ್ಪಯ್ಯ ಹಂಜಿ ಹಾಗೂ ಜಮನಾಳದ ಸೋಮಪ್ಪ ಯಲ್ಲಪ್ಪ ಪೂಜಾರಿ ಬಂಧಿತರು.

ಬೇವಿನ ಮರದ ತುಂಡುಗಳನ್ನು ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಆಧಾರದ ಮೇಲೆ ಕೊಳವಿ ಕಡೆಯಿಂದ ಗೋಕಾಕ ನಗರಕ್ಕೆ ಹೋಗುತ್ತಿದ್ದ ಸಂದರ್ಭ ಟ್ರಾೃಕ್ಟರ್‌ಗಳ ಸಮೇತ 1 ಲಕ್ಷ ರೂ.ಮೌಲ್ಯದ ಕಟ್ಟಿಗೆ ವಶಪಡಿಸಿಕೊಂಡಿದ್ದಾರೆ. ಪಿಎಸ್‌ಐ ಕೆ.ಎಸ್.ಕೊಚಾರಿ ಹಾಗೂ ಸಿಬ್ಬಂದಿ ಆರ್.ಬಿ.ಯರನಾಳ, ಎಸ್.ಆರ್.ಬಗರಿ ಇತರರು ಕಾರ್ಯಾಚರಣೆಯಲ್ಲಿ ಇದ್ದರು.