More

    ಸ್ವಂತ ಸೂರು ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ

    ಸಾಗರ: ಪ್ರತಿಯೊಬ್ಬರಿಗೂ ಒಂದು ಸೂರು ಕಟ್ಟಿಕೊಳ್ಳಬೇಕೆನ್ನುವ ಆಸೆ ಇರುತ್ತದೆ. ಇದನ್ನು ಈಡೇರಿಸುವ ನಿಟ್ಟಿನಲ್ಲಿ ಟೌನ್ ಹೌಸ್ ಬಿಲ್ಡಿಂಗ್ ಕೋ ಆಪರೇಟಿವ್ ಸೊಸೈಟಿ ಪ್ರಯತ್ನಿಸುತ್ತಿದೆ ಎಂದು ಅಧ್ಯಕ್ಷ ಎಸ್.ಬಿ.ರಘುನಾಥ್ ಹೇಳಿದರು.

    ಸಾಗರ ಟೌನ್ ಹೌಸ್ ಬಿಲ್ಡಿಂಗ್ ಸೊಸೈಟಿಗೆ ಗುರುವಾರ ನಡೆದ ನೂತನ ಪದಾಧಿಕಾರಿಗಳ ಚುನಾವಣೆಯಲ್ಲಿ ಸತತ 7ನೇ ಬಾರಿ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾದ ಹಿನ್ನೆಲೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

    ಗೃಹ ನಿರ್ಮಾಣ ಸಂಬಂಧ ತಾಲೂಕಿನಲ್ಲಿ ಇರುವುದೊಂದೇ ಸೊಸೈಟಿ. ಪ್ರತಿ ವರ್ಷ ಮನೆ ನಿರ್ವಿುಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಸದಸ್ಯತ್ವ ಹೆಚ್ಚಿಸುವುದು ಮತ್ತು ಅರ್ಹರಿಗೆ ಸಾಲಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಇನ್ನಷ್ಟು ಪರಿಣಾಮಕಾರಿ ಯೋಜನೆ ರೂಪಿಸಲಾಗುತ್ತದೆ. ಷೇರುದಾರರ ಸಹಕಾರ ಮತ್ತು ಅವರೊಂದಿಗೆ ರ್ಚಚಿಸಿ ಹೊಸ ಯೋಜನೆಗಳನ್ನು ರೂಪಿಸಲಾಗುವುದು ಎಂದರು.

    ಚುನಾವಣಾಧಿಕಾರಿ ವಿ.ಟಿ.ಸ್ವಾಮಿ ಮಾತನಾಡಿ, ಸಹಕಾರಿ ಸಂಸ್ಥೆ ಬೆಳೆಯುತ್ತಿರುವುದು ಷೇರುದಾರರ ವಿಶ್ವಾಸ ಮತ್ತು ಆಡಳಿತ ಮಂಡಳಿಯ ಪಾರದರ್ಶಕ ಆಡಳಿತ ವ್ಯವಸ್ಥೆಯಿಂದ. ಸೊಸೈಟಿಯ ಆಡಳಿತ ಮಂಡಳಿಗೆ ಅವಿರೋಧ ಆಯ್ಕೆ ನಡೆಸುವ ಮೂಲಕ ಸಂಸ್ಥೆಗೆ ಆಗುತ್ತಿದ್ದ ಆರ್ಥಿಕ ಹೊರೆ ತಪ್ಪಿಸಿರುವುದು ಅಭಿನಂದನಾರ್ಹ ಎಂದರು.

    ಉಪಾಧ್ಯಕ್ಷರಾಗಿ ಎನ್.ಬಸವರಾಜ್ ಅವರನ್ನು ಅವಿರೋಧ ಆಯ್ಕೆ ಮಾಡಲಾಯಿತು. ಆಡಳಿತ ಮಂಡಳಿ ನಿರ್ದೇಶಕರಾದ ಡಾ. ಬಿ.ಎಸ್.ಪ್ರಭಾಕರ್, ಕೆ.ಎಸ್.ಶ್ರೀಧರ್, ಸುಜಾತಾ ಶಂಕರ್, ಸತೀಶ್ ಕೆ.ಮೊಗವೀರ, ಎನ್.ಎಸ್.ಗೋಪಾಲಕೃಷ್ಣ ಶ್ಯಾನಭಾಗ್, ನಾಗರಾಜ್, ಮಂಜಪ್ಪ, ಉಷಾ ಎನ್.ಉಮೇಶ್ ಹಿರೇನೆಲ್ಲೂರು, ವೀರರಾಜ ಜೈನ್, ಕಾರ್ಯದರ್ಶಿ ಬಿ.ನಾಗಪ್ಪ, ಪ್ರಮೋದ್, ಕುಸುಮಾ, ಸಿ.ಬಿ.ವಿದ್ಯಾನಂದ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts