More

    ಸಬ್ಸಿಡಿ ಆಸೆಗೆ ಲೋನ್ ಪಡೆಯಬೇಡಿ: ನಿಗಮದ ಅಧ್ಯಕ್ಷೆ ಶಶಿಕಲಾ ಟೆಂಗಳಿ ಸಲಹೆ

    ಬಳ್ಳಾರಿ: ಕೇವಲ ಸಬ್ಸಿಡಿ ಆಸೆಗೆ ಲೋನ್ ಪಡೆಯದೆ ಜೀವನದಲ್ಲಿ ಅಭ್ಯುದಯ ಸಾಧಿಸುವುದಕ್ಕಾಗಿ ಪಡೆಯಿರಿ ಎಂದು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ಟೆಂಗಳಿ ಹೇಳಿದರು.

    ನಗರದ ಗ್ರಾಮೀಣ ಸಿಡಿಪಿಒ ಕಚೇರಿಯ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಾಜದಲ್ಲಿ ಮಹಿಳೆಯರನ್ನು ಕೀಳಾಗಿ ನೋಡುವ ಸ್ವಭಾವ ದೂರವಾಗಬೇಕಿದೆ.ಈ ನಿಟ್ಟಿನಲ್ಲಿ ಹೆಣ್ಣು ತಲೆ ಎತ್ತಿ ಎಲ್ಲರಂತೆ ಬಾಳಲು ನಿಗಮದಿಂದ ಎಲ್ಲ ರೀತಿಯ ಸೌಲಭ್ಯ ಒದಗಿಸಲು ಶ್ರಮಿಸಲಾಗುತ್ತಿದೆ. ಸರ್ಕಾರದಿಂದ ಸಾಕಷ್ಟು ಸೌಲಭ್ಯಗಳಿದ್ದು, ಅವುಗಳು ತಲುಪಬೇಕಾದವರಿಗೆ ತಲುಪುತ್ತಿಲ್ಲ ಎಂಬ ಆರೋಪಗಳಿವೆ.

    ಜತೆಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳ ಕುರಿತು ಬಹಳಷ್ಟು ಮಹಿಳೆಯರಿಗೆ ಮಾಹಿತಿಯಿಲ್ಲ ಎಂಬುದು ತಿಳಿದು ಬಂದಿದೆ.ಈ ನಿಟ್ಟಿನಲ್ಲಿ ನಿಗಮದಿಂದ ರಾಜ್ಯಾದ್ಯಂತ ಪ್ರಗರತಿ ಪರಿಶೀಲನೆ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.

    ಪ್ರಮುಖವಾಗಿ ಸೌಲಭ್ಯಗಳ ಕುರಿತು ನಿಮಗೆ ಗೊತ್ತಿದ್ದರೇ ಇನ್ನೊಬ್ಬರಿಗೆ ಮಾಹಿತಿ ನೀಡಿ. ಹೆಣ್ಣು ಮಕ್ಕಳಿಗೆ ನ್ಯಾಯ ಕೊಡಿಸುವುದೇ ನನ್ನ ಮೂಲ ಧರ್ಮವಾಗಿದ್ದು, ಅದಕ್ಕಾಗಿ ರಾಜ್ಯಾದ್ಯಂತ ಪ್ರಚಾರ ಕೈಗೊಂಡಿರುವೆ ಎಂದರು.

    ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ನಾಗರಾಜ, ಬಳ್ಳಾರಿ ನಗರ ಸಿಡಿಪಿಒ ಉಷಾ, ಮಹಾನಗರ ಪಾಲಿಕೆಯ ಮಾಜಿ ಸದಸ್ಯೆ ಶಶಿಕಲಾ, ದೇವದಾಸಿ ಮಹಿಳಾ ಅಭಿವೃದ್ಧಿ ನಿಗಮದ ಅಧಿಕಾರಿ ಗೋಪಾಲ ನಾಯ್ಕ್ , ಮಹಿಳಾ ಅಭಿವೃದ್ಧಿ ನಿಗಮದ ನಿರೀಕ್ಷಕಿ ನಾಗವೇಣಿ, ಪಿಒ ನವೀನಕುಮಾರ, ಸೌಖ್ಯ ಬೆಳಕು ಸಂಸ್ಥೆಯ ಪ್ರೋಗ್ರಾಮ ವ್ಯವಸ್ಥಾಪಕಿ ಲಕ್ಷ್ಮಿ ನರಸಂಹ ಸೇರಿ ಇನ್ನೀತರರು ಇದ್ದರು.

    ಗೌರವಯುತವಾಗಿ ಬದುಕು ಸಾಗಿಸಬೇಕೆಂಬ ಅಂಬಲವಿದೆ.‌ಇದೀಗ ತರಕಾರಿ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ಲೋನ್ ನೀಡಿದರೇ ವ್ಯಾಪಾರ ಅಭಿವೃದ್ಧಿಗೆ ಅನುಕೂಲವಾಗುತ್ತದೆ. ಆದರೆ, ಇಲಾಖೆಯಿಂದ ಲೋನ್ ಅಪ್ರೂವ್ ಹಾಗುತ್ತಿಲ್ಲ.ಎಲ್ಲ ದಾಖಲಾತಿಗಳನ್ನು ನೀಡಿದರೇ ನಮ್ಮನ್ನು ಯಾರು ನಂಬುತ್ತಿಲ್ಲ. ಹೀಗಾದರೇ ಹೇಗೆ….? ನಮ್ಮನ್ನು ಮನುಷ್ಯರಂತೆ ನೋಡಿ.

    ಸಂದ್ಯಾ ಮಂಗಳಮುಖಿ

    ಕೋಟ್
    ನಮಗೆ ಜೀವನ ಸಾಗಿಸಲು ನೆಲೆಯಿಲ್ಲ.ಹಲವು ವರ್ಷಗಳಿಂದ ಬಾಡಿಗೆ ಮನೆಯಲ್ಲಿದ್ದೇವೆ.ಲೋನ್ ನೀಡಿ, ಜಾಗದ ಸೌಲಭ್ಯ ಒದಗಿಸಿದರೇ ಮನೆ ಕಟ್ಟಿಕೊಳ್ಳಲಿದ್ದೇವೆ.ಆದರೆ, ಅಧಿಕಾರಿಗಳು ನಮ್ಮ ಮನವಿಗೆ ಸಂದಿಸುತ್ತಿಲ್ಲ.

    ಸುಮಂಗಲಾ ದೇವದಾಸಿ ಮಹಿಳೆ ಬಾಪೂಜಿ ನಗರ

    ಕೋಟ್

    ಸರ್ಕಾರದಿಂದ ದೇವದಾಸಿ ಮಹಿಳೆಯರಿಗೆ ನಿವೇಶನ ದೊರಕಿಸಿ ಮನೆ ಕಟ್ಟಿ ಕೊಡುವುದಕ್ಕೆ ಪ್ರಯತ್ನಿಸಲಾಗುವುದು. ಈ ಕುರಿತು ತ್ವರಿತವಾಗಿ ಚಿಂತನೆ ನಡೆಸಿ ಯೋಜನೆ ಕಾರ್ಯ ರೂಪಕ್ಕೆ ತರಲಾಗುವುದು.
    ಶಶಿಕಲಾ ಟೆಂಗಳಿ , ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ

    ಫೋಟೊ
    ಬಳ್ಳಾರಿ ನಗರದ ಗ್ರಾಮೀಣ ಸಿಡಿಪಿಒ ಕಚೇರಿಯ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿಗಮದ ಅಧ್ಯಕ್ಷೆ ಶಶಿಕಲಾ ಟೊಂಕಲೆ ಮಾತನಾಡಿದರು.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ನಾಗರಾಜ, ಬಳ್ಳಾರಿ ನಗರ ಸಿಡಿಪಿಒ ಉಷಾ, ಮಹಾನಗರ ಪಾಲಿಕೆಯ ಮಾಜಿ ಸದಸ್ಯೆ ಶಶಿಕಲಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts