More

    ಸ್ವಯಂವರ ಪಾರ್ವತಿ ಯಾಗಕ್ಕೆ ಉತ್ತಮ ಸ್ಪಂದನೆ

    ರಾಣೆಬೆನ್ನೂರ: ಕನ್ನಡ ಮ್ಯಾಟ್ರಿಮೋನಿ ಸಹಯೋಗದೊಂದಿಗೆ ಗುರುವಾರ ಆಯೋಜಿಸಿದ್ದ ‘ಸ್ವಯಂವರ ಪಾರ್ವತಿ ಯಾಗ’ಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಯಿತು. ರಾಣೆಬೆನ್ನೂರ ಸೇರಿ ವಿವಿಧ ಜಿಲ್ಲೆಗಳ ಸಾವಿರಾರು ಜನ ಪಾಲ್ಗೊಂಡು ದೈವಕೃಪೆಗೆ ಪಾತ್ರರಾದರು.

    ಇಲ್ಲಿಯ ಸಿದ್ಧೇಶ್ವರ ನಗರದ ಶ್ರೀ ಸಿದ್ಧೇಶ್ವರ ದೇವಸ್ಥಾನದಲ್ಲಿ ಆಯೋಜಿಸಿದ್ದ ಯಾಗದಲ್ಲಿ ಸಾವಿರಾರು ಭಾವಿ ವಧು-ವರರು ‘ಶೀಘ್ರಮೇವ ಕಲ್ಯಾಣ ಪ್ರಾಪ್ತಿರಸ್ತು’ ಎಂಬ ಆಶೀರ್ವಾದ ಪಡೆದು ಧನ್ಯತಾಭಾವದಿಂದ ಮರಳಿದರು.

    ಕನ್ನಡದ ನಂ. 1 ದಿನಪತ್ರಿಕೆ ವಿಜಯವಾಣಿ ಹಾಗೂ ದಿಗ್ವಿಜಯ ಸುದ್ದಿವಾಹಿನಿ ಆಯೋಜಿಸಿದ್ದ ಜನೋಪಯೋಗಿ ಯಾಗ, ವೈದಿಕರ ಪೌರೋಹಿತ್ಯದಲ್ಲಿ ವಿಧ್ಯುಕ್ತವಾಗಿ ಜರುಗಿತು. ಸಾವಿರಕ್ಕೂ ಹೆಚ್ಚು ವಿವಾಹಾಪೇಕ್ಷಿಗಳು ಹಾಗೂ ಅವರ ಪಾಲಕರು ಯಾಗದಲ್ಲಿ ಪಾಲ್ಗೊಂಡು ಕೃತಾರ್ಥರಾದರು.

    ಸ್ವಯಂವರ ಪಾರ್ವತಿ ಯಾಗದಿಂದ ಭಾವಿ ವಧು-ವರರ ವಿವಾಹಕ್ಕೆ ಇರುವ ತೊಂದರೆಗಳು ನಿವಾರಣೆಯಾಗುತ್ತವೆ ಎಂಬುದಕ್ಕೆ ಶಾಸ್ತ್ರಾಧಾರವಿದೆ. ಜಾತಕ ದೋಷ ಹಾಗೂ ಪೂರ್ವಜನ್ಮದ ಕರ್ಮಫಲದಿಂದ ಬಂದಿರುವ ದೋಷಗಳ ನಿವಾರಣೆಗಾಗಿ ನವಗ್ರಹ ಶಾಂತಿ ಪೂರ್ವಕ ಸ್ವಯಂವರ ಪಾರ್ವತಿ ಯಾಗ ಪ್ರಸಕ್ತ ಉಪಕ್ರಮವಾಗಿದೆ.

    ಈ ತೊಡುಕು ನಿವಾರಣೆಗೆ ರಾಘವೇಂದ್ರ ಎಸ್. ಕುಲಕರ್ಣಿ ಅವರ ಪುರೋಹಿತ್ವದಲ್ಲಿ ಪ್ರಲ್ಹಾದ ನರಗನಹಳ್ಳಿ, ಮುರುಳಿಧರ ಕೊಡಗನೂರ, ಪವನ ಮನಗೂಳಿ, ಎಸ್.ಪಿ. ಕುಲಕರ್ಣಿ ಅವರು ಸ್ವಯಂವರ ಪಾರ್ವತಿ ಯಾಗ ನಡೆಸಿಕೊಟ್ಟರು.

    ಬೆಳಗ್ಗೆ 9.30 ಗಂಟೆಗೆ ಪ್ರಥಮ ವಂದಿತ ಗಣೇಶನ ಪೂಜೆಯೊಂದಿಗೆ ಧಾರ್ವಿುಕ ವಿಧಿವಿಧಾನಗಳು ಆರಂಭಗೊಂಡವು. ಪುಣ್ಯಾಹ ವಾಚನ, ನವಗ್ರಹ ಶಾಂತಿ, ಸ್ವಯಂವರ ಪಾರ್ವತಿ ಮಂತ್ರ ಆವಾಹನೆ ಜರುಗಿತು. ಮಧ್ಯಾಹ್ನ 12.30ರ ಸುಮಾರಿಗೆ ಪೂರ್ಣಾಹುತಿ, ಮಹಾಮಂಗಳಾರತಿಯೊಂದಿಗೆ ಕಾರ್ಯಕ್ರಮ ಮಂಗಲಗೊಂಡಿತು. ಯಾಗದಲ್ಲಿ ಭಾಗಿಯಾದವರಿಗೆ ಪ್ರಸಾದ ಹಾಗೂ ಆಸಕ್ತರಿಗೆ ಕಂಕಣ ವಿತರಿಸಲಾಯಿತು.

    ಕಾರ್ಯಕ್ರಮದಲ್ಲಿ ಪ್ರಸರಣ ವಿಭಾಗದ ಮುಖ್ಯಸ್ಥ ಅಯ್ಯಣ್ಣ, ಸಿದ್ಧೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಚನ್ನಬಸಪ್ಪ ಗೌಡಶಿವಣ್ಣನವರ, ನಗರಸಭೆ ಆಯುಕ್ತ ಡಾ. ಎನ್. ಮಹಾಂತೇಶ, ಸದಸ್ಯ ಮಲ್ಲಣ್ಣ ಅಂಗಡಿ, ಕನ್ನಡ ಮ್ಯಾಟ್ರಿಮೋನಿಯ ಟೋನಿ ಥಾಮಸ್, ವಿವೇಕ ಬಿಣ್ಣಾಲ, ನವೀನ ಬಿ.ಸಿ. ಹಾಗೂ ತಂಡ, ವಿಜಯವಾಣಿ-ದಿಗ್ವಿಜಯ ಸಿಬ್ಬಂದಿ ಮತ್ತು ಸಾವಿರಾರು ಜನ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts