More

    ಹೋರಾಟದ ಸ್ಥಳದಲ್ಲೇ ರೈತ ಸಾವು ಕೋಡ್ಲಾ-ಬೆನಕನಳ್ಳಿಯಲ್ಲಿ ಬಿಗುವಿನ ವಾತಾವರಣ

    ಕಲಬುರಗಿ : ಸೇಡಂ ತಾಲೂಕಿನ ಕೋಡ್ಲಾ-ಬೆನಕನಹಳ್ಳಿ ಗ್ರಾಮದ ಶ್ರೀ ಸಿಮೆಂಟ್ ಕಂಪನಿಯ ವಿರುದ್ದ ತಮ್ಮ‌ ಜಮೀನುಗಳಿಗೆ ಬೆಂಬಲ ಬೆಲೆ ಘೋಷಿಸುವಂತೆ ರೈತರು ಕೈಗೊಂಡ ಅನಿರ್ದಿಷ್ಟಾವಧಿ ಧರಣಿ ಸ್ಥಳದಲ್ಲೇ ರೈತನೋರ್ವ ಭಾನುವಾರ ಮೃತಪಟ್ಟಿದ್ದಾರೆ. ಇದರಿಂದಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿದೆ.
    ದೇವಪ್ಪ ಮಲ್ಲಣ್ಣ ಜೋಗಿ (55) ಮೃತಪಟ್ಟ ರೈತ.
    183 ದಿನಗಳಿಂದ ಶ್ರೀಸಿಮೆಂಟ್ ಕಾರ್ಖಾನೆ ಎದುರು ನೂರಾರು ಜನ ಕೋಡ್ಲಾ, ಬೆನಕನಹಳ್ಳಿ, ಡೋಣಗಾಂವ, ರಾಜೋಳ, ಹುಳಗೋಳ ರೈತರು ಪ್ರತಿಭಟನೆ ಕೈಗೊಂಡಿದ್ದಾರೆ.
    ತಮ್ಮ ಜಮೀನುಗಳಿಗೆ ಬೆಂಬಲ ಬೆಲೆ ನೀಡಿಲ್ಲ. ಭೂಸ್ವಾಧಿನ ಕಾಯ್ದೆ ಪ್ರಕಾರ ಜಮೀನಿಗೆ ಬೆಲೆ ನೀಡಿಲ್ಲ. ನೌಕರಿ ನೀಡಿಲ್ಲ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ್ದರು.
    ರವಿವಾರ ಬೆಳಗ್ಗೆ ಪ್ರತಿಭಟನಾ ಟೆಂಟನಲ್ಲೇ ರೈತನೋರ್ವ ಮೃತಪಟ್ಟಿದ್ದಾನೆ. ಸ್ಥಿತಿಯಲ್ಲಿ ಇದರಿಂದಾಗಿ ರೈತರು ಕಾರ್ಖಾನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts