More

    ಹೊಳೆಆಲೂರಿಗೆ ಹರಿಯಲಿದೆ ಭಕ್ತರ ದಂಡು

    ಹೊಳೆಆಲೂರ: 2009ರಲ್ಲಿ ಸುರಿದ ಕುಂಭದ್ರೋಣ ಮಳೆಯಿಂದ ಈ ಭಾಗದಲ್ಲಿ ಮಲಪ್ರಭೆ ಮೈದುಂಬಿ ಹರಿದಿದ್ದಳು. ಕಳೆದ ಎಂಟು ವರ್ಷಗಳಿಂದ ನೀರಿನ ಹರಿವು ಕಡಿಮೆಯಾಗುತ್ತ ಬಂದು ಪವಿತ್ರ ಸಂಕ್ರಮಣ ಹಬ್ಬದ ಸ್ನಾನಕ್ಕೆ ಮಾತ್ರವಲ್ಲ, ಆದರೆ, ಈ ಬಾರಿ ಮಲಪ್ರಭೆಯ ಒಡಲು ಸಂಪೂರ್ಣ ಭರ್ತಿಯಾಗಿದೆ. ಕಳೆದ ಏಳೆಂಟು ವರ್ಷಗಳಿಂದ ಮಲಪ್ರಭೆಯ ನದಿ ಮೂಲ ಬತ್ತಿ ಹೋಗಿ ಜನರಿಗೆ ಕುಡಿಯುವ ನೀರಿಗೆ ತತ್ವಾರ ಸೃಷ್ಟಿಯಾಗಿತ್ತು. ಆದರೆ, ಈ ಬಾರಿ ಮಲಪ್ರಭೆ ತುಂಬಿ ಹರಿಯುತ್ತಿದ್ದು, ಹೊಳೆಆಲೂರಿನ ಸುತ್ತಲಿನ 30ರಿಂದ 35 ಗ್ರಾಮಗಳ ಜನರು ಮಾತ್ರವಲ್ಲದೆ, ರೋಣ, ಗದಗ, ಗಜೇಂದ್ರಗಡ, ನರೇಗಲ್ಲ ಮತ್ತಿತರ ಭಾಗದಿಂದಲೂ ಜನರು ಪುಣ್ಯ ಸ್ನಾನ ಮಾಡಲು ಇಲ್ಲಿಗೆ ಆಗಮಿಸಲಿದ್ದಾರೆ.

    ಸಂಕ್ರಮಣ ಬಂದರೆ ಸಾಕು ದೂರದ ಊರುಗಳಿಂದ ತಮ್ಮ ಎತ್ತಿನ ಬಂಡಿ, ಟ್ರ್ಯಾಕ್ಟರ್, ಟಂಟಂ, ದ್ವಿಚಕ್ರ ವಾಹನಗಳಲ್ಲಿ ತಂಡೋಪತಂಡವಾಗಿ ಕುಟುಂಬದ ಸದಸ್ಯರೊಂದಿಗೆ ಜನರು ಆಗಮಿಸುತ್ತಾರೆ. ಹೊಳೆಆಲೂರ ನದಿ ತೀರದಲ್ಲಿರುವ ಪಾರ್ವತಿ ಪರಮೇಶ್ವರ, ಯಚ್ಚರೇಶ್ವರ, ಕಲ್ಮೇಶ್ವರ, ಮೆಣಸಗಿಯ ಲಿಂಗಬಸವೇಶ್ವರ, ಹೊಳೆಹಡಗಲಿಯ ಚಂದ್ರಮೌಳೇಶ್ವರ ದೇವಸ್ಥಾನಗಳು ಭಕ್ತರಿಂದ ಕಂಗೊಳಿಸುತ್ತಿದ್ದವು. ಇಲ್ಲಿಗೆ ಆಗಮಿಸುವ ಭಕ್ತರು ವಿಶಾಲವಾದ ನದಿಯಲ್ಲಿ ಸ್ನಾನಗೈದು ಸಾಮೂಹಿಕ ಭೋಜನ ಮುಗಿಸಿ ಪ್ರಸಿದ್ಧ ಬಾದಾಮಿ ಬನಶಂಕರಿ, ಸವದತ್ತಿಯ ಯಲ್ಲಮ್ಮನಗುಡ್ಡದತ್ತ ಪ್ರಯಾಣ ಬೆಳೆಸುತ್ತಿದ್ದರು. ಆದರೆ, ಎಂಟು ವರ್ಷದಿಂದ ನದಿಯಲ್ಲಿ ನೀರಿಲ್ಲದೆ ಬಿಕೋ ಎನ್ನುತ್ತಿದ್ದರಿಂದ ಇಲ್ಲಿನ ಕಳೆ ಮಾಯವಾಗಿತ್ತು. ಆದರೆ ಈ ಬಾರಿ ಭರಪೂರ ಮಳೆ ಸುರಿದು ನದಿ ಹಳ್ಳ ಕೊಳ್ಳಗಳಲ್ಲಿ ನೀರಿನ ಮೂಲ ಸೆಳೆವು ಹೆಚ್ಚಾಗಿದೆ.

    ಈ ಬಾರಿ ಮಲಪ್ರಭೆ ಮೈದುಂಬಿ ಹರಿಯುತ್ತಿರುವುದರಿಂದ ಸುತ್ತಲಿನ ಗ್ರಾಮಗಳು ಮಾತ್ರವಲ್ಲ ಗದಗ, ಲಕ್ಷ್ಮೇಶ್ವರ, ಬಾದಾಮಿ, ಗುಳೇದಗುಡ್ಡ ಭಾಗದ ಜನರಿಗೆ ಹೊಳೆಆಲೂರಿಗೆ ಬರಲು ರೈಲು ಗಾಡಿ ಅನುಕೂಲವಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿದ್ದಾರೆ. ನಮಗೂ ಕೂಡ ಬಹಳಷ್ಟು ಜನರು ದೂರವಾಣಿ ಕರೆ ಮಾಡಿ ನದಿಯಲ್ಲಿ ನೀರು ಇರುವ ವಿಚಾರಿಸಿದ್ದಾರೆ.

    | ಬೆನಹಾಳದ ಸದಾಶಿವ ಮಹಾಂತ ಶಿವಾಚಾರ್ಯರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts