More

    ಶಾಲೆ ಪ್ರವೇಶ ದ್ವಾರದ ಡೆಕ್ ಸ್ಲಾೃಬ್ ನಿರ್ಮಾಣ ಆರಂಭ

    ಹನೂರು: ಶೈಕ್ಷಣಿಕ ವಲಯದ ಮಂಚಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರವೇಶ ದ್ವಾರದ ಮುಂಭಾಗದಲ್ಲಿ ಶಾಲಾ ಪ್ರಾರಂಭೋತ್ಸವದಂದೇ ಡೆಕ್ ಸ್ಲಾೃಬ್ ನಿರ್ಮಾಣ ಕಾಮಗಾರಿ ಪ್ರಾರಂಭಿಸಲಾಯಿತು.


    ಶಾಲಾ ಪ್ರಾರಂಭೋತ್ಸವದ ಹಿನ್ನೆಲೆಯಲ್ಲಿ ಮಂಗಳವಾರ ಶೈಕ್ಷಣಿಕ ವಲಯದ ಎಲ್ಲ ಶಾಲೆಗಳಲ್ಲಿ ಮಕ್ಕಳನ್ನು ಬರಮಾಡಿಕೊಳ್ಳುವಿಕೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಮೂಲ ಸೌಕರ್ಯದ ಬಗ್ಗೆ ಹೆಚ್ಚಿನ ಗಮನ ನೀಡಲಾಗಿತ್ತು. ಆದರೆ ಮಂಚಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಂಭಾಗದಲ್ಲಿ ಕಿರು ಕಾಲುವೆಗೆ ಅಡ್ಡಲಾಗಿ ನಿರ್ಮಿಸಿದ್ದ ಡೆಕ್ ಸ್ಲಾೃಬ್ ಕುಸಿದು 2 ತಿಂಗಳು ಕಳೆದಿತ್ತು. ಆದರೆ ಶಿಕ್ಷಣ ಇಲಾಖೆಯ ಅಧಿಕಾರಿಗಳಾಗಲಿ ಅಥವಾ ಸಂಬಂಧಪಟ್ಟ ಅಧಿಕಾರಿಗಳಾಗಲಿ ಡೆಕ್ ನಿರ್ಮಿಸಲು ಮುಂದಾಗಿರಲಿಲ್ಲ. ಇದರಿಂದ ಬುಧವಾರ ಶಾಲೆಗೆ ಆಗಮಿಸುವ ಮಕ್ಕಳು, ಡೆಕ್ ಕುಸಿದು ಬಾಕಿ ಉಳಿದಿರುವ ಶಿಥಿಲವಾದ ಕಿರು ಜಾಗದಲ್ಲಿ ಪ್ರವೇಶಿಸಬೇಕಾದ ದುಸ್ಥಿತಿ ಇತ್ತು. ಈ ಬಗ್ಗೆ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಡೆಕ್ ಸ್ಪಾೃಬ್ ನಿರ್ಮಿಸುವಂತೆ ಒತ್ತಾಯಿಸಿದ್ದರು.


    ಈ ಕುರಿತು ವಿಜಯವಾಣಿ ಬುಧವಾರದ ಸಂಚಿಕೆಯಲ್ಲಿ ‘ಮಕ್ಕಳಿಗೆ ಸ್ವಾಗತ ಕೋರುವ ಕುಸಿದ ಡೆಕ್!’ ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತ ಸೂಳೇರಿಪಾಳ್ಯ ಗ್ರಾಮ ಪಂಚಾಯಿತಿ ಆಡಳಿತ ಕುಸಿದಿದ್ದ ಡೆಕ್ ಸ್ಲಾೃಬ್ ತೆರೆವುಗೊಳಿಸಿ ನಿರ್ಮಾಣ ಕಾಮಗಾರಿಯನ್ನು ಪ್ರಾರಂಭಿಸಿದೆ. ಇದರಿಂದ ಕುಸಿದ ಡೆಕ್‌ನಿಂದ ವಿದ್ಯಾರ್ಥಿಗಳಿಗೆ ಮುಕ್ತಿ ಸಿಕ್ಕಿದಂತಾಗಿದೆ.


    ಈ ಸಂಬಂಧ ಪಿಡಿಒ ಸುರೇಶ್ ವಿಜಯವಾಣಿಯೊಂದಿಗೆ ಮಾತನಾಡಿ, ಕುಸಿದಿದ್ದ ಡೆಕ್‌ನಿಂದಾಗಿ ವಿದ್ಯಾರ್ಥಿಗಳಿಗೆ ತೊಂದರೆಯಾಗಿತ್ತು. ಇದೀಗ ಶಾಲೆ ಪ್ರಾರಂಭವಾಗಿದೆ. ಹಾಗಾಗಿ ಡೆಕ್ ನಿರ್ಮಿಸುವುದು ನಮ್ಮ ಆದ್ಯ ಕರ್ತವ್ಯ. ಈ ಬಗ್ಗೆ ಅಗತ್ಯ ಕ್ರಮಕೈಗೊಂಡು ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts