More

    ಶಾಲಾ ಮಕ್ಕಳಿಗೆ ಅದ್ದೂರಿ ಸ್ವಾಗತ

    ಸುಂಟಿಕೊಪ್ಪ: ಶಾಲೆ ಪ್ರಾರಂಭೋತ್ಸವದ ಅಂಗವಾಗಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಯಲ್ಲಿ ತಳಿರು-ತೋರಣಗಳನ್ನು ಕಟ್ಟಿ ಮಕ್ಕಳಿಗೆ ಶಾಲಾಭಿವೃದ್ಧಿ ಸಮಿತಿ ಸದಸ್ಯರು ಹಾಗೂ ಶಿಕ್ಷಕರು ಸಿಹಿ ವಿತರಿಸಿ ಅದ್ದೂರಿ ಸ್ವಾಗತ ಕೋರಿದರು.


    ಸರ್ಕಾರಿ ಶಾಲೆಯ ಶಿಕ್ಷಕರು ಸೇರಿದಂತೆ ಶಾಲಾಭಿವೃದ್ಧಿ ಸಮಿತಿಯವರು ಮಕ್ಕಳು, ಪಾಲಕಕರಿಗೆ ಅದ್ದೂರಿ ಸ್ವಾಗತ ಕೋರಿದರು. ಸರ್ಕಾರದಿಂದ ವಿತರಿಸಲಾಗುವ ಉಚಿತ ಪಠ್ಯಪುಸ್ತಕ ಹಾಗೂ ಸಮವಸ್ತ್ರವನ್ನು ಮಕ್ಕಳಿಗೆ ವಿತರಿಸಿದರು.
    ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಯ ಶಿಕ್ಷಕರು ಹಾಗೂ ಮಕ್ಕಳು ವಾದ್ಯಗೋಷ್ಠಿಯೊಂದಿಗೆ ಜಾಥಾ ನಡೆಸಿದರು. ಮಕ್ಕಳು ಯಾವುದೇ ಕಾರಣಕ್ಕೂ ಶಿಕ್ಷಣದಿಂದ ಮಂಚಿತಗೊಳ್ಳದೆ ದಾಖಲಾಗುವಂತೆ ಅರಿವು ಮೂಡಿಸಲಾಯಿತು.


    ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ರಫೀಕ್ ಖಾನ್, ಪಂಚಾಯಿತಿ ಸದಸ್ಯೆ ವಸಂತಿ, ಎಸ್‌ಡಿಎಂಸಿ ಸದಸ್ಯ ಶಿವಪ್ಪ, ಮುಖ್ಯ ಶಿಕ್ಷಕಿ ಗೀತಾ, ಪ್ರೌಢಶಾಲೆಯ ಮುಖ್ಯ ಶಿಕ್ಷಕ ಬಾಲಕೃಷ್ಣ, ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸಿ.ಟಿ. ಸೋಮಶೇಖರ್, ಲಿಯೋನಾ, ಪ್ರಕಾಶ್, ಸುನಂದಾ, ಚಿತ್ರಾ, ಶಾಂತಾ ಹೆಗ್ಡೆ, ಜಯಶ್ರೀ, ಪ್ರಾಥಮಿಕ ಶಾಲೆಯ ಶಿಕ್ಷಕರಾದ ದೈಹಿಕ ಶಿಕ್ಷಣ ಶಿಕ್ಷಕ ಪಿ.ಇ.ನಂದ, ಸಹ ಶಿಕ್ಷಕರಾದ ಸೌಭಾಗ್ಯಾ, ಚಂದ್ರವತಿ, ಉಷಾ, ಇಂದಿರಾ ಹಾಗೂ ಪಾಲಕರು ಇದ್ದರು.
    ಚಿತ್ರ.1: ಉಚಿತ ಪಠ್ಯಪುಸ್ತಕ ಹಾಗೂ ಸಮವಸ್ತ್ರವನ್ನು ಮಕ್ಕಳಿಗೆ ವಿತರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts