More

    ಶರಣರಿಂದ ಸಾಮಾಜಿಕ ನ್ಯಾಯ

    ಬ್ಯಾಡಗಿ: 12ನೇ ಶತಮಾನದಿಂದಲೂ ಶಿವಶರಣರು ಸಾಮಾಜಿಕ ಮೌಢ್ಯತೆ ಹಾಗೂ ಧೋರಣೆಗಳ ವಿರುದ್ಧ ಹೋರಾಟ ನಡೆಸಿದ ಪರಿಣಾಮ ಸರ್ವರಿಗೂ ಸಾಮಾಜಿಕ ನ್ಯಾಯ ಸಿಕ್ಕಿದೆ ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.

    ತಹಸೀಲ್ದಾರ್ ಕಾರ್ಯಾಲಯದ ಆವರಣದಲ್ಲಿ ಆಯೋಜಿಸಿದ್ದ ಅಂಬಿಗರ ಚೌಡಯ್ಯ ಜಯಂತ್ಯುತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

    ಅಂಬಿಗರ ಚೌಡಯ್ಯ ಬಸವಣ್ಣನವರ ಅನುಭವ ಮಂಟಪದಲ್ಲಿ ಮುಂಚೂಣಿ ಸ್ಥಾನ ಪಡೆದಿದ್ದರು. ಸಮಾಜದ ಅಂಕು ಡೊಂಕುಗಳನ್ನು ತಿದ್ದಲು ವಚನ ಸಾಹಿತ್ಯದ ಮೂಲಕ ಶ್ರಮಿಸಿದ್ದರು. ಸಮಾಜದ ಏಳಿಗೆಗಾಗಿ ಹಿಂದಿನ ಅವಧಿಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಅಂಬಿಗರ ಚೌಡಯ್ಯನವರ ಪೀಠಕ್ಕೆ 1 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದರು. ಇನ್ನೂ 10 ಕೋಟಿ ರೂ. ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

    ಉಪನ್ಯಾಸಕ ಪ್ರಕಾಶ ಬಾರ್ಕೆರ ಮಾತನಾಡಿ, ಕಾಯಕದಿಂದಲೇ ಸಾಕಷ್ಟು ಖ್ಯಾತಿ ಗಳಿಸಿದ ಶರಣರ ಜೀವನದಿಂದ ಸಾಕಷ್ಟು ಕಲಿಯುವುದಿದೆ. ಆಡಂಬರ ಹಾಗೂ ಪ್ರಚಾರಗಳಿಂದ ದೂರ ಉಳಿದ ಅವರು ಸಮಾಜ ಸೇವೆಯನ್ನು ಗುರಿಯಾಗಿಟ್ಟುಕೊಂಡು ಕಾಯಕ ಸಿದ್ಧಾಂತಕ್ಕೆ ಒತ್ತು ನೀಡಿದ್ದರು. ಸಾವಿರಾರು ವರ್ಷಗಳ ಹಿಂದೆಯೇ ಸಮಾಜ ಸುಧಾರಣೆಗೆ ವಚನ ಸಾಹಿತ್ಯದ ಮೂಲಕ ಶ್ರಮಿಸಿದ್ದರು. ಚೌಡಯ್ಯದಾನಪುರ ಜನ್ಮಸ್ಥಳವೆಂದು ತಿಳಿದಿದ್ದರೂ ಸಾಕಷ್ಟು ಸಂಶೋಧನೆ ನಡೆಯಬೇಕಿದೆ. ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆ ವಿಭಾಗ ತೆರೆಯಬೇಕಿದೆ ಎಂದರು.

    ಇದಕ್ಕೂ ಮುನ್ನ ಅಂಬಿಗರ ಚೌಡಯ್ಯನವರ ಭಾವಚಿತ್ರದ ಮೆರವಣಿಗೆ ಜರುಗಿತು. ತಹಸೀಲ್ದಾರ್ ಶರಣಮ್ಮ ಕಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುರಿಗೆಪ್ಪ ಶೆಟ್ಟರ್, ಸುರೇಶ ಆಸಾದಿ, ರವೀಂದ್ರ ಪಟ್ಟಣಶೆಟ್ಟಿ, ರಮೇಶ ಸುತ್ತಕೋಟಿ, ಸಂಜೀವ ಮಡಿವಾಳರ, ಗಂಗಾಮತ ಸಮಾಜದ ಜಿಲ್ಲಾಧ್ಯಕ್ಷ ಮಂಜುನಾಥ ಭೋವಿ, ಪುರಸಭೆ ಸದಸ್ಯ ಮಂಜಣ್ಣ ರ್ಬಾ, ತಾಲೂಕಾಧ್ಯಕ್ಷ ಜೀತೇಂದ್ರ ಸುಣಗಾರ, ನಿಂಗಪ್ಪ ಹೆಗ್ಗಣ್ಣನವರ ಇತರರಿದ್ದರು. ಗ್ರಾಮಲೆಕ್ಕಾಧಿಕಾರಿ ಗುಂಡಪ್ಪ ಎಂ. ಕಾರ್ಯಕ್ರಮ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts