25.9 C
Bengaluru
Wednesday, January 22, 2020

ವಾರ ಭವಿಷ್ಯ: ನಿಮಗೀಗ ಬೇಕಾದದ್ದು ಆತ್ಮಶಕ್ತಿಯ ಪ್ರಾಬಲ್ಯ. ಸನ್ಮಂಗಳೆಯಾದ ಶ್ರೀ ರಾಜರಾಜೇಶ್ವರಿಯನ್ನು ಬೆಳಗ್ಗೆ ಎದ್ದ ಕೂಡಲೇ ಧ್ಯಾನಿಸಿ

Latest News

ತಾಪಂ ಆಡಳಿತ ಶೀಘ್ರ ಕಾರ್ಯಾರಂಭ

ಅಜ್ಜಂಪುರ: ತಾಪಂ ಆಡಳಿತ ಕಾರ್ಯ ಶೀಘ್ರ ಆರಂಭಿಸಲಾಗುವುದು. ಇದಕ್ಕೆ ಪೂರಕವಾಗಿ ಅಜ್ಜಂಪುರ ವ್ಯಾಪ್ತಿಯ ತಾಲೂಕು ಪಂಚಾಯಿತಿ ಸದಸ್ಯರನ್ನು ತರೀಕೆರೆಯಿಂದ ಪ್ರತ್ಯೇಕಿಸುವ ಕಾರ್ಯ ಪ್ರಗತಿಯಲ್ಲಿದೆ...

ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಬಿಗಿ ಭದ್ರತೆ

ಚಿಕ್ಕಮಗಳೂರು: ಮಂಗಳೂರಿನಲ್ಲಿ ಬಾಂಬ್ ಪತ್ತೆಯಾದ ಘಟನೆ ಹಿನ್ನೆಲೆಯಲ್ಲಿ ಪ್ರಮುಖ ಧಾರ್ವಿುಕ ಕ್ಷೇತ್ರಗಳಾದ ಶೃಂಗೇರಿ, ಹೊರನಾಡು, ಬಾಬಾಬುಡನ್​ಗಿರಿ, ಮುಳ್ಳಯ್ಯನಗಿರಿ, ಭದ್ರಾ ಅಣೆಕಟ್ಟೆ ಪ್ರದೇಶದಲ್ಲಿ ಪೊಲೀಸ್...

ದೊರೆತ ಉದ್ಯೋಗದಲ್ಲೇ ನಿಷ್ಠೆ ತೋರಿ: ಉದ್ಯೋಗ ಮೇಳದಲ್ಲಿ ಅಭ್ಯರ್ಥಿಗಳಿಗೆ ಶಾಸಕ ಎಸ್.ವಿ ರಾಮಚಂದ್ರ ಸಲಹೆ

ಜಗಳೂರು: ಸರ್ಕಾರಿ ಕೆಲಸಕ್ಕೆ ಅಲಂಬಿತರಾಗದೇ ಸಿಕ್ಕ ಉದ್ಯೋಗವನ್ನು ನಿಷ್ಠೆಯಿಂದ ಮಾಡಿದರೆ ಮುಂದೆ ಅವಕಾಶದ ಬಾಗಿಲುಗಳು ತೆರೆಯುತ್ತವೆ ಎಂದು ಶಾಸಕ ಎಸ್.ವಿ. ರಾಮಚಂದ್ರ ಹೇಳಿದರು. ಇಲ್ಲಿನ...

ಕೋತಿ ಹಾವಳಿಗೆ ಹಣ್ಣಿನ ಗಿಡ ಮದ್ದು

ಚಿಕ್ಕಮಗಳೂರು: ಕಡೂರಿನ ಹಲವೆಡೆ ತಲೆದೋರಿರುವ ಮಂಗಗಳ ಹಾವಳಿ ತಡೆಗೆ ಗ್ರಾಮಗಳ ಹೊರಭಾಗದಲ್ಲಿ ಹಣ್ಣಿನ ಸಸಿಗಳನ್ನು ನೆಟ್ಟು ಬೆಳೆಸುವ ಮೂಲಕ ಅವುಗಳನ್ನು ಆಕರ್ಷಿಸಬಹುದು. ಈ...

ಕರೋನಾ ವೈರಸ್​ ಪತ್ತೆ ಮಾಡಲು ಕೇರಳದ ವಿಮಾನ ನಿಲ್ದಾಣಗಳಲ್ಲಿ ಸ್ಕ್ರೀನಿಂಗ್​ ಕೇಂದ್ರಗಳ ಸ್ಥಾಪನೆ

ತಿರುವನಂತಪುರ: ಕರೋನಾ ವೈರಸ್​ ಹರಡುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರದ ಸಲಹೆ ಮೇರೆಗೆ ಕೇರಳದ ವಿಮಾನ ನಿಲ್ದಾಣಗಳಲ್ಲಿ ವೈರಸ್​ ಪತ್ತೆ ಮಾಡುವ ಸ್ಕ್ರೀನಿಂಗ್​ ಕೇಂದ್ರಗಳನ್ನು ಸ್ಥಾಪಿಸಲಾಗಿದೆ...

ಮೇಷ: ಕೆಲವು ಅನಿರೀಕ್ಷಿತ ಏರುಪೇರು ಎದುರಿಸುವ ಸಂದರ್ಭ ಇದು. ಧೈರ್ಯವೇ ನಿಮ್ಮ ದಾರಿಯ ಬೆಳಕಾಗಬೇಕು. ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಕೇತು ಮತ್ತು ಶನೈಶ್ಚರ ತಡೆಯುತ್ತಾರೆ. ಮನೆಯಲ್ಲಿ ಶಾಂತವಾಗಿರಿ. ಆಗ ಹೊರಗಡೆ ಶಾಂತತೆಯಿಂದಿರಲು ಸುಲಭವಾಗುತ್ತದೆ. ಯಾವುದೇ ಸಮಾರಂಭಕ್ಕೆ ತಪ್ಪಿಯೂ ಹಸಿರು ಬಟ್ಟೆ ಧರಿಸದಿರಿ. ಧರಿಸಿದರೂ ವಿಷ್ಣು ಸ್ತುತಿ ಮಾಡಿ. ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಫಲಕಾರಿಯಾದ ದಿನಗಳಿವು.

ಶುಭದಿಕ್ಕು: ಆಗ್ನೇಯ ಶುಭಸಂಖ್ಯೆ: 6

ವೃಷಭ: ನಿಮ್ಮ ತಾಳ್ಮೆ ಮೆಚ್ಚತಕ್ಕಂಥದ್ದು. ಇಂಥ ತಾಳ್ಮೆಯ ಮೂರ್ತಿಯನ್ನೂ ರೊಚ್ಚಿಗೆಬ್ಬಿಸುವ ಕಿರಾತಕರು ಬೆನ್ನು ಹತ್ತಿರುತ್ತಾರೆ. ರೇಗಿಸುವವರನ್ನು, ನಿಮ್ಮ ದೌರ್ಬಲ್ಯವನ್ನೇ ಟಾರ್ಗೆಟ್ ಮಾಡುವವರನ್ನು ನಗುತ್ತಲೇ ಎದುರಿಸಿ. ನೋವನ್ನು ಮುಖದಲ್ಲಿ ತೋರಿಸಬೇಡಿ. ನಿಯಂತ್ರಿಸಿಕೊಂಡರೆ ಅನವಶ್ಯಕ ಖರ್ಚನ್ನು ತಡೆಯಬಹುದು. ಕೆಲವು ಸಾಧನೆ ಮಾಡುವುದಕ್ಕೂ ಇದು ಸೂಕ್ತ ಸಮಯ. ಸಂತೆಯ ಗದ್ದಲದ ನಡುವೆಯೂ ಶಾಂತಿ ನಿರ್ವಿುಸಿಕೊಳ್ಳುವ ಬಲ ಪಡೆಯಿರಿ. ಶಿವನನ್ನು ಸ್ತುತಿಸಿ.

ಶುಭದಿಕ್ಕು: ಪೂರ್ವ ಶುಭಸಂಖ್ಯೆ: 8

ಮಿಥುನ: ನಡವಳಿಕೆಯಲ್ಲಿ ಪರಿಶುದ್ಧತೆ ಅಳವಡಿಸಿಕೊಳ್ಳಬೇಕೆಂಬ ನಿರ್ಣಯ ಕೈಬಿಡಬೇಡಿ. ಪಶ್ಚಾತಾಪವೆಂಬá-ದು ನಮ್ಮನ್ನು ನಮ್ಮ ತಪ್ಪುಗಳ ಮೂಲಕವಾದ ಕರ್ಮಬಂಧನದಿಂದ ಮುಕ್ತಿ ಗಳಿಸಲು ಸರಳ ಮಾರ್ಗವಾಗಿದೆ. ಕರ್ಮವು ತೊಳೆದಾಗ ಒಳಿತಿನ ದಾರಿ ಕಾಣಿಸುತ್ತವೆ. ನಿಮಗೀಗ ಬೇಕಾದದ್ದು ಆತ್ಮಶಕ್ತಿಯ ಪ್ರಾಬಲ್ಯ. ಸನ್ಮಂಗಳೆಯಾದ ಶ್ರೀ ರಾಜರಾಜೇಶ್ವರಿಯನ್ನು ಬೆಳಗ್ಗೆ ಎದ್ದ ಕೂಡಲೇ ಧ್ಯಾನಿಸಿ. ಏಳು ನಿಮಿಷದ ಧ್ಯಾನದಿಂದ ಮನಃಶಾಂತಿ ಸಿಗುತ್ತದೆ. ಹಲವು ರೀತಿಯಲ್ಲಿ ಒಳಿತಾಗುತ್ತದೆ.

ಶುಭದಿಕ್ಕು: ವಾಯವ್ಯ ಶುಭಸಂಖ್ಯೆ: 2

ಕಟಕ: ನಿರಂತರವಾದ ಭದ್ರತೆಯನ್ನು ನಂಬಿ ಮುಂದಿನ ಹೆಜ್ಜೆ ಇರಿಸುತ್ತೇನೆ ಎಂದು ಯೋಚಿಸುತ್ತೀರಿ. ಆದರೆ ಮುಂದಿನ ಹೆಚ್ಚೆಗಳು ಗಟ್ಟಿಯಾದ ಸ್ವರೂಪದಲ್ಲಿ ಸಮತೋಲನ ಹಾಗೂ ಭರವಸೆಗಳೊಂದಿಗೆ ಶುರುಗೊಂಡಾಗಲೇ ಭದ್ರತೆಯು ನಿಮಗೆ ತಾನೇ ತಾನಾಗಿ ಸಿಕ್ಕಿ ಶಾಂತ ಮನೋಭಾವ ಆವರಿಸಲಿದೆ. ನಿಮ್ಮ ಅನೇಕ ಯೋಜನೆಗಳು, ಪ್ರಯತ್ನಗಳು ಉನ್ನತಿಯತ್ತ ಕರೆದೊಯ್ಯಲಿವೆ. ಗಾಡ್​ಫಾದರ್ ಅರ್ಥಾತ್ ಪ್ರೇರೇಪಿಸುವ ಸದ್ಗುರುವಿನ ಆಶೀರ್ವಾದ ನಿಮಗೆ ಸಿಗಲಿದೆ.

ಶುಭದಿಕ್ಕು: ನೈಋತ್ಯ ಶುಭಸಂಖ್ಯೆ: 5

ಸಿಂಹ: ಅಂತರಂಗದಲ್ಲಿನ ದೇವರನ್ನು ಕಾಣುವ ಗುರಿ ಇಟ್ಟುಕೊಂಡು ನಿಮ್ಮೊಳಗೆ ನೀವು ಹೊಸದೊಂದನ್ನು ಹುಡುಕಲು ಯತ್ನಿಸಿ. ಆತ್ಮಕಾರಕನಾದ ಎವಿಯು ಬುಧನೊಂದಿಗಿನ ತನ್ನ ಸಂಯುಕ್ತ ಧೀಶಕ್ತಿಯ ಚೌಕಟ್ಟನ್ನು ನಿಮಗೆ ಭದ್ರ ತಳಹದಿಯನ್ನಾಗಿ ಒದಗಿಸುವುದರಿಂದ ಬುದ್ಧಿಬಲದಿಂದ ನೀವು ಗೆಲ್ಲಬಲ್ಲಿರಿ. ಶನಿಕಾಟ ಇನ್ನು ಆರು ವಾರಗಳಲ್ಲಿ ಸಮಾಪ್ತಿಯಾಗಲಿದೆ. ನಂಬಿಕೆ, ಅನುಭವದ ಆಧಾರಾದ ಮೇಲೆ ಸಕಾರಾತ್ಮಕ ಗೆಲುವು ಸಿಗಲಿದೆ. ಮನೆ ದೇವರನ್ನು ಆರಾಧಿಸಿ. ಆತ್ಮಸ್ಥೈರ್ಯ ಹೊಸದನ್ನು ಹುಡುಕಿ ಗೆಲ್ಲುವ ನಂಬಿಕೆ ಕೈಬಿಡದಿರಿ.

ಶುಭದಿಕ್ಕು: ದಕ್ಷಿಣ ಶುಭಸಂಖ್ಯೆ: 9

ಕನ್ಯಾಕುಜನು ವ್ಯಗ್ರತ್ವ ತರುತ್ತಾನೆ. ಕೋಪದಿಂದ ಕೆಡುಕನ್ನು ಆಹ್ವಾನಿಸಿಕೊಳ್ಳುತ್ತೀರಿ. ಇಲ್ಲವೆ ವ್ಯಗ್ರಗೊಳ್ಳುವ ಜನರು ಇಲ್ಲದ ಉಪದ್ವ್ಯಾಪ ಸೃಷ್ಟಿಸುತ್ತಾರೆ. ಏಕತಾನತೆಯನ್ನು ಮೀರಿ ನಿಲ್ಲುವ ಶಕ್ತಿ ನಿಮಗೆ ಬುಧನಿಂದ ಸಿಗಬೇಕು. ಏಕದಂತನನ್ನು ಪ್ರಾರ್ಥಿಸಿ. ಮನಸ್ಸಿನ ಏಕಾಗ್ರತೆ ಸಾಧಿಸಿ. ಭೂತಕಾಲದ ಯಾತನೆ ಮರೆತು ಭವಿಷ್ಯವನ್ನು ಪ್ರವೇಶಿಸುವ, ವರ್ತಮಾನವನ್ನು ಬೆಳಗಿಸುವ ದೀಕ್ಷೆಗೆ ಬದ್ಧರಾಗಿ. ಏಕಕಾಲದಲ್ಲಿ ಸಾವಿರ ವೋಲ್ಟೇಜಿನ ಬಲ್ಬ್ ಬೆಳಗಿದ ಹಾಗೆ ಮಿಂಚು ಮಿಂಚಲಿದೆ. ಗೆದ್ದು ಬೀಗದಿರಿ.

ಶುಭದಿಕ್ಕು: ಪೂರ್ವ ಶುಭಸಂಖ್ಯೆ: 5

ತುಲಾ: ಶುಕ್ರ ಕೇತುವಿನ ಸೆರೆ ಆಗಿದ್ದರೂ ಅನೇಕ ವಿಘ್ನಗಳನ್ನು ನಿವಾರಿಸಿ ಭಾಗ್ಯಕ್ಕೆ ಸಾರ್ಥಕತೆ ತರುವ ಶ್ರೀ ದುರ್ಗೆಯ ಅನುಗ್ರಹ ನಿಮಗೆ ವಿಪುಲವಾಗಿದೆ. ನರಸಿಂಹನನ್ನೂ ಆರಾಧಿಸಿ. ಹಿರಣ್ಯಕಶಿಪುವನ್ನು ನಿವಾರಿಸಿ ನಿಮಗೇ ನಿಮ್ಮ ಆತ್ಮಶಕ್ತಿಯ ಬಗೆಗೆ ನಂಬಿಕೆ ಚಿಮ್ಮಿಸುವ ಕೆಲಸವನ್ನು ಮಹಾವಿಷ್ಣು ಮಾಡುತ್ತಾನೆ. ಒಂದೇ ಒಂದು ತಡೆ ನಿಮ್ಮನ್ನು ಅದ್ಭುತವಾದ ಸಫಲತೆಯತ್ತ ಸಾಗಲು ಅವಕಾಶ ಮಾಡಿಕೊಡುತ್ತಿಲ್ಲ. ಹಿರಿಯರೊಬ್ಬರ ಸಹಾಯ ಪಡೆಯಲೇಬೇಕು. ಅವರು ಕುಡುಕರಾಗಿರಬಾರದು. ಕೆಟ್ಟ ಶಬ್ದಪ್ರಯೋಗ ಮಾಡುವವರೂ ಆಗಿರಬಾರದು.

ಶುಭದಿಕ್ಕು: ನೈಋತ್ಯ ಶುಭಸಂಖ್ಯೆ: 2

ವೃಶ್ಚಿಕನಿಮ್ಮನ್ನು ನೀವೇ ದಾರಿ ತಪ್ಪಿಸಿಕೊಳ್ಳುವ ಯೋಚನೆಗಳಲ್ಲಿ ಮುಳುಗಿಕೊಳ್ಳುತ್ತೀರಿ. ಎಲ್ಲವೂ ಇದೆಯಾದರೂ ಏನೂ ಇಲ್ಲ ಎಂಬ ರೀತಿಯಲ್ಲಿ ಪರದಾಟಗಳು ಸೃಷ್ಟಿಯಾಗುತ್ತವೆ. ಎಲ್ಲರೂ, ಎಲ್ಲವೂ ಅಡೆತಡೆಗಳು ಎಂದು ವ್ಯರ್ಥಾಲಾಪ ನಡೆಸುತ್ತಿದ್ದೀರಿ. ಅಪ್ರತಿಮ ಕೌಶಲ್ಯ ಹೊಂದಿರುವ ನಿಮ್ಮ ಪಾಲಿಗೆ ಈಗ ಚಿತ್ತಶಾಂತಿಯಿಂದ ಯೋಚಿಸುವ ಶಕ್ತಿ ಅತ್ಯವಶ್ಯ. ಏಕಕಾಲದಲ್ಲಿ ಎರಡು ದೋಣಿಗಳ ಮೇಲೆ ಕಾಲಿಡುವ ಆತ್ಮನಾಶಕ ವಿಚಾರ, ಕಾಯಕಗಳನ್ನು ಕೈಬಿಡಿ. ರವಿಬುಧರು ಯೋಚನಾ ಶಕ್ತಿ ನೀಡಿದ್ದಾರೆ. ಸೂಕ್ತ ದಾರಿ ಹುಡುಕಿಕೊಳ್ಳಿ. ಗುರುರಾಯರನ್ನು ಸ್ತುತಿಸಿ.

ಶುಭದಿಕ್ಕು: ಈಶಾನ್ಯ ಶುಭಸಂಖ್ಯೆ: 7

ಧನಸ್ಸುನಿಮಗೀಗ ಸಾಡೇಸಾತಿಯ ದಿನಗಳಾದರೂ ಸುಬ್ರಹ್ಮಣ್ಯ ಮತ್ತು ಮಾರುತಿಯ ಧ್ಯಾನದೊಂದಿಗೆ ಮಹತ್ವದ ಕಾರ್ಯ ಯೋಜನೆಗಳನ್ನು ರೂಪಿಸಲು ತೊಡಗಿ. ಕುಜನು ಹಲವಾರು ಲಾಭಗಳನ್ನು ಇಚ್ಛಾಶಕ್ತಿಯ ಮೂಲಕ ರೂಪಿಸಲು ಕಟಿಬದ್ಧನಾಗಿರುವುದರಿಂದ ಇಚ್ಛಾಶಕ್ತಿ ಪ್ರದರ್ಶಿಸಿ. ಹೊಯ್ದಾಟದ ಬಿರುಗಾಳಿ ಕುಟುಂಬ, ಕೆಲಸದ ಸ್ಥಳಗಳನ್ನು ನಿಮ್ಮ ಪಾಲಿಗೆ ಅಭದ್ರಗೊಳಿಸಿದೆ. ವಿವೇಚನಾ ಶಕ್ತಿ, ತಂದೆ ತಾಯಿಗಳೊಂದಿಗೆ ಕಣ್ಣಲ್ಲಿ ಕಣ್ಣಿರಿಸಿ ಮಾತನಾಡುವ ನಿರ್ಧಾರ, ಬಾಳಸಂಗಾತಿಯ ಮಾತನ್ನು ಕೇಳಿಸಿಕೊಳ್ಳುವ ವ್ಯವಧಾನವಿರಲಿ. ಹನುಮಾನ್ ಚಾಲೀಸಾ ಓದಿ.

ಶುಭದಿಕ್ಕು: ದಕ್ಷಿಣ ಶುಭಸಂಖ್ಯೆ: 3

ಮಕರದಾರಿ ವಿಸ್ತಾರವಾಗಿದೆ ಎಂದು ನಿರಾಳರಾಗಿ ಮುಂದುವರಿಯುತ್ತಿರುವಾಗಲೇ ಸರ್ರನೆ ನೂರೆಂಟು ರೀತಿಯ ಕವಲು ದಾರಿಗಳು ತಂತಾನೆ ತೆರೆದು ನಿಲ್ಲುತ್ತಿವೆ. ಕಕ್ಕಾಬಿಕ್ಕಿಯಾಗುತ್ತಿದ್ದೀರಿ. ಭಯದ ಸ್ಥಿತಿ, ಎಲ್ಲೋ ಗಹಗಹಿಸಿ ನಗುವ ಪಿಶಾಚ ಶಕ್ತಿ ಉಸಿರುಗಟ್ಟಿಸುತ್ತಿರುವ ಸ್ಥಿತಿಯನ್ನು ಎದುರಿಸುತ್ತಿದ್ದೀರಿ. ಇಂದ್ರಜಾಲ, ಮಹೇಂದ್ರ ಜಾಲಗಳನ್ನು ಹಿರಿಯರು ನಂಬಿದ್ದರು. ಹೌದು, ಏನೋ ಒಂದು ಮಾಯೆ ಹಿಂಸಿಸುತ್ತದೆ. ಆದರೆ ನಿಮ್ಮೊಳಗಿರುವ ಮಾತೃಶಕ್ತಿಯನ್ನು ಜಾಗೃತಗೊಳಿಸಿ. ತ್ರಿಪುರ ಸುಂದರಿ ಕಾಪಾಡುತ್ತಾಳೆ. ತಾಯಿಯನ್ನು ಸ್ತುತಿಸಿ.

ಶುಭದಿಕ್ಕು: ಪಶ್ಚಿಮ ಶುಭಸಂಖ್ಯೆ: 9

ಕುಂಭದಿಕ್ಕು ಕಾಣದ ಪಾರಿವಾಳದಂತೆ ಅಲ್ಲದಿದ್ದರೂ ಕೇತುಗ್ರಸ್ತನಾದ ಶನೈಶ್ಚರನಿಂದಾಗಿ ಸರಾಗವಾಗಿ ನಿಂತಿದ್ದ ಜಾಗೆಯೇ ಬಾಯ್ತೆರೆಯುತ್ತಿದೆಯೇನೋ ಎಂಬ ಅನುಭವ ನಿಮಗೆ ಸುತ್ತುವರಿಯುತ್ತಿದೆ. ದೃಢವಾದ ಸಂಕಲ್ಪ ಹೊತ್ತವರು ಅಧೀರರಾಗುತ್ತಿದ್ದೀರಿ. ಮಕ್ಕಳ ಬಗೆಗೆ ಯೋಚನೆ ಮಾಡುವುದಾಗಿದೆ ನಿಮ್ಮ ಸದ್ಯದ ಸ್ಥಿತಿ. ಬುದ್ಧಿಮತ್ತೆ ಸಾಕಾಗದೇನೋ ಎನ್ನುವ ಚಿಂತೆ ಗೆದ್ದಿಲಿನಂತೆ ತಿನ್ನಬಹುದು. ಮಮತಾಮಯಿಯಾದ ಶಕ್ತಿಯನ್ನು ಗುರುತಿಸಿಕೊಳ್ಳುವ ಶಕ್ತಿ ಸಂಪಾದಿಸಿಕೊಳ್ಳಬೇಕು. ಕಾಮ, ಕ್ರೋಧ, ಲೋಭ, ಮೋಹ, ಮದ ಮುಖ್ಯವಾಗಿ ಮಾತ್ಸರ್ಯ ನಿಯಂತ್ರಿಸಿ.

ಶುಭದಿಕ್ಕು: ವಾಯವ್ಯ ಶುಭಸಂಖ್ಯೆ: 1

ಮೀನನಿಮಗೆ ಬುದ್ಧಿಬಲ, ಜ್ಞಾನಸಮೃದ್ಧಿ ಎಂಥಾ ಸಂದರ್ಭಗಳನ್ನೂ ತಡೆದು ನಿಲ್ಲಿಸುವ ಎದೆಗಾರಿಕೆ ಇದೆ. ತಂತ್ರಗಳನ್ನು ನಿಮ್ಮ ವಿರುದ್ಧವಾಗಿಯೇ ನಡೆಸುತ್ತಿರುವ, ಆಪ್ತ ವಲಯದ ಜನರನ್ನು ಗುರುತಿಸಿ ತಕ್ಷಣದಿಂದಲೇ ಅವರನ್ನು ನಿಗ್ರಹಿಸಿ. ಬಂಗಾರದ ತಟ್ಟೆ ಎದುರಿಗಿದ್ದರೂ ಸುಹಾಸಕರ ಭೋಜನ ಆಸ್ವಾದಿಸಲಾಗದ ಆರೋಗ್ಯ ಎದುರಾಗಬಹುದು. ಎದುರಾಗಿದ್ದರೆ ವೈದ್ಯರನ್ನು ಭೇಟಿ ಮಾಡಿ. ಪರಮಚೇತೋಹಾರಿಯಾದ ಪರಾತ್ಪರ ಶಕ್ತಿಯ ಅನುಗ್ರಹದ ಬಗ್ಗೆ ಇಷ್ಟದೇವತೆಯನ್ನು ಪ್ರಾರ್ಥಿಸಿ. ಯಕ್ಷ, ರಾಕ್ಷಸ, ಗಂಧರ್ವ ಶಕ್ತಿಗಳು ಕಾಡದಂತೆ ಭೈರವನನ್ನು ಸ್ತುತಿಸಿ.

ಶುಭದಿಕ್ಕು: ಉತ್ತರ ಶುಭಸಂಖ್ಯೆ: 4 

ವಿಡಿಯೋ ನ್ಯೂಸ್

VIDEO: ಮಾವುತನ ಊಟದ ಎಲೆಯಿಂದ ತುತ್ತು ಅನ್ನ ತಿಂದು, ನೆಟ್ಟಿಗರ...

ತಿರುವನಂತಪುರ: ಆನೆಗಳ ಆಟ, ದಾಳಿ, ಮರ ಹತ್ತುವುದು ಹೀಗೆ ಹಲವು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿವೆ. ಆದರೆ ಈಗ ವೈರಲ್​ ಆಗಿರುವ ಆನೆಯ ವಿಡಿಯೋ ಸಾಮಾಜಿಕ ಬಳಕೆದಾರರ ಮನಸ್ಸು ಗೆದ್ದಿದೆ. ಹಸಿದ...

VIDEO| ರಾಷ್ಟ್ರಪತಿ ರಾಮನಾಥ್​ ಕೋವಿಂದ್​ರಿಂದ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ...

ನವದೆಹಲಿ: ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಿದರು. ವಿವಿಧ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿದ...

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...

VIDEO| ನಟಿಯಾಗಿರೋ ಆಲಿಯಾ ಇದೀಗ ಶೆಫ್​: ಬಾಲಿವುಡ್​ ಬ್ಯೂಟಿಯ ಅಡುಗೆ...

ಮುಂಬೈ: ಬಾಲಿವುಡ್​ ಬ್ಯೂಟಿ ಆಲಿಯಾ ಭಟ್ ನಟನೆ ಜತೆಗೆ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ನಟಿಯಾಗಿರುವ ಆಲಿಯಾ ಇದೀಗ ಶೆಫ್ ಆಗಿದ್ದು, ಹೊಸ ಬಗೆಯ ಅಡುಗೆ ಪರಿಚಯಿಸಲು ಮುಂದಾಗಿದ್ದಾರೆ. ಯೂಟ್ಯೂಬ್​ನಲ್ಲಿ ಆಲಿಯಾ ಭಟ್...

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...