More

    ಶ್ರೀಗಂಧ ಮರಗಳ್ಳರ ಬಂಧನ

    ಧಾರವಾಡ: ಶ್ರೀಗಂಧದ ಮರಗಳನ್ನು ಕಡಿದು ತುಂಡು ಮಾಡಿ ಮಾರಾಟ ಮಾಡುತ್ತಿದ್ದವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಭಾನುವಾರ ಬಂಧಿಸಿದ್ದಾರೆ.

    ಹುಬ್ಬಳ್ಳಿ ದೇವರಗುಡಿಹಾಳದ ಮೆಹಬೂಬಸಾಬ ಸವಣೂರ (24), ಕಲಘಟಗಿ ತಾಲೂಕಿನ ಶೀಗಿಗಟ್ಟಿ ಗ್ರಾಮದ ಕೃಷ್ಣಪ್ಪ ಲಮಾಣಿ (48), ಹಳಿಯಾಳ ತಾಲೂಕು ಮುರ್ಕವಾಡದ ಅರ್ಜುನ ದೇವೇಂದ್ರ ಮಾಚಕ್ (48) ಬಂಧಿತರು. ಬಂಧಿತರಿಂದ 5 ಲಕ್ಷ ರೂ. ಮೌಲ್ಯದ ಸುಮಾರು 70 ಕೆಜಿ ಶ್ರೀಗಂಧದ ತುಂಡು, ಚಕ್ಕೆಗಳು, 1 ತಕ್ಕಡಿ, ತೂಕದ ಕಲ್ಲುಗಳು ಹಾಗೂ 2 ಬೈಕ್​ಗಳನ್ನು ವಶಕ್ಕೆ ಪಡೆಯಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

    ಸತ್ತೂರಿನ ಸಂಜೀವಿನಿ ಪಾರ್ಕ್ ಹಾಗೂ ಶಹರ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ಶ್ರೀಗಂಧದ ಮರಗಳನ್ನು ಕಡಿದು ತುಂಡುಗಳನ್ನಾಗಿ ಪರಿವರ್ತಿಸಿ ಮಾರಾಟ ಮಾಡುವ ಸಮಯದಲ್ಲಿ ಬಂಧಿಸಿದ್ದಾರೆ.

    ಧಾರವಾಡ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಚವ್ಹಾಣ, ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್ ಕ್ಷೀರಸಾಗರ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ ಕೆಂಚಪ್ಪನವರ ಮಾರ್ಗದರ್ಶನದಲ್ಲಿ ನಡೆದ ದಾಳಿಯಲ್ಲಿ ವಲಯ ಅರಣ್ಯಾಧಿಕಾರಿ ಆರ್.ಎಸ್. ಉಪ್ಪಾರ, ಸಿಬ್ಬಂದಿ ಎಂ.ಎಂ. ತಲ್ಲೂರ, ಯಲ್ಲಾನಾಯಕ ಹಮಾಣಿ, ಶಿವಾನಂದ ಕಡಹಟ್ಟಿ, ರಘು ಕುರಿಯವರ, ವಿಠ್ಠಲ ಜೋನಿ, ಅವಿನಾಶ ರಣಕಾಂಬೆ, ಚಾಂದಬಾಷಾ ಮುಲ್ಲಾ ಪಾಲ್ಗೊಂಡಿದ್ದರು.</

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts