More

    ಹೊಂಗ್ಯಮ್ಮ, ಮಲ್ಲಿಗೆಮ್ಮ ರಥೋತ್ಸವ ಸಂಭ್ರಮ

    ಅರಸೀಕೆರೆ: ತಾಲೂಕಿನ ಬಾಣಾವರ ಹೋಬಳಿ ಬೈರಾಂಬುಧಿ ಗ್ರಾಮದಲ್ಲಿ ಹೊಂಗ್ಯಮ್ಮ, ಮಲ್ಲಿಗೆಮ್ಮ ದೇವಿಯರ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಶುಕ್ರವಾರ ಬೆಳಗ್ಗೆ ನೆರವೇರಿತು.


    ಗುರುವಾರ ರಾತ್ರಿ ತೇರು ಬೀದಿ ಆವರಣದಲ್ಲಿರುವ ಹೊಂಗ್ಯಮ್ಮ ದೇವಿಯವರ ಮೂಲಸ್ಥಾನದಲ್ಲಿ ಮಲ್ಲಿಗೆಮ್ಮ, ಹೊಂಗ್ಯಮ್ಮನವರ ಕೆಂಡ, ಸಿಡಿ ಸೇವೆ, ಚಲುವರಾಯಸ್ವಾಮಿಯ ಮುತ್ತಿನ ಪಲ್ಲಕ್ಕಿ ಉತ್ಸವ, ಜರುಗಿದವು. ಶುಕ್ರವಾರ ಬೆಳಗ್ಗೆ ಸೂರ್ಯೋದಯಕ್ಕೆ ಸರಿಯಾಗಿ ಚಲುವರಾಯಸ್ವಾಮಿ ಹಾಗೂ ಧೂತರಾಯಸ್ವಾಮಿ ರಥಕ್ಕೆ ವಿಶೇಷ ಪೂಜೆ ಸಲ್ಲಿಸಿ ಈಡುಗಾಯಿ ಹೊಡೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ಸಿಕ್ಕಿತು.


    ಜಾತ್ರೆಯಲ್ಲಿ ಭಾಗವಹಿಸಿದ್ದ ಭಕ್ತರು ರಥಕ್ಕೆ ಬಾಳೆಹಣ್ಣು, ದವನ ಎಸೆದರು. ಸಂಕೋಡನಹಳ್ಳಿ, ಕಲ್ಲನಾಯ್ಕನಹಳ್ಳಿ, ಬೆಟ್ಟದಪುರ, ಹಿರಿಯೂರು, ಭೈರಾಂಬುಧಿ, ಕಸ್ತೂರಿಕೊಪ್ಪಲು, ಬಿಸಲೇಹಳ್ಳಿ, ಚಿಕ್ಕೂರು, ಮಾದನಳ್ಳಿ, ಸಿಂಗನಳ್ಳಿ, ಮಾವುತನಳ್ಳಿ ಸೇರಿದಂತೆ ಹತ್ತಾರು ಗ್ರಾಮಗಳ ಜನರು ಪಾಲ್ಗೊಂಡಿದ್ದರು. ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು. ಕಳೆದ ಭಾನುವಾರದಿಂದ ಆರಂಭಗೊಂಡಿದ್ದ ರಥೋತ್ಸವ ಶುಕ್ರವಾರ ರಾತ್ರಿ ಧೂಳುಮರಿ ಹೊಡೆಯುವುದರೊಂದಿಗೆ ಸಂಪನ್ನಗೊಂಡಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts