More

    ಸಂಸದ ಬ್ರಿಜ್ ಭೂಷಣ್ ಸಿಂಗ್ ಬಂಧನಕ್ಕೆ ಆಗ್ರಹಿ ಪ್ರತಿಭಟನೆ

    ಮೈಸೂರು: ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ಕಿರುಕುಳ ದೌರ್ಜನ್ಯದ ಆರೋಪ ಎದುರಿಸುತ್ತಿರುವ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ಬಂಧನಕ್ಕೆ ಆಗ್ರಹಿಸಿ ನಗರದಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಜಿಲ್ಲಾ ಸಮಿತಿ, ಸಿಐಟಿಯು, ಸಿಪಿಎಂ, ಮಹಿಳಾ ಹೋರಾಟಗಾರರು, ಪ್ರಗತಿಪರರು ಪ್ರತಿಭಟನೆ ನಡೆಸಿದರು.

    ಸಂಯುಕ್ತ ಕಿಸಾನ್ ಮೋರ್ಚಾ ಕರೆ ಮೇರೆಗೆ ಗುರುವಾರ ನಗರದ ಗಾಂಧಿ ಚೌಕದಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

    ದೇಶಕ್ಕಾಗಿ ಗೌರವ, ಕೀರ್ತಿ ತಂದುಕೊಟ್ಟಿರುವ ಮಹಿಳಾ ಕುಸ್ತಿಪಟುಗಳನ್ನು ಬೀದಿಯಲ್ಲಿ ಎಳೆದಾಡಿ ಅವಮಾನಿಸಲಾಗಿದೆ. ತಪ್ಪಿತಸ್ಥ ಪೊಲೀಸರ ವಿರುದ್ಧ ಕಾನೂನು ಕ್ರಮವಾಗಬೇಕು. ಕ್ರೀಡಾಪಟುಗಳ ಆತ್ಮಸ್ಥೈರ್ಯ ಕುಂದಿಸುವ ಕೆಲಸವನ್ನು ಕೇಂದ್ರದ ಬಿಜೆಪಿ ಸರ್ಕಾರ ನಿಲ್ಲಿಸಬೇಕು. ಆರೋಪಿ ಬ್ರಿಜ್ ಭೂಷಣ್ ಸಿಂಗ್‌ನನ್ನು ಭಾರತ ಕುಸ್ತಿ ಫೆಡರೇಷನ್ ಸ್ಥಾನದಿಂದ ವಜಾಗೊಳಿಸಿ ಬಂಧಿಸಬೇಕು ಎಂದು ಆಗ್ರಹಿಸಿದರು.

    ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಮಹಿಳಾ ಕುಸ್ತಿಪಟು ಲೈಂಗಿಕ ದೌರ್ಜನ್ಯದ ಪ್ರಕರಣದ ತನಿಖೆಗೆ ರಚಿಸಿರುವ ಸಮಿತಿಯ ವರದಿ ಬಿಡುಗಡೆ ಮಾಡಬೇಕು. ಆದರೆ, ಸಮಿತಿಯ ಸಾಕ್ಷಾೃಧಾರ ಇಲ್ಲವೆಂದು ನೆಪ ಹೇಳುತ್ತಿದೆ. ಲೈಂಗಿಕ ದೌರ್ಜನ್ಯದ ಪ್ರಕರಣದಲ್ಲಿ ಸಾಕ್ಷಾೃಧಾರ ಸಂಗ್ರಹಿಸುವುದು ಕಷ್ಟ. ಹೀಗಾಗಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರ ಹೇಳಿಕೆಯನ್ನು ಸತ್ಯವೆಂದು ಪರಿಗಣಿಸಿ ಆರೋಪಿ ಬಂಧಿಸಬೇಕು ಎಂದು ಹೇಳಿದರು.

    ಮಹಿಳಾ ಆತ್ಮಗೌರವಕ್ಕಾಗಿ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿದೆ. ನ್ಯಾಯಕ್ಕಾಗಿ ಅಂಗಲಾಚುತ್ತಿರುವ ಕುಸ್ತಿಪಟುಗಳ ಬಾಯಿ ಮುಚ್ಚಿಸಲು ಪೊಲೀಸರು ಕಿರುಕುಳ ನೀಡುತ್ತಿದ್ದಾರೆ. ಹೀಗಾಗಿ 541 ರೈತ ಸಂಘಟನೆಗಳು ಸಂಯುಕ್ತ ಕಿಸಾನ್ ಮೋರ್ಚಾ ಹೋರಾಟವನ್ನು ತೀವ್ರಗೊಳಿಸಿದೆ. ಜೂ.5ರಂದು ರಾಷ್ಟ್ರಮಟ್ಟದಲ್ಲಿ ದೊಡ್ಡ ಮಟ್ಟದ ಹೋರಾಟ ರೂಪಿಸಲಾಗಿದೆ ಎಂದು ಹೇಳಿದರು.

    ಚಿಂತಕ ಪ್ರೊ.ಕೆ.ಎಸ್.ಭಗವಾನ್, ರಂಗಕರ್ಮಿ ಕೆ.ಆರ್.ಸುಮತಿ ಮಾತನಾಡಿದರು. ರೈತ ಸಂಘದ ಮುಖಂಡರಾದ ಹೊಸಕೋಟೆ ಬಸವರಾಜು, ಪಿ.ಮರಂಕಯ್ಯ, ಮಂಡಕಳ್ಳಿ ಮಹೇಶ್, ಶಿರಮಳ್ಳಿ ಸಿದ್ದಪ್ಪ, ಮಹದೇವ ನಾಯಕ, ಚಂದ್ರಶೇಖರ್, ಪಳನಿಸ್ವಾಮಿ, ಚಂದ್ರು, ಇಲವಾಲ ಮಹೇಶ್, ಸ್ವರಾಜ್ ಇಂಡಿಯಾದ ಮಾಧ್ಯಮ ವಕ್ತಾರ ಎನ್.ಪುನೀತ್, ಸಿಪಿಐಎಂನ ಜಿಲ್ಲಾ ಕಾರ್ಯದರ್ಶಿ ಜಗದೀಶ್ ಸೂರ್ಯ, ಲ.ಜಗನ್ನಾಥ್, ರತಿರಾವ್, ರೂಪಾ, ಶ್ರೀದೇವಿ, ಚಂದ್ರಕಲಾ, ಸಿಐಟಿಯುನ ಜಿ.ಜಯರಾಮ್, ಕೆ.ಬಸವರಾಜು, ಅಣ್ಣಪ್ಪ, ರಾಜೇಂದ್ರ, ಜಗನ್ನಾಥ್, ಸುಬ್ರಹ್ಮಣ್ಯ, ವರುಣ ನಾಗರಾಜು, ರಂಗಕರ್ಮಿ ಸಿ.ಬಸವಲಿಂಗಯ್ಯ, ಸುಶೀಲಾ, ದಲಿತ ಸಂಘರ್ಷ ಸಮಿತಿಯ ಚೋರನಹಳ್ಳಿ ಶಿವಣ್ಣ, ಶಂಭುಲಿಂಗಸ್ವಾಮಿ ಇದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts