VIDEO: ರಾತ್ರಿ ವೇಳೆ ಒಂದೂವರೆ ವರ್ಷದ ಮಗು ಚರಂಡಿ ಬಳಿ ಆಟವಾಡುತ್ತಿತ್ತು… ಮುಂದೇನಾಯಿತು…?

ಮುಂಬೈ: ಇಲ್ಲಿನ ಗೋರೆಗಾಂವ್​ ಪೂರ್ವ ಬಡಾವಣೆಯ ಅಂಬೇಡ್ಕರ್​ ನಗರದಲ್ಲಿ ಒಂದೂವರೆ ವರ್ಷದ ಮಗು ಚರಂಡಿ ಬಳಿ ಆಟವಾಡುತ್ತಿತ್ತು. ರಾತ್ರಿಯ ಕತ್ತಲಲ್ಲಿ ಅದಕ್ಕೆ ಗೊತ್ತಾಗದೇ ಬಾಯ್ದೆರೆಯಲಾಗಿದ್ದ ಮ್ಯಾನ್​ಹೋಲ್​ಗೆ ಬಿದ್ದಿದ್ದು, ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ.

ದಿವ್ಯಾಂಶ್​ ಸಿಂಗ್​ ಕೊಚ್ಚಿಕೊಂಡು ಹೋದ ಮಗು. ಈತ ಕೊಚ್ಚಿಕೊಂಡು ಹೋಗುತ್ತಿರುವ ದೃಶ್ಯ ಸ್ಥಳದಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ರಾತ್ರಿ ಮಗುವೊಂದೇ ರಸ್ತೆ ಬದಿ ಓಡಾಡುತ್ತಿರುತ್ತದೆ. ದಿಢೀರನೆ ಅದು ವಿದ್ಯುತ್​ ಬಾಕ್ಸ್​ನ ಹಿಂಭಾಗಕ್ಕೆ ಬರುತ್ತದೆ. ಅಲ್ಲಿ ಮ್ಯಾನ್​ಹೋಲ್​ನ ಮುಚ್ಚಳ ತೆಗೆದು ಹಾಗೆಯೇ ಬಿಟ್ಟಿರಲಾಗುತ್ತದೆ. ಇದು ತಿಳಿಯದ ಬಾಲಕ ಅತ್ತ ಹೋಗಿ ಹಠಾತ್ತನೆ ಅದರೊಳಗೆ ಬೀಳುತ್ತದೆ.

ಈ ಮ್ಯಾನ್​ಹೋಲ್​ ಅಂದಾಜು 3-4 ಅಡಿ ಆಳವಿದೆ. ಸತತ ಮಳೆಯಿಂದಾಗಿ ಮ್ಯಾನ್​ಹೋಲ್​ನಲ್ಲಿ ನೀರು ರಭಸವಾಗಿ ಹರಿಯುತ್ತಿದುದರಿಂದ ಮಗು ಕೊಚ್ಚಿಕೊಂಡು ಹೋಗಿದೆ. ಈ ಮ್ಯಾನ್​ಹೋಲ್​ ಮುಂದೆ ಹೋಗಿ 10-15 ಅಡಿ ಆಳವಾಗಿರುವ ದೊಡ್ಡ ಮೋರಿಗೆ ಸೇರುತ್ತದೆ. ಇದೀಗ ಆ ಮೋರಿಯಲ್ಲಿ ಮಗುವಿನ ಶವಕ್ಕಾಗಿ ಹುಡುಕಾಟ ನಡೆಸಿರುವುದಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ತಿಳಿಸಿದ್ದಾರೆ. (ಏಜೆನ್ಸೀಸ್​)

 

Leave a Reply

Your email address will not be published. Required fields are marked *