More

    ಸಪ್ತಪದಿಗೆ ಯಶ್, ಸುಧಾ ರಾಯಭಾರಿ?

    ಶಿವಮೊಗ್ಗ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಸಪ್ತಪದಿ’ ಸಾಮೂಹಿಕ ವಿವಾಹ ಯೋಜನೆಗೆ ಚಿತ್ರನಟ ಯಶ್ ಹಾಗೂ ಇನ್ಪೋಸಿಸ್​ನ ಸುಧಾಮೂರ್ತಿ ಅವರನ್ನು ರಾಯಭಾರಿ ಮಾಡುವ ಚಿಂತನೆ ಇದೆ ಎಂದು ಮುಜರಾಯಿ ಮತ್ತು ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದರು.

    ಡಿಸಿ ಕಚೇರಿಯಲ್ಲಿ ಶನಿವಾರ ಮೀನುಗಾರಿಕೆ ಮತ್ತು ಮುಜರಾಯಿ ಇಲಾಖೆ ಅಧಿಕಾರಿಗಳು, ತಹಸೀಲ್ದಾರ್ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಅವರು, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗಡೆ ಅವರು ಕೆಲವೊಂದು ಸಾಮೂಹಿಕ ವಿವಾಹ ಸಂದರ್ಭದಲ್ಲಿ ಉಪಸ್ಥಿತರಿರುವುದಾಗಿ ತಿಳಿಸಿದ್ದಾರೆ. ಯಾವುದೇ ಲೋಪದೋಷ ಆಗದಂತೆ ಜಿಲ್ಲಾಮಟ್ಟದಲ್ಲಿ ಸಾಮೂಹಿಕ ವಿವಾಹಗಳನ್ನು ಏರ್ಪಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

    ಅರ್ಥಪೂರ್ಣ ಮತ್ತು ಪಾರದರ್ಶಕವಾಗಿರಬೇಕು. ಬಾಲ್ಯ ವಿವಾಹ ಆಗದಂತೆ ಎಚ್ಚರಿಕೆ ವಹಿಸಬೇಕು. ಎರಡನೇ ಮದುವೆಗೆ ಅವಕಾಶ ನೀಡಬಾರದು. ಜಾತಿ ಹೆಸರಲ್ಲಿ ಯಾವುದೇ ಗೊಂದಲ ಆಗದಂತೆ ನೋಡಿಕೊಳ್ಳಬೇಕು. ಎಲ್ಲ ಅಧಿಕಾರಿಗಳು ಕೂಡ ಒಂದು ತಂಡವಾಗಿ ಕೈಜೋಡಿಸಿ ಶ್ರಮವಹಿಸಬೇಕು ಎಂದು ಸಲಹೆ ನೀಡಿದರು.

    ಹಣಕಾಸು ವರ್ಗಿಕರಿಸಲು ಚಿಂತನೆ: ಹೆಚ್ಚಿರುವ ದೇವಸ್ಥಾನಗಳ ಆದಾಯವನ್ನು ಕಡಿಮೆ ಇರುವ ದೇವಸ್ಥಾನಗಳ ಅಭಿವೃದ್ಧಿ ಕಾರ್ಯಗಳಿಗೆ ಬಳಸಲು ಹಣಕಾಸು ವರ್ಗಿಕರಿಸುವ ಚಿಂತನೆಯನ್ನೂ ನಡೆಸಲಾಗಿದೆ. ಸಾಧ್ಯಾಸಾಧ್ಯತೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದ ಸಚಿವರು, ತಸ್ಥಿಕ್ ಮುಖಾಂತರ ಎಷ್ಟು ಅರ್ಚಕರ ಖಾತೆಗೆ ಹಣ ಜಮಾ ಆಗಿದೆ. ಇನ್ನೆಷ್ಟು ಬಾಕಿ ಇದೆ ಎಂಬುದನ್ನು ಪರಿಶೀಲಿಸಬೇಕು. ಬಾಕಿ ಇದ್ದರೆ ವಾರದೊಳಗೆ ಬಿಡುಗಡೆ ಮಾಡಬೇಕು. ಜತೆಗೆ ವಿಧಾನಸಭಾ ಕ್ಷೇತ್ರಗಳಾ ವ್ಯಾಪ್ತಿಯಲ್ಲಿ ಶಾಸಕರ ಸಲಹೆ ಮೇರೆಗೆ ಆರಾಧಾನ ಸಮಿತಿ ರಚಿಸುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದರು.

    ಅರಣ್ಯ ಭೂಮಿಯಲ್ಲಿರುವ ಜಾಗವನ್ನು ಸ್ಮಶಾನ ಬಳಕೆ ಸಂಬಂಧ ಅರಣ್ಯ ಸಂರಕ್ಷಣಾಧಿಕಾರಿ ಜತೆ ರ್ಚಚಿಸಿ ಪ್ರಸ್ತಾವನೆ ಸಲ್ಲಿಸಬೇಕು. ಮತ್ತೂರು ಗ್ರಾಪಂ ಸಮೀಪದ ಕುಸ್ಕೂರಿನಲ್ಲಿರುವ ಚೌಡೇಶ್ವರಿ ದೇವಸ್ಥಾನದ ಸಮಸ್ಯೆ ಕುರಿತು ಸ್ಥಳ ಪರಿಶೀಲನೆ ನಡೆಸಿ ಡಿಸಿಗೆ ವರದಿ ನೀಡುವಂತೆ ತಹಸೀಲ್ದಾರ್ ಬಿ.ಎನ್.ಗಿರೀಶ್​ಗೆ ಸೂಚಿಸಿದರು.

    ಚಿಬ್ಬಲಗುಡ್ಡೆ ಮತ್ಸ್ಯಾಮವನ್ನು ಸರ್ಕಾರದಿಂದಲೇ ಅಭಿವೃದ್ಧಿ ಪಡಿಸಲು ಸಾಧ್ಯವಿದೆಯೇ ಎಂಬುದನ್ನು ಪರಾಮಶಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

    ಡಿಸಿ ಕೆ.ಬಿ.ಶಿವಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ 4 ‘ಎ’, 1 ‘ಬಿ’ ಮತ್ತು 466 ‘ಸಿ’ ದರ್ಜೆ ದೇವಸ್ಥಾನಗಳಿದ್ದು ಮೂರು ದೇವಸ್ಥಾನಗಳನ್ನು ‘ಸಿ’ ದರ್ಜೆಯಿಂದ ‘ಬಿ’ ದರ್ಜೆಗೇರಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.

    ಶಾಸಕ ಅಶೋಕ್ ನಾಯ್್ಕ ಉಪ ಮೇಯರ್ ಎಸ್.ಎನ್.ಚನ್ನಬಸಪ್ಪ, ಜಿಪಂ ಸಿಇಒ ಎಂ.ಎಲ್.ವೈಶಾಲಿ, ಎಡಿಸಿ ಜಿ.ಅನುರಾಧಾ, ಎಸಿಗಳಾದ ಟಿ.ವಿ.ಪ್ರಕಾಶ್, ಡಾ. ಎಲ್.ನಾಗರಾಜ್ ಸೇರಿ ಎಲ್ಲ ಏಳು ತಾಲೂಕಿನ ತಹಶೀಲ್ದಾರ್​ಗಳು, ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts