More

    ಹಿಂದು ಮಹಾಗಣಪತಿ ವಿಸರ್ಜನೆ 13ರಂದು

    ಬಂಕಾಪುರ: ಪಟ್ಟಣದ ನೆಹರು ಗಾರ್ಡನ್​ನಲ್ಲಿ ಪ್ರತಿಷ್ಠಾಪಿಸಲಾಗಿರುವ ಹಿಂದು ಮಹಾಗಣಪತಿಯನ್ನು ಸೆ. 13ರಂದು ಭವ್ಯ ಮೆರವಣಿಗೆಯೊಂದಿಗೆ ವಿಸರ್ಜಸಲಾಗುವುದು ಎಂದು ಜಿಲ್ಲಾ ಆರ್​ಎಸ್​ಎಸ್ ಸೇವಾ ಪ್ರಮುಖ ಗಂಗಾಧರ ಮಾಮ್ಲೇಪಟ್ಟಣಶೆಟ್ಟರ ಹೇಳಿದರು.

    ಪಟ್ಟಣದ ಪೊಲೀಸ್ ಠಾಣೆಯಲ್ಲಿ ಬುಧವಾರ ಆಯೋಜಿಸಿದ್ದ ಹಿಂದು ಮಹಾಗಣಪತಿ ವಿಸರ್ಜನೆಯ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

    ಆ. 22ರ ಗಣೇಶ ಚತುರ್ಥಿ ದಿನದಂದು ಒಂದು ಕೋಮಿನ ಜನರು ಹರಕೆ ತೀರಿಸುವ ನೆಪದಲ್ಲಿ ಟೋಕರ್ ಶಾವಲಿ ದರ್ಗಾಕ್ಕೆ ತಗಡಿನ ಮೇಲ್ಛಾವಣಿ ನಿರ್ಮಾಣ ಮಾಡಿ ನ್ಯಾಯಾಲಯದ ಆದೇಶದ ಉಲ್ಲಂಘನೆ ಮಾಡಿದ್ದಲ್ಲದೆ, ಶಾಂತಿ ಕದಡುವ ಹುನ್ನಾರ ಮಾಡಿದ್ದರು. ಎರಡೂ ಸಮಾಜದ ಮುಖಂಡರ ಸಭೆಯ ನಡೆಸಿದ ನಂತರ ಗಣೇಶ ವಿಸರ್ಜನೆ ಮಾಡುವುದಾಗಿ ಈ ಮೊದಲೇ ಹೇಳಿದ್ದೇವೆ. ಆದರೆ, ಪೊಲೀಸರು ಸಭೆ ಕರೆಯುವಲ್ಲಿ ವಿಳಂಬ ಮಾಡಿದ್ದಾರೆ. ಆದ್ದರಿಂದ ಗಣೇಶ ವಿಸರ್ಜನೆಯ ತಯಾರಿ ಮಾಡಲು ಎರಡು ದಿನಗಳ ಕಾಲಾವಕಾಶ ಬೇಕು. ಆದ್ದರಿಂದ ಸೆ. 11ರ ಬದಲಾಗಿ ಸೆ. 13ರಂದು ಗಣಪತಿ ವಿಸರ್ಜನೆ ಮಾಡಲು ತೀರ್ವನಿಸಿದ್ದೇವೆ. ವಿಸರ್ಜನೆ ಕಾಲಕ್ಕೆ ನಮಗೆ ಡಿಜೆ ಹಚ್ಚಲು ಅನುಮತಿ ಜತೆಗೆ ವಿಸರ್ಜನೆಗೆ ಟ್ರ್ಯಾಕ್ಟರ್ ವ್ಯವಸ್ಥೆಗೆ ಅನುಮತಿ ನೀಡಬೇಕು ಎಂದು ವಿನಂತಿಸಿದರು.

    ಪಟ್ಟಣದ ಅಂಜುಮನ್ ಸಂಸ್ಥೆ ಅಧ್ಯಕ್ಷ ಮಹಮ್ಮದಹುಸೇನ್ ಖತೀಬ ಮಾತನಾಡಿ, ಹಬ್ಬದ ದಿನದಂದು ನಡೆದ ಘಟನೆ ಬಗ್ಗೆ ಪೊಲೀಸ್ ಇಲಾಖೆ ಸಮಗ್ರ ತನಿಖೆ ಮಾಡಿ ಅವರಿಗೆ ಶಿಕ್ಷೆ ನೀಡಲಿ. ಇನ್ನು ಮುಂದೆ ಇಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳುತ್ತೇವೆ. ಶಾಂತಿಯುತ ಗಣೇಶ ವಿಸರ್ಜನೆಗೆ ಮುಸ್ಲಿಂ ಸಮುದಾಯ ಸಂಪೂರ್ಣ ಸಹಕಾರ ನೀಡುತ್ತದೆ ಎಂದರು.

    ಎಎಸ್​ಪಿ ಮಲ್ಲಿಕಾರ್ಜುನ ಬಾಲದಂಡಿ, ಸಿಪಿಐ ಬಸವರಾಜ ಹಳಬಣ್ಣವರ, ಪಿಎಸ್​ಐ ಸಂತೋಷ ಪಾಟೀಲ, ಮಹಮ್ಮದಗೌಸ್ ಗುಲ್ಮಿ, ತಹಮೀದ ಖಾಜಿ, ಸೋಮಶೇಖರ ಗೌರಿಮಠ, ಈರಣ್ಣ ಬಳಿಗಾರ, ಶಿವಾನಂದ ದೇವಸೂರ, ಮುತ್ತುರಾಜ ಕುರಿ, ಗುಡ್ಡಪ್ಪ ಮತ್ತೂರ, ಹೊನ್ನಪ್ಪ ಹೂಗಾರ ಮತ್ತಿತರರು ಇದ್ದರು.

    ಈಗಾಗಲೇ ದರ್ಗಾ ವಿಷಯಕ್ಕೆ ಸಂಬಂಧಪಟ್ಟಂತೆ ಏಳು ಜನರನ್ನು ಬಂಧಿಸಲಾಗಿದೆ. ಇದಲ್ಲದೆ 68 ಜನರ ಮೇಲೆ ನಿಗಾ ಇಡಲಾಗಿದ್ದು, ತನಿಖೆ ಮುಂದುವರಿದಿದೆ. ಗಣೇಶ ವಿಸರ್ಜನೆಗೂ ಮತ್ತು ದರ್ಗಾ ಪ್ರಕರಣಕ್ಕೂ ತಳಕು ಹಾಕುವುದು ಬೇಡ. ಶಾಂತಿಯುತವಾಗಿ ಸರ್ಕಾರ ಆದೇಶದನ್ವಯ ವಿಸರ್ಜನೆಗೆ ಮುಂದಾಗಬೇಕು.
    | ಕೆ.ದೇವರಾಜ, ಪೊಲೀಸ್ ವರಿಷ್ಠಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts