1.11 ಕೋಟಿ ರೂ.ಉಳಿತಾಯ ಬಜೆಟ್

ಶಿಡ್ಲಘಟ್ಟ: ನಗರದ ಅಭಿವೃದ್ಧಿಗೆ ಸಂಬಂಧಿಸಿದಂತೆ 2019-20ನೇ ಸಾಲಿಗೆ 1,11,35,900 ರೂ. ಉಳಿತಾಯ ಬಜೆಟ್ ಅನ್ನು ನಗರಸಭೆ ಅಧ್ಯಕ್ಷ ಅಪ್ಸರ್ ಪಾಷಾ ಮಂಗಳವಾರ ಮಂಡಿಸಿದರು. ಆರಂಭ ಶುಲ್ಕು 1,05,55,900 ರೂ. ಸೇರಿ 30,85,15,000 ರೂ. ನಿರೀಕ್ಷಿಸಲಾಗಿದ್ದು, ಒಟ್ಟಾರೆ 31,87,70,900 ರೂ. ಬಜೆಟ್ ಮಂಡಿಸಲಾಯಿತು.

ಬಜೆಟ್​ನಲ್ಲಿ ಖರ್ಚು 30,76,35,000 ರೂ.ಗಳಾಗಿದ್ದು, ನಗರಸಭೆ ಕಟ್ಟಡಗಳ ಉನ್ನತೀಕರಣಕ್ಕೆ 3 ಕೋಟಿ ರೂ., ಆರ್​ಸಿಸಿ ಕಾಂಕ್ರೀಟ್ ರಸ್ತೆಗಳಿಗಾಗಿ 1.5 ಕೋಟಿ ರೂ., ಡಾಂಬರ್ ರಸ್ತೆ ಕಾಮಗಾರಿಗೆ 80 ಲಕ್ಷ ರೂ., ಆರ್​ಸಿಸಿ ಡೆಕ್ ಸ್ಲಾ್ಯಬ್ ನಿರ್ವಣಕ್ಕೆ 75 ಲಕ್ಷ ರೂ., ಡ್ರೖೆನ್ ನಿರ್ವಣಕ್ಕೆ 75 ಲಕ್ಷ ರೂ., ಹೊರಗುತ್ತಿಗೆ ಕಾರ್ಯಾಚರಣೆಯ ವೆಚ್ಚ 2 ಕೋಟಿ ರೂ., ನೌಕರರ ವೇತನ ಪಾವತಿಸಲು 70 ಲಕ್ಷ ರೂ., ಬ್ಲೀಚಿಂಗ್ ಪೌಡರ್​ಗೆ 10 ಲಕ್ಷ ರೂ., ಕ್ರಿಮಿನಾಶಕಗಳ ಖರೀದಿಗೆ 10 ಲಕ್ಷ ರೂ., ಕೊಳವೆಬಾವಿ ಕೊರೆಸಲು 2.90 ಕೋಟಿ ರೂ., ಹೊಸದಾಗಿ ಮೋಟಾರ್ ಪಂಪ್ ಖರೀದಿಸಲು 60 ಲಕ್ಷ ರೂ. ನಿಗದಿಪಡಿಸಲಾಗಿದೆ.

ಬೀದಿನಾಯಿ ಮತ್ತು ಕೋತಿಗಳನ್ನು ಹಿಡಿದು ಅರಣ್ಯಕ್ಕೆ ಬಿಡಲು 5 ಲಕ್ಷ ರೂ., ಮಿನಿ ಟಿಪ್ಪರ್​ಗಳ ಖರೀದಿಗೆ 35 ಲಕ್ಷ ರೂ., ನೀರು ಶುದ್ಧೀಕರಣ ಘಟಕಗಳ ಸ್ಥಾಪನೆಗೆ 32 ಲಕ್ಷ ರೂ., ನಗರಸಭೆ ವಾಹನಗಳಿಗೆ ಇಂಧನ ಭರಿಸಲು 22 ಲಕ್ಷ ರೂ. ಅಂದಾಜು ಖರ್ಚುಗಳನ್ನು ಸಭೆಯಲ್ಲಿ ಮಂಡಿಸಲಾಯಿತು.

ನಗರಸಭೆ ಸದಸ್ಯರಾದ ಚಿಕ್ಕಮುನಿಯಪ್ಪ, ಎಂ.ಬಾಲಕೃಷ್ಣ, ಷಫಿ, ಎಸ್.ರಾಘವೇಂದ್ರ, ಪಿ.ಕೆ.ಕಿಶನ್, ಸರಳಾ ಶ್ರೀನಾಥ್, ತನ್ವೀರ್, ಶಾಹೀದಾ, ಪರ್ವೀನ್​ತಾಜ್, ಆಯುಕ್ತ ಜಿ.ಎನ್.ಚಲಪತಿ ಮತ್ತಿತರರು ಉಪಸ್ಥಿತರಿದ್ದರು.

ಸದಸ್ಯರ ಸಹಿ ಸಂಗ್ರಹ: ಫೆ.19ರಂದು ಕರೆಯಲಾಗಿದ್ದ ಆಯವ್ಯಯ ಸಭೆಗೆ 21 ಸದಸ್ಯರು ಗೈರಾಗಿದ್ದ ಕಾರಣ ಮುಂದೂಡಲಾಗಿದ್ದ ಸಭೆ ಮಂಗಳವಾರ ನಡೆಯಿತು. ಹಿಂದಿನ ಸಭೆಯಲ್ಲಿ ಕೇವಲ ಆರು ಸದಸ್ಯರು ಹಾಜರಿದ್ದರು. ಆದರೆ, ಈ ಸಭೆಗೆ ಹಾಜರಾದ ಹತ್ತು ಸದಸ್ಯರ ಸಹಿ ಪಡೆದು ಆಯವ್ಯಯ ಮಂಡಿಸಲಾಯಿತು.