More

    ಶ್ರೀ ನಂಜುಂಡೇಶ್ವರ ದೇವರ ವಾರ್ಷಿಕ ಪೂಜೋತ್ಸವ

    ಕುಶಾಲನಗರ: ನಂಜರಾಯಪಟ್ಟಣ ಗ್ರಾಮದೈವ, ಕಾವೇರಿ ನದಿ ತೀರದ ಶ್ರೀ ನಂಜುಂಡೇಶ್ವರ, ಶ್ರೀ ಬಸವೇಶ್ವರ, ಶ್ರೀ ಕನ್ನಂಬಾಡಮ್ಮ, ಆದಿಶಕ್ತಿ ದೇವೀರಮ್ಮ ಹಾಗೂ ಶ್ರೀ ವೀರಭದ್ರಸ್ವಾಮಿ ದೇವರ ವಾರ್ಷಿಕ ಪೂಜೋತ್ಸವ ಮಂಗಳವಾರ ಶ್ರದ್ಧಾಭಕ್ತಿಯಿಂದ ಜರುಗಿತು.


    ಬೆಳಗ್ಗೆ ದೇವಾಲಯದಲ್ಲಿ ದೇವತಾ ಮೂರ್ತಿಗಳಿಗೆ ಪವಿತ್ರ ಗಂಗಾ ಅಭಿಷೇಕ ನೆರವೇರಿಸಿದ ನಂತರ ವಿವಿಧ ಪುಷ್ಪಗಳಿಂದ ಅಲಂಕರಿಸಿ ಪೂಜೆ ಮಾಡಿ ಮಹಾಮಂಗಳಾರತಿ ನೆರವೇರಿಸಲಾಯಿತು.


    ಇದಕ್ಕೂ ಮುನ್ನ ಕಾವೇರಿ ನದಿ ಬಳಿ ಮಂಟಪದಲ್ಲಿ ದೇವತಾ ಮೂರ್ತಿಗಳನ್ನು ಪೂಜಿಸಿ ಮೆರವಣಿಗೆಯಲ್ಲಿ ದೇವಾಲಯದ ಸನ್ನಿಧಿಗೆ ತರಲಾಯಿತು. ನಾಗಮಂಗಲದ ಖ್ಯಾತ ವೀರಭದ್ರ ನೃತ್ಯ ಕಲಾವಿದ ಮಹದೇವಪ್ಪ ಅವರ ವೀರಗಾಸೆ ನೋಡುಗರ ಆಕರ್ಷಣೆಯಾಗಿತ್ತು.


    ದೇವತಾ ಮಂಟಪಗಳ ಮೆರವಣಿಗೆ ಸಂದರ್ಭ ಗ್ರಾಮಸ್ಥರು ಹಾಗೂ ದುಬಾರೆ ಸೇರಿದಂತೆ ವಿವಿಧ ಗಿರಿಜನ ಹಾಡಿಗಳ ನಿವಾಸಿಗಳು ಮಹಿಳೆಯರು ಹಾಗೂ ಮಕ್ಕಳಾದಿಯಾಗಿ ಕುಣಿದು ಕುಪ್ಪಳಿಸಿ ಪುನೀತರಾದರು.
    ದೇವಾಲಯದ ಆವರಣದಲ್ಲಿ ಸಿದ್ಧಪಡಿಸಿದ್ದ ಕೊಂಡೋತ್ಸವದ ಪೂಜಾ ವಿಧಿಗಳನ್ನು ಸೋಮವಾರಪೇಟೆಯ ಕೆ.ಪಿ.ಯೋಗೇಶ್ ಹಾಗೂ ದೇವಾಲಯದ ಅರ್ಚಕ ಅಪ್ಪಣ್ಣ ನೆರವೇರಿಸಿದರು.


    ಬಳಿಕ ಕೆಂಡ ಕೊಂಡದ ಪೂಜಾ ವಿಧಿಗಳು ಮುಗಿದ ಬಳಿಕ ಶ್ರೀ ವೀರಭದ್ರ ಗಾಸೆಯವರು ಬರಿಗಾಲಲ್ಲಿ ಬೆಂಕಿ ಕೊಂಡವನ್ನು ತುಳಿದು ಮುಂದೆ ಸಾಗಿದ ನಂತರ ಶ್ರೀ ಕನ್ನಂಬಾಡಮ್ಮ ಹಾಗೂ ಶ್ರೀ ಬಸವೇಶ್ವರ ದೇವತಾ ಮೂರ್ತಿಗಳ ಉತ್ಸವ ಮೂರ್ತಿ ಹೊತ್ತ ಭಕ್ತರು ಕೆಂಡವನ್ನು ತುಳಿದ ನಂತರ ಹರಕೆ ಹೊತ್ತ ಭಕ್ತರು ಬರಿಗಾಲಲ್ಲಿ ತುಳಿದು ಭಕ್ತಿ ಸಮರ್ಪಿಸಿದರು.


    ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ, ಕಿರುಕೊಡ್ಲಿ ಮಠದ ಶಿವಕುಮಾರ್ ಸ್ವಾಮೀಜಿ, ಅರಮೇರಿ ಕಳಂಚೇರಿ ಮಠದ ಸ್ವಾಮೀಜಿ, ದಿಂಡಗಾಡು ಬಸವ ಜ್ಯೋತಿ ಮಠದ ಶ್ರೀ ಅಪ್ಪಾಜಿ ಸ್ವಾಮೀಜಿ, ದೇವಾಲಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎನ್.ಕೆ.ಮೋಹನಕುಮಾರ್, ಉಪಾಧ್ಯಕ್ಷ ಕೆ.ಜಿ.ಲೋಕನಾಥ್, ಕಾರ್ಯದರ್ಶಿ ಕೆ.ವಿ.ಪ್ರೇಮಾನಂದ, ಖಜಾಂಚಿ ಬಿ.ಸಿ.ಮುರಳಿ ಮಾದಯ್ಯ, ಸಹಕಾರ್ಯದರ್ಶಿ ಕೆ.ಎಸ್.ರತೀಶ್, ನಿರ್ದೇಶಕರಾದ ಟಿ.ಕೆ.ರಘು, ಸಿ.ಬಿ.ಆಶೀಷ್ ಅಪ್ಪಣ್ಣ, ಕೆ.ಕೆ.ಲೀಲಾವತಿ, ಕೆ.ಸಿ.ಕಾರ್ಯಪ್ಪ, ಬಿ.ಸಿ.ಕಾಳಯ್ಯ ಇದ್ದರು. ದೇವಾಲಯ ಸಮಿತಿಯಿಂದ ಅನ್ನಸಂತರ್ಪಣೆ ಮಾಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts