More

    ಹೊರಗಿನ ವ್ಯಕ್ತಿಗಳಿಗೆ ಮಣೆ ಹಾಕದಿರಿ

    ವಿಜಯವಾಣಿ ಸುದ್ದಿಜಾಲ ಕೋಲಾರ
    ೇತ್ರದಲ್ಲಿ ಇವತ್ತು ಅಳಿವು ಉಳಿವಿನ ಪ್ರಶ್ನೆಯಾಗಿದ್ದು, ಹೊರಗಿನ ವ್ಯಕ್ತಿಗಳು ಆಳ್ವಿಕೆ ಮಾಡಲು ಬಂದಿದ್ದಾರೆ. ಕೈಮುಗಿದು ಕೇಳಿಕೊಳ್ಳುತ್ತೇನೆ, ಪರಕೀಯರಿಗೆ ಈ ೇತ್ರವನ್ನು ಆಳ್ವಿಕೆ ಮಾಡಲು ಅವಕಾಶ ಕೊಡಬೇಡಿ ಎಂದು ಜೆಡಿಎಸ್​ ಅಭ್ಯರ್ಥಿ ಸಿಎಂಆರ್​ ಶ್ರೀನಾಥ್​ ಮನವಿ ಮಾಡಿಕೊಂಡರು.


    ತಾಲೂಕಿನ ಮಾರ್ಜೇನಹಳ್ಳಿ ಗ್ರಾಪಂ ವ್ಯಾಪ್ತಿಯ ಕಾಮಧೇನಹಳ್ಳಿಯಲ್ಲಿ ಶನಿವಾರ ಪ್ರಚಾರದಲ್ಲಿ ಮಾತನಾಡಿದರು. ಹಿಂದಿನಿಂದಲೂ ಸ್ವಾಭಿಮಾನದ ೇತ್ರವಾಗಿದ್ದ ಕೋಲಾರಕ್ಕೆ ನಮ್ಮ ಸ್ವಯಂಕೃತ ಅಪರಾಧದಿಂದಾಗಿ ಹೊರಗಿನ ವ್ಯಕ್ತಿಗಳು ರಾಜಕಾರಣ ಮಾಡಲು ಬಂದಿದ್ದಾರೆ. ದಯವಿಟ್ಟು ಆ ವ್ಯಕ್ತಿಗಳಿಗೆ ಮಣೆ ಹಾಕಬೇಡಿ. ಸ್ವಾಭಿಮಾನವಿಲ್ಲದಿದ್ದರೆ ಮುಂದೊಂದು ದಿನ ಪಶ್ಚಾತ್ತಾಪ ಪಡಬೇಕಾಗುತ್ತದೆ ಎಂದರು.


    ರಾಷ್ಟ್ರೀಯ ಪದ ಅಭ್ಯರ್ಥಿ ಹೊರಗಿನಿಂದ ಜನರನ್ನು ಕರೆತಂದು ಶಕ್ತಿ ಪ್ರದರ್ಶನ ಮಾಡಲು ಹೊರಟಿದ್ದಾರೆ. ನನ್ನ ೇತ್ರದ ಸ್ವಾಭಿಮಾನಿ ಜನರೇ ನನಗೆ ಬೆಂಬಲವಾಗಿ ನಿಂತಿದ್ದಾರೆ. ನಾನು ನಿಮ್ಮ ಗ್ರಾಮಗಳ ಸಮಸ್ಯೆ ಗುರುಸಿದ್ದು, ಗೆದ್ದ ನಂತರ ಆದ್ಯತೆ ಮೇರೆಗೆ ಅಭಿವೃದ್ಧಿ ಕಾರ್ಯಗಳನ್ನು ತೆಗೆದುಕೊಳ್ಳಲು ಉದ್ದೇಶಿಸಿದ್ದೇನೆ ಎಂದರು.


    ಜೆಡಿಎಸ್​ ಮುಖಂಡ ಡಾ.ರಾಜೇಂದ್ರ ಪ್ರಸಾದ್​ ಮಾತನಾಡಿ, ಇವತ್ತು ಒಂದು ದಿನ ಯೋಚನೆ ಮಾಡಿ ಮತ ಹಾಕಿದರೆ ಐದು ವರ್ಷ ೇತ್ರ ಅಭಿವೃದ್ಧಿಯಾಗುತ್ತದೆ. ಇವತ್ತು ನಮ್ಮ ಮುಂದೆ ಸ್ವಾಭಿಮಾನ ಕೋಲಾರ ಕಟ್ಟುವ ಕನಸನ್ನು ಕಾಣುವ ಸಿಎಂಆರ್​ ಶ್ರೀನಾಥ್​ ಇದ್ದು, ಒಂದು ಬಾರಿ ಅವರಿಗೆ ಕೊಟ್ಟು ನೋಡಿ, ರಾಜ್ಯದ ಮಾದರಿ ೇತ್ರವಾಗಿ ಮಾಡಲಿದ್ದಾರೆ ಎಂದರು.
    ಒಕ್ಕಲಿಗರ ಸಂ ಮಾಜಿ ನಿರ್ದೇಶಕ ವಕ್ಕಲೇರಿ ಇ.ರಾಮಚಂದ್ರ ಮಾತನಾಡಿ, ರಾಜ್ಯದಲ್ಲಿ ಜೆಡಿಎಸ್​ ಅಧಿಕಾರಕ್ಕೆ ಬಂದರೆ ಮಾತ್ರವೇ ರೈತರು ಉಳಿಯಲು ಸಾಧ್ಯ. ಕಾಂಗ್ರೆಸ್​ ಮತ್ತು ಬಿಜೆಪಿ ರೈತರು, ಬಡವರ ವಿರೋಧಿ ನೀತಿ ಜಾರಿಗೆ ತರುವ ಮೂಲಕ ಸಾಮಾನ್ಯ ವ್ಯಕ್ತಿಗಳು ಬದುಕುವ ವಾತಾವರಣ ಇಲ್ಲವಾಗಿದೆ ಎಂದರು.


    ಜೆಡಿಎಸ್​ ತಾಲೂಕು ಅಧ್ಯ ಬಾಬು ಮೌನಿ, ಡಿಸಿಸಿ ಬ್ಯಾಂಕ್​ ನಿರ್ದೇಶಕ ಯಲವಾರ ಸೊಣ್ಣೇಗೌಡ, ಜಿಪಂ ಮಾಜಿ ಸದಸ್ಯ ಬಾಲಾಜಿ ಚನ್ನಯ್ಯ, ಮುಖಂಡರಾದ ಜೆಟ್​ ಅಶೋಕ್​, ಎಪಿಎಂಸಿ ಪುಟ್ಟುರಾಜು, ದಲಿತ ನಾರಾಯಣಸ್ವಾಮಿ, ಮತ್ತಿಕುಂಟೆ ಕೃಷ್ಣ, ಸಂತೋಷ್​, ಚಂಬೆ ರಾಜೇಶ್​, ಮುನೇಗೌಡ, ಮೈಲಾರಪ್ಪ, ಅರುಣ್​ ಗೌಡ, ರಾಮಕೃಷ್ಣೇಗೌಡ ಮುಂತಾದವರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts