More

    ಶಿವಕುಮಾರ ಶ್ರೀ ಬದುಕು ಎಲ್ಲರಿಗೂ ಮಾರ್ಗದರ್ಶಿ

     ಕಳಸ: ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಆದರ್ಶ ಬದುಕೇ ಸಮಾಜಕ್ಕೆ ಮಹತ್ವ ಸಂದೇಶ. ಅವರು ಸದಾ ಕರ್ತವ್ಯ ಪ್ರಜ್ಞೆಯ ಬಗ್ಗೆ ಸಮಾಜವನ್ನು ಎಚ್ಚರಿಸುತ್ತಿದ್ದರು ಎಂದು ಬಸವ ಸಮಿತಿ ಗೌರವಾಧ್ಯಕ್ಷ ಸತ್ಯನಾರಾಯಣ ಹೇಳಿದರು.

    ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ಬಸವ ಸಮಿತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಸಿದ್ದಗಂಗಾ ಮಠ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅವರ 116ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರತಿಯೊಬ್ಬರು ಅವರ ಕಾರ್ಯಕ್ಷೇತ್ರದ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿದರೆ ಯಾವ ವ್ಯವಸ್ಥೆಯೂ ಹದಗೆಡುವುದಿಲ್ಲ ಎಂಬ ಶಿವಕುಮಾರ ಸ್ವಾಮೀಜಿ ವಿಚಾರ ಅರ್ಥಪೂರ್ಣ ಹಾಗೂ ಎಲ್ಲರಿಗೂ ಮಾರ್ಗದರ್ಶಿಯಾಗಿದೆ ಎಂದರು.

    ಸಹಾಯಕ ಸಬ್​ಇನ್ಸ್​ಪೆಕ್ಟರ್ ಡಾ. ಸಿ.ಆರ್. ಮೋಹನ್ ಕುಮಾರ್ ಮಾತನಾಡಿ, ಸಕಲ ಜೀವರಾಶಿಗಳಿಗೂ ಲೇಸನ್ನೆ ಬಯಸಿದ ಶಿವಕುಮಾರ ಸ್ವಾಮೀಜಿ ಅವರ ಬದುಕು ಮತ್ತು ಸಾಧನೆ ನಮಗೆ ಪ್ರೇರಣೆಯಾಗಿದೆ. ಮಠ ಮಾನ್ಯಗಳು ಯಾವ ರೀತಿ ಸಾಮಾಜಿಕ ಚಟುವಟಿಕೆಗಳನ್ನು ಕೈ ಗೊಳ್ಳಬೇಕು ಎನ್ನುವುದನ್ನು ದೇಶಕ್ಕೆ ತಿಳಿಸಿದ ಶ್ರೇಯಸ್ಸು ಸಿದ್ದಗಂಗಾದ ಡಾ. ಶಿವಕುಮಾರ ಸ್ವಾಮೀಜಿಗೆ ಸಲ್ಲಬೇಕು ಎಂದರು..

    ಬಸವ ಸಮಿತಿ ಅಧ್ಯಕ್ಷ ಆನಂದ್ ಮಾತನಾಡಿ, ಪೂಜ್ಯ ಗುರುಗಳ ಭೌತಿಕ ಅನುಪಸ್ಥಿತಿಯಲ್ಲಿ ಅವರ ಜನ್ಮದಿನೋತ್ಸವದ ಮೂಲಕ ಸ್ಮರಿಸುತ್ತಿದ್ದೇವೆ. ಶ್ರೀಗಳು ಭೌತಿಕವಾಗಿ ಜತೆಗಿಲ್ಲದಿದ್ದರೂ ಭಾವನಾತ್ಮಕವಾಗಿ ನಮ್ಮೊಡನೆ ಸದಾ ಇರುತ್ತಾರೆ. ಗ್ರಾಮೀಣ ಬಡ ಮಕ್ಕಳ ಉದ್ದಾರಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದರು ಎಂದರು. ಮೂಡಿಗೆರೆ ತಾಲೂಕು ವೀರಶೈವ ಲಿಂಗಾಯತ ಮಹಾಸಭಾ ನಿರ್ದೇಶಕ ಡಿ.ಕೆ.ರಾಜು, ಶಿಕ್ಷಕ ಪುನೀತ್ ಕುಮಾರ್, ಮುಖಂಡರಾದ ಶ್ರೀನಿವಾಸ್, ಶಿಕ್ಷಕರಾದ ಸರಸ್ವತಿ ಪಾಂಡುರಂಗ, ಸೀತಾರಾಮ್ ಶ್ರೀವತ್ಸ, ರೂಪ, ಜಯಲಕ್ಷ್ಮೀ, ಭಾರತಿ, ಹರ್ಷಿತಾ, ಸುಮಾ, ನಳಿನಾ, ಮಾಲಾ ಜಿ. ರಾವ್, ಕುಸುಮಾ, ಪವಿತ್ರಾ, ಚೈತ್ರಾ ಇದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts