More

    ಶರಣರ ಸಂದೇಶ ಜೀವನಕ್ಕೆ ಪ್ರೇರಣೆ

    ಅರಕಲಗೂಡು: ಶಿವಶರಣರ ವಚನಗಳ ಮೂಲಕ ಬದುಕಿಗೆ ದಾರಿ ತೋರಿದ ಬಸವಣ್ಣ, ಅಕ್ಕಮಹಾದೇವಿ, ನಾಗಲಾಂಬಿಕೆ ಅವರ ಸಂದೇಶ ನಮ್ಮೆಲ್ಲರ ಜೀವನಕ್ಕೆ ಪ್ರೇರಣೆ ಎಂದು ಕೆಸವತ್ತೂರು ಶ್ರೀ ಸಿದ್ದಲಿಂಗೇಶ್ವರ ವಿರಕ್ತ ಮಠದ ಬಸವರಾಜೆಂದ್ರ ಸ್ವಾಮೀಜಿ ತಿಳಿಸಿದರು.

    ಅಕ್ಕಮಹಾದೇವಿ ಮಹಿಳಾ ವೇದಿಕೆ ಹಾಗೂ ಶರಣ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಶನಿವಾರ ತಾಲೂಕಿನ ಕೆಸವತ್ತೂರು ಗ್ರಾಮದಲ್ಲಿನ ಶ್ರೀಮಠದ ಅವರಣದಲ್ಲಿ ಆಯೋಜಿಸಿದ್ದ ಅಕ್ಕಮಹಾದೇವಿ 2ನೇ ಹುಣ್ಣುಮೆ ಜಯಂತಿ ಕಾರ್ಯಕ್ರಮದಲ್ಲಿ ಅಕ್ಕಮಹಾದೇವಿ ಅವರ ಭಾವಚಿತ್ರಕ್ಕೆ ಪುಪ್ಪಾರ್ಚನೆ ಮಾಡಿ ಆರ್ಶೀವಚನ ನೀಡಿದರು. ಅಕ್ಕಮಹಾದೇವಿ, ಬಸವಣ್ಣ ಅವರ ವಿಚಾರಧಾರೆಗಳನ್ನು ಪ್ರತಿಯೊಬ್ಬರಿಗೂ ತಲುಪಿಸಬೇಕಾಗಿದೆ ಎಂದರು.

    ಶರಣ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷ ಎಂ.ಎನ್.ಕುಮಾರಸ್ವಾಮಿ ಮಾತನಾಡಿ, ಮಕ್ಕಳಿಗೆ ವಿದ್ಯೆ, ಕ್ರೀಡೆಯೊಂದಿಗೆ ಶಿವಶರಣರ ವಚನಗಳನ್ನೂ ಕಲಿಸಬೇಕು. ಜತೆಗೆ ಸುತ್ತಲಿನ ಪರಿಸರ, ಕೆರೆ ಕಟ್ಟೆಗಳು, ನದಿ ತೀರದ ಪ್ರದೇಶಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದರು.

    ಸಾಹಿತಿ ಸೀಬಳ್ಳಿ ಸೋಮಶೇಖರ್ ಅವರು ಅಕ್ಕಮಹಾದೇವಿ ಹಾಗೂ ಶಿವ ಶರಣರ ವಚಗಳ ಸಂದೇಶ ಕುರಿತು ವಿವರಿಸಿದರು.
    ದಾಸೋಹ ದಾನಿ ನಿಂಗರಾಜು, ಅಕ್ಕಮಹಾದೇವಿ ಬಳಗದ ಸದಸ್ಯರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts