More

    ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳ ಎದೆಯಲ್ಲಿ ದ್ವೇಷ ಭಾವನೆ ಕೆರಳಿಸಲು ಹುನ್ನಾರ

    ಶಿವಮೊಗ್ಗ: ಪೌರತ್ವ ತಿದ್ದುಪಡಿ ಕಾಯ್ದೆಯನ್ನೇ ಮುಂದಿಟ್ಟುಕೊಂಡು ಕೆಲವರು ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳ ಎದೆಯಲ್ಲಿ ದ್ವೇಷ ಭಾವನೆ ಕೆರಳಿಸುತ್ತಿದ್ದಾರೆ ಎಂದು ಅಖಿಲ ಭಾರತೀಯ ಕುಟುಂಬ ಪ್ರಬೋಧನ್ ಸಂಯೋಜಕ ಕಜಂಪಾಡಿ ಸುಬ್ರಹ್ಮಣ್ಯ ಭಟ್ ದೂರಿದರು.

    ನಗರದ ಸವೋದಯ ಶಾಲೆಯಲ್ಲಿ ಭಾನುವಾರ ಆರ್​ಎಸ್​ಎಸ್ ಬಸವೇಶ್ವರ ಶಾಖೆ ವಾರ್ಷಿಕೋತ್ಸವದಲ್ಲಿ ಬೌದ್ಧಿಕ್ ನೀಡಿದ ಅವರು, ನಾವೆಲ್ಲ ಒಂದೇ ಎಂಬುದು ನಮ್ಮ ಸಂಸ್ಕೃತಿ. ನಾನು ಮಾತ್ರ ಒಂದು ಎಂಬುದು ಪರರ ಸಂಸ್ಕೃತಿ. ನಾನು ಮಾತ್ರ ಒಂದು ಎಂಬುವವರು ಅಹಿಂದುಗಳು ಎಂದರು.

    ಸಂಘಟನೆ ಮೂಲಕ ಸ್ವಯಂಸೇವಕರನ್ನು ತಯಾರು ಮಾಡಲಾಗಿದೆ. ನಮ್ಮ ಸಂಸ್ಕೃತಿಗೆ ವಿರುದ್ಧವಾದವುಗಳನ್ನು ತೆಗೆದುಹಾಕಬೇಕಿದೆ. ಮೂರನೇಯದಾಗಿ ಸಂಘರ್ಷವನ್ನು ಮಾಡಬೇಕಾಗಿದೆ. ಅದು ಈಗ ಸಿಎಎ ಮೂಲಕ ಆರಂಭವಾಗಿದೆ ಎಂದರು.

    ಸೇವೆಯಲ್ಲಿ ಕ್ರೖೆಸ್ತ ಮಿಷನರಿಗಳನ್ನು ಮೀರಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಲಾಗುತ್ತಿತ್ತು. ಆದರೆ ಸಂಘದ ಸೇವಾ ಚಟುವಟಿಕೆಗಳು ಜಗತ್ತನ್ನೇ ಬೆರಗುಗೊಳಿಸುತ್ತಿವೆ. ಜಗತ್ತಿಗೆ ಭಾರತೀಯರ ಕೊಡುಗೆ ಸೊನ್ನೆ ಎಂದು ವ್ಯಂಗ್ಯ ಮಾಡಲಾಗುತ್ತಿತ್ತು. ಆದರೆ ಸೊನ್ನೆಯಲ್ಲಿ ಅಡಗಿದೆ ದೊಡ್ಡ ಶಕ್ತಿ ಎಂಬುದನ್ನು ಜಗತ್ತಿಗೆ ತೋರಿಸಲಾಗಿದೆ. ಹಾಗಾಗಿ ಸಂಘಕ್ಕೆ ಆದಿಯೂ ಇಲ್ಲ, ಅಂತ್ಯವೂ ಇಲ್ಲ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts