More

    ಶ್ರೀಆದಿಶಕ್ತಿ ಕೋಣನ ಮಾರಮ್ಮ ಜಾತ್ರೆಗೆ ಚಾಲನೆ : 20 ದಿನಗಳು ನಡೆಯುವ ಉತ್ಸವ

    ಚಾಮರಾಜನಗರ : ಹನೂರು ಸಮೀಪದ ಗುಂಡಾಲ್ ಜಲಾಶಯದ ಸಮೀಪ ಇರುವ ಕಲ್ಲುಕಟ್ಟೆಗೆ ಮಂಗಳವಾರ ಮಂಗಲ ಗ್ರಾಮದ ಅರ್ಚಕರು ಗ್ರಾಮಸ್ಥರೊಂದಿಗೆ ತೆರಳಿ ವಿಶೇಷ ಪೂಜೆ ನೆರವೇರಿಸುವ ಮೂಲಕ ಶ್ರೀ ಆದಿಶಕ್ತಿ ಕೋಣನ ಮಾರಮ್ಮನ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದರು.


    20 ದಿನಗಳ ಕಾಲ ಜಾತ್ರೆ ನಡೆಯಲಿರುವ ಹಿನ್ನೆಲೆಯಲ್ಲಿ ಬೆಳಗ್ಗೆ ಕೋಣನ ಮಾರಮ್ಮನ ದೇಗುಲದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಬಳಿಕ ದೇವಿಯ ಮೂರ್ತಿಯನ್ನು ಮಂಗಳವಾದ್ಯದೊಂದಿಗೆ ಮೆರವಣಿಗೆಯ ಮೂಲಕ ಕಲ್ಲುಕಟ್ಟೆಗೆ ಕರೆದೊಯ್ಯಲಾಯಿತು.


    ಅರ್ಚಕರಿಗೆ ಮುಡಿಸೇವೆ ನೆರವೇರಿಸಿ ದೇವಿಗೆ 101 ಪೂಜೆ ಸಲ್ಲಿಸಲಾಯಿತು. ಈ ವೇಳೆ ಅವೇಶಭರಿತ ಅರ್ಚಕರಿಗೆ ಕೇಲನ್ನು ನೀಡಲಾಯಿತು. ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಬಳಿಕ ಮೂರ್ತಿಯನ್ನು ಮೆರವಣಿಗೆಯ ಮೂಲಕ ಮೋಡಳ್ಳಿ ಬೀರೇಶ್ವರ ದೇಗುಲಕ್ಕೆ ಕರೆತರಲಾಯಿತು. ಭಕ್ತರು ವಾದ್ಯದ ತಾಳಕ್ಕೆ ಕುಣಿದು ಕುಪ್ಪಳಿಸಿದರು. ಮಂಗಲ ಸೇರಿದಂತೆ ಆನಾಪುರ, ಕಣ್ಣೂರು, ಕಾಮಗೆರೆ, ಗುಂಡಾಪುರ ಹಾಗೂ ಇನ್ನಿತರ ಗ್ರಾಮದ ಜನರು ಭಾಗವಹಿಸಿದ್ದರು.


    ಪಾರ್ವತಿ ಪರುಸೆ ಉತ್ಸವ: ಗ್ರಾಮದ ಪಾರ್ವತಿ ಒಕ್ಕಲಿನ ದೇವರ ಗುಡ್ಡರು ಕಳೆದ ವಾರದ ಹಿಂದೆ ಶ್ರೀ ಶೈಲಕ್ಕೆ ತೆರಳಿ ಸೋಮವಾರ ಗ್ರಾಮಕ್ಕೆ ಆಗಮಿಸಿದ್ದರು. ಈ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ರಾತ್ರಿ 9ರ ವೇಳೆಯಲ್ಲಿ ಪಾರ್ವತಿ ಪರುಷೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.


    ಉತ್ಸವ ವಿವಿಧ ಬಡಾವಣೆಗಳಲ್ಲಿ ಸಂಚರಿಸಿತು. ಈ ವೇಳೆ ಭಕ್ತರು ಹಣ್ಣುಕಾಯಿ ನೀಡಿ ಪೂಜೆ ಸಲ್ಲಿದರಲ್ಲದೇ ಕೆಲ ಭಕ್ತರು ಪಂಜಿನ ಸೇವೆ ಹಾಗೂ ಬಸವನಿಂದ ದಾಟಿಸಿಕೊಳ್ಳುವುದರ ಮೂಲಕ ಹರಕೆ ತೀರಿಸಿದರು. ಮೆರವಣಿಗೆಯುದ್ದಕ್ಕೂ ಯುವಕರು ವಾದ್ಯದ ತಾಳಕ್ಕೆ ಕುಣಿದು ಸಂಭ್ರಮಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts