ಕಳ್ಳತನವಾಗಿದ್ದ 1.67 ಕೋಟಿ ರೂ. ಮೌಲ್ಯದ ಚಿನ್ನಾಭರಣ ಮಡಿಲಿಗೆ

blank

ಬೆಳಗಾವಿ: ನಗರದ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣೆಯಲ್ಲಿ ಕಳ್ಳತನವಾಗಿದ್ದ 1.67 ಕೋಟಿ ರೂ. ಮೌಲ್ಯದ ಚಿನ್ನಾಭರಣ, ಬೈಕ್ ಹಾಗೂ ಕಾರ್‌ಗಳನ್ನು, ಪೊಲೀಸರು ನಗರದ ಡಿಎಆರ್ ಮೈದಾನದಲ್ಲಿ ಸೋಮವಾರ ಪ್ರಾಪರ್ಟಿ ಪರೇಡ್‌ನಲ್ಲಿ ವಾರಸುದಾರರಿಗೆ ಮರಳಿಸಿದರು.
ಈ ವರ್ಷ ಬೆಳಗಾವಿ ನಗರದಲ್ಲಿ ಒಟ್ಟು 339 ಮನೆಗಳಲ್ಲಿ ಕಳ್ಳತನ ಪ್ರಕರಣಗಳು ದಾಖಲಾಗಿ, ಒಟ್ಟು 5.13 ಕೋಟಿ ರೂ. ಮೌಲ್ಯದ ಚಿನ್ನಾಭರಣವನ್ನು, ನಗದನ್ನು ಕಳ್ಳರು ಎಗರಿದ್ದರು. 339 ಪ್ರಕರಣಗಳ ಪೈಕಿ 117 ಪ್ರಕರಣಗಳನ್ನು ಭೇಸಿರುವ ಪೊಲೀಸರು, 1,67,13,555 ರೂ. ಮೌಲ್ಯದ ವಸ್ತುಗಳನ್ನು ಮರಳಿ ವಶಕ್ಕೆ ಪಡೆದು, ವಾರಸುದಾರರಿಗೆ ಹಸ್ತಾಂತರಿಸಲಾಯಿತು. ಕಳೆದು ಹೋದ ವಸ್ತುಗಳನ್ನು ಪಡೆದ ವಾರಸುದಾರರು ಮೈದಾನದಲ್ಲಿ ಸಂತಸ ವ್ಯಕ್ತಪಡಿಸಿದರು.
ಕಳ್ಳತನ ಪ್ರಕರಣದಲ್ಲಿ 35 ಗ್ರಾಂ ಚಿನ್ನ, 450 ಗ್ರಾಂ ಬೆಳ್ಳಿ ಮತ್ತು 15 ಸಾವಿರ ರೂ. ಕಳುವಾಗಿದ್ದವು. ಮಾರ್ಕೇಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇವು. ಈಗ ಕಳ್ಳತನವಾಗಿದ್ದರಲ್ಲಿ ಕೆಲ ವಸ್ತುಗಳು ಸಿಕ್ಕಿದ್ದು ಸಂತಸವನ್ನು ತಂದಿದೆ. ಪೊಲೀಸರ ಕಾರ್ಯ ಶ್ಲಾಘನೀಯವಾಗಿದೆ ಎಂದು ರೂಪಾಯಿ ವಿನಾಯಕ ಬಿರ್ಜೆ ಹೇಳಿದರು. ಚಿನ್ನ ಕಳ್ಳತನವಾಗಿದ್ದರಿಂದ ಕುಟುಂಬ ಆರ್ಥಿಕ ಸಂಕಷ್ಟ ಅನುಭವಿಸಿತ್ತು. ಮನೆಯಲ್ಲಿ ಯಾರು ಇಲ್ಲದಾಗ ಚಿನ್ನಾಭರಣಗಳನ್ನು ಕಳ್ಳತನ ಮಾಡಲಾಗಿತ್ತು. ಮಾರಿಹಾಳ ಪೊಲೀಸರು ಈಗ ಕಳ್ಳತನವಾದ 42 ಗ್ರಾಂ ಚಿನ್ನವನ್ನು ಮರಳಿ ನೀಡಿದ್ದಾರೆ ಎಂದು ಕಸ್ತೂರಿ ಶಂಕರ ಇಟಗಿ ಹರ್ಷ ವ್ಯಕ್ತಪಡಿಸಿದರು.

Share This Article

Vastu Tips : ರಾತ್ರಿ ಮಲಗುವ ಮುನ್ನ ಈ ತಪ್ಪುಗಳನ್ನು ಮಾಡಬೇಡಿ!ಸಾಲದ ಸುಳಿಗೆ ಸಿಲುಕುತ್ತೀರಿ..!

Vastu Tips: ದೃಷ್ಟ ಚೆನ್ನಾಗಿದ್ದರೆ ಕೆಲವರು ರಾತ್ರೋರಾತ್ರಿ ಲಕ್ಷಾಧಿಪತಿಗಳಾಗುತ್ತಾರೆ. ಕೆಲವರು  ಐಷಾರಾಮಿ ಜೀವನ ನಡೆಸಲು ಕಷ್ಟಪಡುತ್ತಾರೆ. ಅವರು…

Health Tips: ನೆಲದ ಮೇಲೆ ಕುಳಿತುಕೊಂಡು ತಿನ್ನಲು ಸಾಧ್ಯವಿಲ್ಲವೇ? ಆದ್ರೆ ಈ ಅದ್ಭುತ ಪ್ರಯೋಜನಗಳೇನು ಗೊತ್ತಾ?

Health Tips: ನಮ್ಮ ಹಿರಿಯರು ಊಟ ಮಾಡುವಾಗ ನೆಲದ ಮೇಲೆ ಕಾಲು ಮಡಚಿ ಕೂರುತ್ತಿದ್ದರು. ಆಧುನಿಕ ಕಾಲದಲ್ಲಿ…

Alcohol In Winter: ಚಳಿಯಲ್ಲಿ ಮದ್ಯ ಸೇವನೆ ಎಷ್ಟು ಅಪಾಯಕಾರಿ ಗೊತ್ತಾ?

Alcohol In Winter: ಚಳಿಗಾಲ ಆರಂಭವಾಗಿದೆ ಮತ್ತು ತಾಪಮಾನವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದಲ್ಲದೆ, ಜ್ವರ…