ಉಪ್ಪಿನಬೆಟಗೇರಿ: ಮರೇವಾಡ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ಕರಿಯಮ್ಮದೇವಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಬಿಡುಗಡೆಯಾದ 1 ಲಕ್ಷ ರೂ.ಗಳ ಡಿಡಿಯನ್ನು ದೇವಸ್ಥಾನದ ಸಮೀತಿಯವರಿಗೆ ಹಸ್ತಾಂತರಿಸಲಾಯಿತು.
ಧಗ್ರಾ ಯೋಜನೆ ತಾಲೂಕಾ ಯೋಜನಾಧಿಕಾರಿ ಅಶೋಕ ಕೆ. ಮಾತನಾಡಿ, ‘ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಯಾವುದೇ ಜಾತಿ ಬೇಧವೆನ್ನದೆ ಕಷ್ಟದಲ್ಲಿರುವ ಜನರಿಗೆ ಹಣಕಾಸಿನ ನೆರವು, ಉದ್ಯೋಗ, ಗುಡಿಗಳ ನಿರ್ಮಾಣಕ್ಕೆ ಧನಸಹಾಯ ಸೇರಿದಂತೆ ಅನೇಕ ಜನಪರ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿವೆ’ ಎಂದರು.
ಕರಿಯಮ್ಮದೇವಿ ದೇವಸ್ಥಾನ ಸಮಿತಿ ಅಧ್ಯಕ್ಷ ಚಂದ್ರಶೇಖರ ಕೆಂಗಾನೂರ, ಸದಸ್ಯರಾದ ಈರಣ್ಣ ಗಡ್ಡಿ, ಚಂದ್ರಶೇಖರ ಹೆಬ್ಬಾಳ, ವಿರೂಪಾಕ್ಷಪ್ಪ ಅಮರಗೋಳ, ಚನಬಸಪ್ಪ ಹೆಬ್ಬಾಳ, ಗಂಗಾಧರ ಹಡಪದ, ಶಿಲ್ಪಾ ಪಾಟೀಲ, ಸುಮಂಗಲಾ ಹೆಬ್ಬಾಳ ಇತರರಿದ್ದರು.