ಬೆಂಗಳೂರು: ಎನ್95 ಮಾಸ್ಕ್ ಖರೀದಿಸಲು ಮುಂದಾದ ಬೆಂಗಳೂರಿನ ಕಂಪನಿಯೊಂದರ ಉದ್ಯಮಿಗೆ ಅಮೆರಿಕದ ಮೂವರು ಸೈಬರ್ ವಂಚಕರು 1.23 ಕೋಟಿ ರೂ.ವಂಚಿಸಿದ್ದಾರೆ.
ಚಿಕ್ಕಬಾಣಾವರ ಸಮೀಪದ ಅಂಚೆಪಾಳ್ಯದ ಕಂಪನಿ ಅಧಿಕಾರಿಯೋರ್ವರು ನೀಡಿದ ದೂರಿನ ಅನ್ವಯ ಅಮೆರಿಕ ಕಂಪನಿಯ ಮೂವರ ವಿರುದ್ಧ ಸೈಬರ್ ಕ್ರೈಂ ಠಾಣೆಯ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
ಜುಲೈನಲ್ಲಿ ಎನ್95 ಮಾಸ್ಕ್ ಖರೀದಿ ಸಲುವಾಗಿ ಅಮೆರಿಕ ಕಂಪನಿ ಜತೆಗೆ ದೂರುದಾರರು ಮಾತುಕತೆ ನಡೆಸಿದ್ದರು. ಪ್ರತಿ ಮಾಸ್ಕ್‌ಗೆ 124 ರೂ. ಬೆಲೆ ನಿಗದಿ ಮಾಡಿ, 4.95 ಕೋಟಿ ರೂ. ಮೌಲ್ಯದ ಮಾಸ್ಕ್ ಆಮದು ಮಾಡಿಕೊಳ್ಳಲು ನಿರ್ಧರಿಸಿ ಒಪ್ಪಂದಕ್ಕೆ ಸಮ್ಮತಿಸಿದ್ದರು. ಇದನ್ನೂ ಓದಿ: ಕೃಷಿ ಮಸೂದೆಗಳು ಅನುಮೋದನೆಗೊಂಡ ಬೆನ್ನಲ್ಲೇ ಪ್ರಧಾನಿಯಿಂದ ಭರವಸೆ; ಎಂಎಸ್ಪಿಗೆ ಇಲ್ಲ ನಿರ್ಬಂಧ
ಮುಂಗಡವಾಗಿ 1.23 ಕೋಟಿ ರೂಪಾಯಿಯನ್ನು ಸಹ ಅಮೆರಿಕದ ಕಂಪನಿ ಅಧಿಕಾರಿಗಳು ನೀಡಿದ ಬ್ಯಾಂಕ್ ಖಾತೆಗೆ ಜಮೆ ಮಾಡಿದ್ದರು. ಹಲವು ದಿನ ಕಳೆದರೂ ಮಾಸ್ಕ್ ಬಾರದೆ ಇದ್ದಾಗ ಅನುಮಾನ ಬಂದು ಅಮೆರಿಕ ಕಂಪನಿ ಅಧಿಕಾರಿಗಳಿಗೆ ಕರೆ ಮಾಡಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ಬಾರದೆ ಇದ್ದಾಗ ವಂಚನೆಗೆ ಒಳಗಾಗಿರುವುದು ಗೊತ್ತಾಗಿ ಠಾಣೆಗೆ ಬಂದು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕೆ ಬಲೆಬೀಸಲಾಗಿದೆ ಎಂದು ಸೈಬರ್ ಕ್ರೈಂ ಪೊಲೀಸರು ತಿಳಿಸಿದ್ದಾರೆ.
ಐಸಿಸ್ ಉಗ್ರರಾಗಲು ಹೊರಟ 500 ಯುವಕರ ಮನ ಪರಿವರ್ತನೆ: ಪೊಲೀಸರ ಸಾಹಸಗಾಥೆ