More

    ಶೋಷಿತರ ಪರ ಕೆಲಸವೆಂದರೆ ದೇವರ ಸೇವೆಗೆ ಸಮ

    ಹುಬ್ಬಳ್ಳಿ: ತಲೆಯ ಮೇಲೆ ಸ್ವಂತ ಸೂರಿಲ್ಲದಿದ್ದರೂ ನಂಬಿದ ದೇವರು ನೆರಳಲ್ಲಿರಬೇಕು ಎಂದು ಬಯಸುವ ಮುಗ್ಧ ಜನರೇ ನಮ್ಮಲ್ಲಿ ಹೆಚ್ಚಿದ್ದು, ದೇವರ ಬಗೆಗಿನ ಅವರ ಭಕ್ತಿಗೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ ಹೇಳಿದರು.

    ಇಲ್ಲಿನ ದೇಸಾಯಿ ಓಣಿ ಢೋರ ಗಲ್ಲಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಡಾ. ಬಾಬು ಜಗಜೀವನರಾಮ್ ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮದಿಂದ ಮಂಜೂರಾದ 50 ಲಕ್ಷ ರೂ. ವೆಚ್ಚದ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭಾನುವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

    ಶೋಷಿತರ ಪರ ಕೆಲಸ ಮಾಡುವುದು ಎಂದರೆ ದೇವರ ಸೇವೆಗೆ ಸಮವಾದಂತೆ ಎಂದರು.

    ಅಧ್ಯಕ್ಷತೆ ವಹಿಸಿದ್ದ ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಎಸ್.ಆರ್. ಪಾಟೀಲರ ಕೃಪೆಯಿಂದ ಶಾಸಕನಾಗಿ ಬಡವರ ಸೇವೆ ಮಾಡುವಂತಾಗಿದೆ. ಆಯ್ಕೆ ಸಮಿತಿಯ ಪಟ್ಟಿಯಲ್ಲಿ ನನ್ನ ಹೆಸರು ತೆಗೆದು ಹಾಕಲು ಹಲವು ಮುಖಂಡರು ಪ್ರಯತ್ನಿಸಿದರೂ ಅಬ್ಬಯ್ಯನವರ ಹೆಸರು ತೆಗೆಯಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದು ಟಿಕೆಟ್ ಸಿಗುವಂತೆ ಮಾಡಿದರು ಎಂದು ಸ್ಮರಿಸಿದರು. ಢೋರ ಗಲ್ಲಿಯ ಸಮುದಾಯ ಭವನದ ಉದ್ಘಾಟನೆಯನ್ನೂ ಪಾಟೀಲರಿಂದಲೇ ಮಾಡಿಸಲಾಗುವುದು ಎಂದು ಹೇಳಿದರು.

    ಮಾಜಿ ಸಭಾಪತಿ ವೀರಣ್ಣ ಮತ್ತಕಟ್ಟಿ ಮಾತನಾಡಿದರು. ಪಾಲಿಕೆ ಮಾಜಿ ಸದಸ್ಯ ವಿಜನಗೌಡ ಪಾಟೀಲ, ಮುಖಂಡರಾದ ಶರಣಪ್ಪ ಕೊಟಗಿ, ಪ್ರಸನ್ನ ಮಿರಜಕರ್, ಕುಮಾರ ಕುಂದನಹಳ್ಳಿ, ಮೋಹನ ಕೋಟೇಕರ, ಶಾಂತರಾಮ ಪೋಳ, ಗುರುಸಿದ್ದಪ್ಪ ಉಗರಗೋಳ, ಪ್ರಮೋದ ಶಿಂಧೆ, ಯಲ್ಲಪ್ಪ ಬೆಟಗೇರಿ, ಅಶೋಕ ಮಡ್ಡಿ, ಗುರುನಾಥ ಕಲಘಟಗಿ, ಬಸವರಾಜ ಅರಳಿಕಟ್ಟಿ, ಗಿರೀಶ ಮಡ್ಡಿ, ಆದರ್ಶ ಕೋಟೇಕರ, ಶೇಖಣ್ಣ ಬೆಂಡಿಗೇರಿ, ರಾಘು ಅರಳಿಕಟ್ಟಿ, ಮಂಜುನಾಥ ಅಮ್ಮಿನಭಾವಿ, ರಾಜಕುಮಾರ ಹುಟಗಿ, ]ೕನಿವಾಸ ಹುಟಗಿ, ಶಿವು ಬೆಂಡಿಗೇರಿ, ಲಿಡ್ಕರ್ ಜಿಲ್ಲಾ ಸಂಯೋಜಕ ಎ.ಎಸ್. ರುದ್ರೇಶ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts