More

    ಸಮಸ್ಯೆಗಳಿದ್ದರೆ ಗಮನಕ್ಕೆ ತನ್ನಿ  ಶಾಸಕ ಸುಬ್ಬಾರೆಡ್ಡಿ ಹೇಳಿಕೆ  

    ಬಾಗೇಪಲ್ಲಿ:  ಅಂಗವಿಕಲರಿಗೆ ನಿವೇಶನ, ಮನೆ ಹಾಗೂ ಆರ್ಹರಿಗೆ ಪಿಂಚಣಿ ಸೌಲಭ್ಯ ತಲಿಪಿಸಲು ಸದಾ ಸಿದ್ದನಾಗಿರುತ್ತೇನೆ, ಏನೇ ಸಮಸ್ಯೆಗಳಿದ್ದರೂ ನನ್ನ ಗಮನಕ್ಕೆ ತನ್ನಿ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು.
    ತಾಲೂಕಿನ ಕಸಬಾ ಹೋಬಳಿ ದೇವರಗುಡಿಪಲ್ಲಿ ಗ್ರಾಮದ ಗಿರಿಜಾ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಅಂಗವಿಕಲರ ಐಕ್ಯತಾ ವೇದಿಕೆ, ಎಂ.ಆರ್.ಡಬ್ಲೂ ಮತ್ತು ವಿ.ಆರ್.ಡಬ್ಲೂಗಳ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಅಯೋಜಿಸಿದ್ದ ವಿಶ್ವ ಅಂಗವಿಕಲರ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಅಂಗವಿಕಲರಿಗೆ ಸರ್ಕಾರದಲ್ಲಿ ಏನೇನು ಸೌಲಭ್ಯಗಳು ಇವೆ ಎಲ್ಲವನ್ನು ಆರ್ಹರಿಗೆ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ವಿಧಾನ ಸಭಾ ಕ್ಷೇತ್ರದಲ್ಲಿರುವ ಆರ್ಹ ಅಂಗವಿಕಲರಿಗೆ ಮನೆ, ನಿವೇಶನ, ಮಾಸಾಶನ ಸೇರಿ ಇತರೆ ಸರ್ಕಾರಿ ಸೌಲಭ್ಯಗಳು ಸಿಗದಿದ್ದಲ್ಲಿ ತಾಲೂಕು ಸಮಿತಿಯವರು ಪಟ್ಟಿ ಸಿದ್ದ ಮಾಡಿ ನನಗೆ ಕೊಟ್ಟರೆ 6 ತಿಂಗಳೊಳಗೆ ಪರಿಹಾರ ಕಲ್ಪಿಸುತ್ತೇನೆ ಎಂದರು.
    ಅಂಗವಿಕಲರಿಗೆ ನೀಡುವ ತ್ರಿಚಕ್ರ ವಾಹನಗಳನ್ನು ಸರ್ಕಾರಿ ನಿಯಮಗಳ ಪ್ರಕಾರ 65 ವರ್ಷ ವಯಸ್ಸಿನೊಳಗಿನವರಿಗೆ ಮಾತ್ರ ನೀಡಲು ಸಾಧ್ಯವಾಗುತ್ತದೆ.
    ಸರ್ಕಾರದಿಂದ ಅಂಗವಿಕಲರಿಗೆ ನೀಡುತ್ತಿರುವ 600 ರೂ. ಮಾಸಾಶನದಲ್ಲಿ ಪೋಸ್ಟ್ ಮ್ಯಾನ್‌ಗಳು ನಮಗೆ ನೀಡುವಾಗ 100 ರೂ. ಲಂಚ ನೀಡಿದರೆ ಮಾತ್ರ ಹಣ ಕೈ ಕೊಡುತ್ತಾರೆ ಇಲ್ಲದಿದ್ದರೆ ಇನ್ನು ಬಂದಿಲ್ಲ ಮುಂದಿನ ತಿಂಗಳು ಬರುತ್ತೆ ಎಂದು ಕಿರುಕುಳ ನೀಡುತ್ತಾರೆಂದು ಹಲವರು ಸಭೆಯಲ್ಲಿ ಪ್ರಸ್ತಾಪಿಸಿದಾಗ ಶಾಸಕರು ಪ್ರತಿಕ್ರಿಯಿಸಿ ಯಾರು ಮಾಸಾಶನ ನೀಡಲು ಲಂಚ ತೆಗೆದುಕೊಳ್ಳುತ್ತಾರೋ ಅಂತಹ ಪೋಸ್ಟ್ ಮ್ಯಾನ್‌ಗಳ ಮಾಹಿತಿಯನ್ನು ಬುಧವಾರ ನಡೆಯಲಿರುವ ಜನತಾದರ್ಶನದ ಸಮಯದಲ್ಲಿ ಮಾಹಿತಿ ನೀಡಿದರೆ ಜನತಾದರ್ಶನ ನಡೆಯುವ ಸ್ಥಳಕ್ಕೆ ಕರೆಯಿಸಿ ಸೂಕ್ತ ಕ್ರಮ ಜರುಗಿಸುತ್ತೇನೆ ಎಂದು ಭರವಸೆ ನೀಡಿದರು.
    ಚಿಕ್ಕಬಳ್ಳಾಪುರದ ಕೆವಿಎಸ್ ಒಕ್ಕೂಟದ ಉಷಾಕಿರಣ್ ಮಾತನಾಡಿ,
    ಬಾಗೇಪಲ್ಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಹೋದರೆ ನಮಗೆ ಪ್ರತ್ಯೇಖವಾದ ವ್ಯವಸ್ಥೆ ಇಲ್ಲ, ಸರ್ಕಾರಿ ಕಚೇರಿಗಳ ಬಳಿ ರ‌್ಯಾಂಪ್ ಇಲ್ಲ, ಗುರುತಿನ ಚೀಟಿ ಬಗ್ಗೆ ತೊಂದರೆಗಳು ಇವೆ, ತಾಲೂಕಿನ ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲೂ ಅಂಗವಿಕಲರ ಅಭಿವೃದ್ಧಿಗಾಗಿ ಮೀಸಲಿಟ್ಟಿರುವ ಶೇ5 ಅನುದಾನ ಪಿಡಿಒಗಳು ನೀಡದೆ ದುರುಪಯೋಗ ಮಾಡುತ್ತಿದ್ದಾರೆ. ಹಾಗೆಯೇ ತಾಲೂಕು ಕೇಂದ್ರದಲ್ಲಿ ಅಂಗವಿಕಲರ ಭವನ ನಿರ್ಮಾಣ ಮಾಡಿಕೊಡಬೇಕೆಂದು ಶಾಸಕರಲ್ಲಿ ಮನವಿ ಮಾಡಿದರು.
    ಕೆಎಐವಿ ರಾಜ್ಯಾಧ್ಯಕ್ಷೆ ಸಬಿಯಾ ಬೇಗಂ, ನಿರ್ದೇಶಕ ಎಸ್.ವಿ.ಮದ್ದಿರೆಡ್ಡಿ, ರಾಜ್ಯ ಗೌರವಾಧ್ಯಕ್ಷ ವಿ.ಶ್ರೀನಿವಾಸ, ರಾಜ್ಯ ಕಾರ್ಯದರ್ಶಿ ಸಿ.ಗಂಗಾಧರ, ಖಜಾಂಚಿ ಎಂ.ಶ್ರೀನಿವಾಸ, ತಾಪಂ ಅಧ್ಯಕ್ಷ ಕೆ.ಆರ್.ನರೇಂದ್ರಬಾಬು, ಉಪಾಧ್ಯಕ್ಷೆ ಸರಸ್ವತಮ್ಮ, ಗ್ರಾಪಂ ಅಧ್ಯಕ್ಷೆ ಎನ್.ಸರಿತಾ, ಪಿಡಿಒ ಎಂ.ಎನ್.ಶಂಕರಪ್ಪ, ಕೆಡಿಪಿ ಸದಸ್ಯ ಅಮರನಾಥರೆಡ್ಡಿ, ಗ್ರಾಪಂ ಅಧ್ಯಕ್ಷ ವೆಂಕಟರೆಡ್ಡಿ, ಮುಖಂಡ ಮಲ್ಲಿಕಾರ್ಜುನರೆಡ್ಡಿ, ಕರ್ನಾಟಕ ಅಂಗವಿಕಲರ ಐಕ್ಯತಾ ವೇದಿಕೆ ಪದಾಧಿಕಾರಿಗಳಾದ ನಾಗರಾಜ್, ವೆಂಕಟಶಿವಾರಡ್ಡಿ, ನಾಗರಾಜ್, ವೆಂಕರವಣಪ್ಪ, ಲಕ್ಷ್ಮಿ, ನರಸಿಂಹಮೂರ್ತಿ ಮತ್ತಿತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts