More

    ಸಿಎಎ ಜಾಗೃತಿಗೆ ಷಾ ಗರ್ಜನೆ

    ಹುಬ್ಬಳ್ಳಿ: ಕೇಂದ್ರ ಗೃಹ ಸಚಿವ ಅಮಿತ್ ಷಾ ಸಮ್ಮುಖದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜನಜಾಗೃತಿ ಸಮಾವೇಶ ನಡೆಯಲಿರುವ ಹುಬ್ಬಳ್ಳಿ ನೆಹರು ಮೈದಾನದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಅಳವಡಿಸಲಾಗಿದೆ.

    ಮೈದಾನದ ಸುತ್ತಲೂ ಇರುವ ಕಟ್ಟಡಗಳಲ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದು, ಅಮಿತ್ ಷಾ ಆಗಮಿಸಲಿರುವ ಸಮಯದಲ್ಲಿ ಸುತ್ತಲಿನ ಕಟ್ಟಡಗಳ ಕೆಲ ಕಚೇರಿಗಳಿಗೆ ಬೀಗ ಹಾಕುವಂತೆ ಪೊಲೀಸರು ಸೂಚಿಸಿದ್ದಾರೆ. ಲಾಜ್​ಗಳಿರುವ ಕಟ್ಟಡಗಳಲ್ಲಿ ವಾಸ್ತವ್ಯ ಹೂಡಿರುವವರ ಸಾಮಗ್ರಿಗಳನ್ನು ಪರಿಶೀಲಿಸಲಾಗಿದೆ.

    ಸಿಆರ್​ಪಿಎಫ್ ಕಮಾಂಡೊಗಳು ಹಾಗೂ ಸ್ಥಳೀಯ ಪೊಲೀಸರು ನೆಹರು ಮೈದಾನದ ಸುತ್ತಲೂ ಭದ್ರತಾಜಾಲ ಹೆಣೆದಿದ್ದಾರೆ. ದೇಶಪಾಂಡೆ ನಗರ, ಸಂಗೊಳ್ಳಿ ರಾಯಣ್ಣ ವೃತ್ತ, ಚನ್ನಮ್ಮ ವೃತ್ತ, ಲ್ಯಾಮಿಂಗ್ಟನ್ ರಸ್ತೆ, ಸ್ಟೇಶನ್ ರಸ್ತೆ, ಪಿಂಟೊ ರೋಡ್, ಗೋಕುಲ ರಸ್ತೆ ಮತ್ತಿತರ ಪ್ರಮುಖ ರಸ್ತೆಗಳ ಉದ್ದಕ್ಕೂ ಪೊಲೀಸರನ್ನು ನಿಯೋಜಿಸಲಾಗಿದೆ.

    ನೆಹರು ಮೈದಾನದಲ್ಲಿ ಭದ್ರತಾ ವ್ಯವಸ್ಥೆ ಪರಿಶೀಲಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಎಡಿಜಿಪಿ ಅಮರಕುಮಾರ ಪಾಂಡೆ, ಸುತ್ತಲಿನ ಜಿಲ್ಲೆಗಳಿಂದ ಎಸ್ಪಿ ಹಾಗೂ ಮತ್ತಿತರ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಯನ್ನು ಭದ್ರತೆಗೆ ಕರೆಯಿಸಲಾಗಿದೆ. ಕೆಎಸ್​ಆರ್​ಪಿ ತುಕಡಿಗಳೂ ಕಾರ್ಯ ನಿರ್ವಹಿಸುತ್ತಿವೆ ಎಂದರು.

    ಕಪು್ಪ ಬಟ್ಟೆ ಧರಿಸಿದರೆ ಪ್ರವೇಶವಿಲ್ಲ : ಕಪು್ಪ ಬಟ್ಟೆ ಧರಿಸಿಕೊಂಡು ಬರುವವರಿಗೆ ಪ್ರವೇಶ ನಿಷೇಧಿಸಲು ನಿರ್ಧರಿ ಸಲಾಗಿದೆ. ಕಪು್ಪ ಟಿ ಶರ್ಟ್, ಅಂಗಿ, ಪಟ್ಟಿ ಕಟ್ಟಿಕೊಂಡು ಬಂದರೆ ನೆಹರು ಮೈದಾನದೊಳಗೆ ಪ್ರವೇಶ ನೀಡುವುದಿಲ್ಲ. ಕಪು್ಪ ಪ್ಯಾಂಟ್ ಧರಿಸಿದ್ದರೆ ಅದನ್ನು ತೆಗೆದಲ್ಲಿ ಅಶ್ಲೀಲ ಪ್ರದರ್ಶನ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸ್ ಆಯುಕ್ತ ಆರ್. ದಿಲೀಪ ಎಚ್ಚರಿಕೆ ನೀಡಿದ್ದಾರೆ.

    ಕಟ್ಟಡಗಳಿಗೆ ಸಂಪೂರ್ಣ ಹೊದಿಕೆ!: ನೆಹರು ಮೈದಾನದ ಸುತ್ತಲು ಇರುವ ಕಟ್ಟಡಗಳಿಗೆ ಸಂಪೂರ್ಣ ಹೊದಿಕೆ ಹಾಕುವಂತೆ ಎನ್​ಎಸ್​ಜಿ ಅಧಿಕಾರಿಗಳು ಬಿಜೆಪಿ ಮುಖಂಡರಿಗೆ ಸೂಚಿಸಿದ್ದಾರೆ. ಕಟ್ಟಡಗಳಿಗೆ ಹೊದಿಕೆ ಹಾಕುವುದು ಕಷ್ಟಸಾಧ್ಯ. ಈ ಮುಂಚೆಯೂ ಅತಿ ಗಣ್ಯರು ಭಾಗವಹಿಸಿರುವ ಹಲವಾರು ಸಮಾವೇಶಗಳು ನೆಹರು ಮೈದಾನದಲ್ಲಿ ನಡೆದಿವೆ. ಯಾವುದೇ ಸಂದರ್ಭದಲ್ಲಿ ಅಹಿತಕರ ಘಟನೆಗಳು ಆಗಿಲ್ಲವೆಂದು ಸ್ಥಳೀಯ ಬಿಜೆಪಿ ಮುಖಂಡರು ಎನ್​ಎಸ್​ಜಿ ಅಧಿಕಾರಿಗಳ ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ. ಮೈದಾನದ ಸುತ್ತಲಿನ ಲಾಜ್​ನವರು ಸಹ ಕಟ್ಟಡಕ್ಕೆ ಹೋದಿಕೆ ಹಾಕುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದು, ಅಧಿಕಾರಿಗಳು ಪ್ರತಿ ಕೋಣೆಯನ್ನು ಪರಿಶೀಲಿಸಿದ್ದಾರೆ. ಪೊಲೀಸ್ ಸಿಬ್ಬಂದಿಯನ್ನು ಕಟ್ಟಡದಲ್ಲಿ ನಿಯೋಜಿಸಲಾಗಿದೆ. ಆದರೂ ಹೊದಿಕೆ ಹಾಕುವುದು ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಸಂಪುಟ ವಿಸ್ತರಣೆ ಚರ್ಚೆ: ಅಮಿತ್ ಷಾ ಅವರೊಂದಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಸಹ ಇರಲಿದ್ದು, ಸಚಿವ ಸಂಪುಟ ವಿಸ್ತರಣೆ ಸಂಬಂಧ ರ್ಚಚಿಸುವುದು ಬಹುತೇಕ ಖಾತ್ರಿಯಾಗಿದೆ. ಉಪಚುನಾವಣೆ ಫಲಿತಾಂಶ ಬಂದು ಒಂದುವರೆ ತಿಂಗಳಾಗುತ್ತ ಬಂದಿದ್ದು, ಬಿಜೆಪಿಯನ್ನು ನಂಬಿ ಬಂದಿರುವ ಶಾಸಕರಿಗೆ ಸೂಕ್ತ ಸ್ಥಾನಮಾನ ನೀಡುವುದು, ಪಕ್ಷದೊಳಗಿನ ವಿವಿಧ ಆಕಾಂಕ್ಷಿಗಳನ್ನು ಸಮಾಧಾನಪಡಿಸುವುದು, ಎಲ್ಲ ಸಮುದಾಯಗಳ ಮನ ಗೆಲ್ಲಲು ಪೂರಕವಾಗಿ ಸ್ಥಾನ ಹಂಚಿಕೆ ಸೇರಿ ವಿವಿಧ ವಿಷಯಗಳ ಕುರಿತು ರ್ಚಚಿಸುವ ಸಾಧ್ಯತೆ ಇದೆ. ಯಾರಿಗೆ ಯಾವ ಸ್ಥಾನಮಾನ ನೀಡಬೇಕು ಎನ್ನುವ ಕುರಿತು ಅಂತಿಮ ನಿರ್ದೇಶನಗಳನ್ನೂ ಅಮಿತ್ ಷಾ ಅವರು ಬಿಎಸ್​ವೈಗೆ ನೀಡಲಿರುವ ನಿರೀಕ್ಷೆ ಇರುವುದರಿಂದ, ಷಾ ಹುಬ್ಬಳ್ಳಿ ಭೇಟಿ ರಾಜಕೀಯವಾಗಿಯೂ ತೀವ್ರ ಕುತೂಹಲ ಮೂಡಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts