ವಿವಾಹ ಪ್ರೋತ್ಸಾಹ ಧನ 1.81 ಕೋಟಿ ರೂ. ಬಾಕಿ:

ಕೇಶವಮೂರ್ತಿ ವಿ.ಬಿ. ಹಾವೇರಿ

ತಳ ಸಮುದಾಯದ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಅಂತರ್ಜಾತಿ, ಸಮುದಾಯದೊಳಗೆ ವಿವಾಹ, ಸರಳ ವಿವಾಹ, ಮಾಜಿ ದೇವದಾಸಿಯರ ಮಕ್ಕಳ ವಿವಾಹ ಹಾಗೂ ವಿಧವಾ ವಿವಾಹಗಳ ಪ್ರೋತ್ಸಾಹ ಧನ ಒಟ್ಟಾರೆ 1.81 ಕೋಟಿ ರೂ. ಜಿಲ್ಲೆಗೆ ಬಾಕಿ ಉಳಿದುಕೊಂಡಿದ್ದು, ಅರ್ಜಿದಾರರು ಬಾಕಿ ಬಿಡುಗಡೆಗಾಗಿ ಅಲೆದಾಡುವಂತಾಗಿದೆ.

ಅಂತರ್ಜಾತಿ ವಿವಾಹವಾಗಿರುವ 200 ದಂಪತಿಗಳು ಅರ್ಜಿ ಸಲ್ಲಿಸಿದ್ದು, ಇದರಲ್ಲಿ 144 ಅರ್ಜಿ ಸ್ವೀಕೃತಿಯಾಗಿತ್ತು. ಇದರಲ್ಲಿ 88 ಫಲಾನುಭವಿಗಳಿಗೆ ಹಣ ಬಿಡುಗಡೆ ಮಾಡಲಾಗಿದೆ. ಬಾಕಿ 56 ದಂಪತಿಗೆ 1.57 ಕೋಟಿ ರೂ. ಬಾಕಿ ಬರಬೇಕಿದೆ.

ಸಮುದಾಯದೊಳಗೆ ವಿವಾಹವಾಗಿರುವ 46 ದಂಪತಿಗಳಿಂದ ಅರ್ಜಿ ಸ್ವೀಕರಿಸಲಾಗಿದ್ದು, ಇದರಲ್ಲಿ 37 ಅರ್ಹರಿಗೆ ಹಣ ಮಂಜೂರು ಮಾಡಲಾಗಿದ್ದು, 9 ದಂಪತಿಗಳ 18 ಲಕ್ಷ ರೂ. ಬಾಕಿ ಉಳಿದಿದೆ.

ಸರಳ ವಿವಾಹವಾಗಿರುವ 27 ಅರ್ಜಿಗಳ ಪೈಕಿ 24 ಫಲಾನುಭವಿಗಳು ಅರ್ಹರಿದ್ದು, 23 ದಂಪತಿಯ ಹಣ ಬಂದಿದೆ. ಒಂದು ದಂಪತಿಯ 50 ಸಾವಿರ ರೂ. ಬಾಕಿ ಇದೆ. ಮಾಜಿ ದೇವದಾಸಿಯರ ಮಕ್ಕಳ ವಿವಾಹಿತ ದಂಪತಿಗೆ ಪ್ರೋತ್ಸಾಹ ಧನ ನೀಡುವ ಯೋಜನೆಯಡಿ 27 ದಂಪತಿ ಅರ್ಜಿ ಸಲ್ಲಿಸಿದ್ದು, 19 ಫಲಾನುಭವಿಗಳು ಅರ್ಹರಿದ್ದು, 18 ದಂಪತಿಯ ಪ್ರೋತ್ಸಾಹ ಧನ ಬಿಡುಗಡೆಯಾಗಿದೆ. ಒಬ್ಬರ 5 ಲಕ್ಷ ರೂ. ಬರಬೇಕಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಮೂಲಗಳು ತಿಳಿಸಿವೆ.

ರಾಜ್ಯ ಸರ್ಕಾರದ ವಿವಾಹ ಪ್ರೋತ್ಸಾಹ ಧನದ ಅಡಿಯಲ್ಲಿ 1.81 ಕೋಟಿ ರೂ. ಬಾಕಿ ಬರಬೇಕಿದೆ. ಈ ಹಣಕ್ಕಾಗಿ ಫಲಾನುಭವಿಗಳು ಕಚೇರಿಯಿಂದ ಕಚೇರಿಗೆ ಅಲೆದಾಡುವಂತಾಗಿದೆ. ಸರ್ಕಾರ ಕೂಡಲೇ ಬಾಕಿ ಹಣ ಬಿಡುಗಡೆ ಮಾಡಬೇಕು ಎಂಬ ಒತ್ತಾಯ ಫಲಾನುಭವಿಗಳಿಂದ ಕೇಳಿ ಬಂದಿದೆ.

ಯಾರಿಗೆ ಎಷ್ಟು ಪ್ರೋತ್ಸಾಹ ಧನ ಬರುತ್ತೆ ?

ಅಂತರ್ಜಾತಿ ವಿವಾಹಿತ ದಂಪತಿಯ ಪ್ರೋತ್ಸಾಹ ಧನ ಯೋಜನೆಯಡಿ ಎಸ್​ಸಿ ಹುಡುಗ -ಮೇಲ್ಜಾತಿ ಹುಡುಗಿ ಇದ್ದರೆ 2.50 ಲಕ್ಷ ರೂ., ಹುಡುಗಿ ಎಸ್​ಸಿ ಇದ್ದು ಹುಡುಗ ಮೇಲ್ಜಾತಿಯವರು ಇದ್ದರೆ ಅಂತಹ ದಂಪತಿಗೆ 3 ಲಕ್ಷ ರೂ. ಪ್ರೋತ್ಸಾಹ ಧನ ಸಿಗುತ್ತದೆ. ಎಸ್​ಸಿ ಒಳಪಂಗಡ ಹುಡುಗ- ಹುಡುಗಿಯನ್ನು ಮೇಲ್ಜಾತಿಯವರು ವಿವಾಹವಾದಲ್ಲಿ 2 ಲಕ್ಷ ರೂ. ದೊರೆಯುತ್ತದೆ.

10 ಜತೆಗಿಂತ ಹೆಚ್ಚಿನ ಸರಳ ಸಾಮೂಹಿಕ ವಿವಾಹವಾದಲ್ಲಿ ಒಂದು ದಂಪತಿಗೆ 50 ಸಾವಿರ ರೂ. ಸಿಗುತ್ತದೆ. ವಿಧವೆಯನ್ನು ವಿವಾಹವಾದಲ್ಲಿ ವಿಧವೆ ಖಾತೆಗೆ 3 ಲಕ್ಷ ರೂ. ಬರಲಿದೆ. ಮಾಜಿ ದೇವದಾಸಿಯರ ಮಕ್ಕಳನ್ನು ಮದುವೆಯಾದ ದಂಪತಿಗೂ ಪ್ರೋತ್ಸಾಹಧನ ಸಿಗಲಿದೆ. ಹುಡುಗಿಯ ತಾಯಿ ಮಾಜಿ ದೇವದಾಸಿಯಾಗಿದ್ದರೆ 5 ಲಕ್ಷ ರೂ. ಹಾಗೂ ಹುಡುಗನ ತಾಯಿ ಮಾಜಿ ದೇವದಾಸಿಯಾಗಿದ್ದರೆ 3 ಲಕ್ಷ ರೂ. ಪ್ರೋತ್ಸಾಹ ಧನ ದಂಪತಿಗೆ ಸಿಗಲಿದೆ. ಅರ್ಹರು ಸಮಾಜ ಕಲ್ಯಾಣ ಇಲಾಖೆ ಮೂಲಕ ಅರ್ಜಿ ಸಲ್ಲಿಸಬಹುದು ಎನ್ನುತ್ತಾರೆ ಅಧಿಕಾರಿಗಳು.

ಅಂತರ್ಜಾತಿ ವಿವಾಹ ಆದ ದಂಪತಿಗೆ 1.57 ಕೋಟಿ ರೂ. ಸೇರಿದಂತೆ ಇತರೆ ವಿವಾಹದ ಫಲಾನುಭವಿಗಳಿಗೆ 1.81 ಕೋಟಿ ರೂ. ಬಾಕಿ ಹಣ ಬರಬೇಕಿದೆ. ರಾಜ್ಯ ಸರ್ಕಾರ ಈ ಕೂಡಲೇ ಬಾಕಿ ಹಣ ಬಿಡುಗಡೆ ಮಾಡಬೇಕು. ಇದರಿಂದ ಫಲಾನುಭವಿಗಳ ಜೀವನಕ್ಕೆ ಸಹಕಾರಿಯಾಗಲಿದೆ.

| ಉಡಚಪ್ಪ ಮಳಗಿ, ರಾಜ್ಯ ಸಮಿತಿ ಸದಸ್ಯ, ಡಿಎಸ್​ಎಸ್

Share This Article

ಬಿಕ್ಕಳಿಕೆ ಏಕೆ ಬರುತ್ತದೆ? ಕಿರಿಕಿರಿ ಉಂಟುಮಾಡುವ ಅದನ್ನು ನಿಯಂತ್ರಿಸುವುದು ಹೇಗೆ?

 ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…

ಈ ದಿನಾಂಕದಂದು ಜನಿಸಿದವರು ದಾನದಲ್ಲಿ ಕರ್ಣನನ್ನು ಮೀರಿಸುತ್ತಾರೆ! ನೀವೂ ಹುಟ್ಟಿದ್ದು ಇದೇ ದಿನಾನಾ?

ಜ್ಯೋತಿಷ್ಯಶಾಸ್ತ್ರದಲ್ಲಿ ಸಂಖ್ಯಾಶಾಸ್ತ್ರವೂ ಒಂದು. ಇದರ ಪ್ರಕಾರ ವ್ಯಕ್ತಿಯ ಜನ್ಮ ದಿನಾಂಕವು ಅವನ ವ್ಯಕ್ತಿತ್ವದ ಬಗ್ಗೆ ಮತ್ತು…

ಗೋಲ್ಡನ್ ಅವರ್ ರಹಸ್ಯ: ಮುಂಜಾನೆ ಬೇಗ ಏಳುವುದರಿಂದ ಇದೆ 6 ಪ್ರಯೋಜನಗಳು

 ಬೆಂಗಳೂರು: ಮನೆಯಲ್ಲಿ ಕೆಲವರು ಸೂರ್ಯೋದಯಕ್ಕೂ ಮೊದಲೇ ಏಳುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಮುಂಜಾನೆ ಬೇಗ ಏಳುವುದನ್ನು ರೂಢಿ…