More

    ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರಿಗೆ ನುಡಿ ನಮನ

    ಹುಬ್ಬಳ್ಳಿ: ಸಮಾಜದ ಒಳಿತಿಗೆ ಜ್ಞಾನವನ್ನು ಬಿತ್ತಿದ ಶ್ರೀ ಸಿದ್ಧೇಶ್ವರ ಸ್ವಾಮೀಯವರು ನಾಡಿನ ಸಮಸ್ತ ಜನರ ಹೃದಯ ಮಂದಿರದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ ಎಂದು ವಿಜಯಪುರ ಜ್ಞಾನ ಯೋಗಾಶ್ರಮದ ಅಧ್ಯಕ್ಷ ಶ್ರೀ ಬಸವಲಿಂಗ ಸ್ವಾಮೀಜಿ ನುಡಿದರು.

    ಹುಬ್ಬಳ್ಳಿ ಅಕ್ಷಯನಗರ ಸಚೇತನ ಪದವಿ ಪೂರ್ವ ಕಾಲೇಜಿನಲ್ಲಿ ದ್ಯಾವಪ್ಪನವರ-ವಳಸಂಗ ಎಜ್ಯುಕೇಶನಲ್ ಅಂಡ ಅಕಾಡೆಮಿಕ್ ಟ್ರಸ್ಟ್ ವತಿಯಿಂದ ಭಾನುವಾರ ಆಯೋಜಿಸಿದ್ದ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಗಳು, ತಂದೆ-ತಾಯಿ, ಬಂಧುಗಳ ಋಣ ತೀರಿಸಬಹುದು. ಗುರುವಿನ ಋಣ ತೀರಿಸಲು ಯಾರಿಂದಲೂ ಸಾಧ್ಯವಿಲ್ಲ. ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರು ಜೀವನದುದ್ದಕ್ಕೂ ಪ್ರಶಸ್ತಿ, ಬಹುಮಾನಗಳನ್ನು ಬದಿಗೆ ಸರಿಸಿ ಜ್ಞಾನವನ್ನು ಬಿತ್ತಿದರು ಎಂದರು.

    ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ನಾವೆಲ್ಲ ಬುದ್ಧ, ಬಸವಣ್ಣನವರನ್ನು ನೋಡಿಲ್ಲ. ಸಿದ್ಧೇಶ್ವರ ಶ್ರೀಗಳಲ್ಲಿ ದೇವರನ್ನು ಕಂಡಿದ್ದೇವೆ ಎಂಬ ಸಮಾಧಾನ, ಸಂತೋಷ ನಮ್ಮೆಲ್ಲರದಾಗಿದೆ ಎಂದು ಭಾವಿಸಿದ್ದೇನೆ. ನುಡಿದಂತೆ ನಡೆದ ಶ್ರೇಷ್ಠ ಸಂತರು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವ ಪ್ರಯತ್ನ ಮಾಡೋಣ. ಪ್ರತಿ ವರ್ಷ ಅವರ ನೆನಪಿನಲ್ಲಿ ಕಾರ್ಯಕ್ರಮ ಮಾಡೋಣ ಎಂದರು.

    ಬೆಳಗಾವಿ ಘೊಡಗೇರಿ ಶಿವಾನಂದ ಮಠದ ಶ್ರೀ ಮಲ್ಲಯ್ಯ ಸ್ವಾಮೀಜಿ, ಸದಲಗಾ ಗೀತಾಶ್ರಮದ ಶ್ರೀ ಶ್ರದ್ಧಾನಂದ ಸ್ವಾಮೀಜಿ, ಹುಲ್ಯಾಳದ ಶ್ರೀ ಗುರುದೇವಾಶ್ರಮದ ಶ್ರೀ ಹರ್ಷಾನಂದ ಸ್ವಾಮೀಜಿ, ಸಾಂಗ್ಲಿಯ ಬಾಲಗಾಂವ ಗುರುದೇವಾಶ್ರಮದ ಶ್ರೀ ಅಮೃತಾನಂದ ಸ್ವಾಮೀಜಿ ನುಡಿನಮನ ಸಲ್ಲಿಸಿದರು. ಶ್ರೀ ಸಿದ್ಧಲಿಂಗ ಸ್ವಾಮೀಜಿ, ಶ್ರೀ ಷಡಕ್ಷರಿ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಮಹೇಶ ದ್ಯಾವಪ್ಪನವರ, ಜಗದೀಶ ದ್ಯಾವಪ್ಪನವರ, ಜಿ.ವಿ. ವಳಸಂಗ, ವಿಶ್ವನಾಥ ಕೊರವಿ, ಇತರರು ಇದ್ದರು. ಪ್ರಾಚಾರ್ಯ ಮಹೇಶ ಕಟ್ಟಾ ಸ್ವಾಗತಿಸಿದರು. ರಮೇಶ ಶೇರೆವಾಡ ನಿರೂಪಿಸಿದರು. ಶಾಂತೇಶ ಕೆಂಚಣ್ಣವರ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts