More

    ವಿದ್ಯಾರ್ಥಿಗಳ ಚಿತ್ತ ಶಾಲೆಯತ್ತ 3 1ಕ್ಕೆ


    ಕೆ.ಎಸ್.ಪ್ರಣವಕುಮಾರ್ ಚಿತ್ರದುರ್ಗ: ಸತತ ಎರಡು ತಿಂಗಳ ಬೇಸಿಗೆ ರಜೆಯ ಮೋಜಿನಲ್ಲಿದ್ದ ಚಿಣ್ಣರು ಶಾಲೆಯ ಮೆಟ್ಟಿಲೇರಲು ತುದಿಗಾಲಿನಲ್ಲಿ ನಿಂತಿದ್ದಾರೆ. ಜಿಲ್ಲಾದ್ಯಂತ ಮೇ 29 ರಂದೇ 1 ರಿಂದ 10ನೇ ತರಗತಿಯ ಶಾಲೆಗಳು ಆರಂಭವಾಗುತ್ತಿದ್ದರೂ ಮಕ್ಕಳ್ಯಾರೂ ಬರುತ್ತಿಲ್ಲ…!
    ಇನ್ನಷ್ಟು ಸಿದ್ಧತೆಗಾಗಿ ಶಿಕ್ಷಣ ಇಲಾಖೆ ಎರಡು ದಿನ ಮುಂದೂಡಿದ್ದು, ಮುಖ್ಯಶಿಕ್ಷಕರು, ಶಿಕ್ಷಕರು, ಸಹ ಶಿಕ್ಷಕರು, ಸಿಬ್ಬಂದಿ ಮಾತ್ರ ಶಾಲೆಗೆ ಬರಲಿದ್ದಾರೆ. ಅಧಿಕೃತವಾಗಿ ಮೇ 31 ರಂದು ಮಕ್ಕಳು ದಂಡು ಹರಿದು ಬರಲಿದೆ.


    *ಮುಂದೂಡಲು ಕಾರಣಗಳೇನು?: ನಿಗದಿಯಂತೆ 29ಕ್ಕೆ ಶಾಲೆ ಶುರುವಾಗಬೇಕಿತ್ತು. ಆದರೆ, ಮಕ್ಕಳನ್ನು ಸೆಳೆಯುವ ಸಲುವಾಗಿ ಶಾಲೆಗಳಿಗೆ ಸುಣ್ಣ-ಬಣ್ಣದ ಕಾರ್ಯ ಹಲವೆಡೆ ಭರದಿಂದ ಸಾಗುತ್ತಿದೆ. ಈ ಬಾರಿ ಸ್ವಚ್ಛತೆಗೂ ಹೆಚ್ಚು ಆದ್ಯತೆ ನೀಡಲಾಗುತ್ತಿದೆ.

    ರಜೆ ಅವಧಿಯಲ್ಲಿ ಜಿಲ್ಲೆಯ ಹಲವು ಸರ್ಕಾರಿ ಶಾಲೆಗಳ ಆವರಣಗಳಲ್ಲಿ ಪಾರ್ಥೇನಿಯಂ ಗಿಡಗಳು ಎಗ್ಗಿಲ್ಲದೆ ಬೆಳೆದಿವೆ. ಡಿಡಿಪಿಐ ಸೂಚನೆ ಮೇರೆಗೆ ಆರೂ ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸ್ವಚ್ಛತೆಯ ಉಸ್ತುವಾರಿ ಹೊತ್ತಿದ್ದಾರೆ.
    ಶಾಲೆಗಳಲ್ಲಿನ ಶೌಚಗೃಹಗಳ ಸ್ವಚ್ಛತೆಗೂ ಸರ್ಕಾರ ಅನುದಾನ ಬಿಡುಗಡೆ ಮಾಡುತ್ತಿದ್ದು, ಶುಚಿಯಾಗಿ ಇಟ್ಟುಕೊಳ್ಳಲು ಶಿಕ್ಷಣ ಇಲಾಖೆ ಆದೇಶಿಸಿದೆ. ಕೊಠಡಿಗಳ ಗೋಡೆ, ಬೆಂಚು, ಟೇಬಲ್‌ಗಳಲ್ಲಿಯೂ ದೂಳು ಕಾಣದಂತೆ ಸಿಬ್ಬಂದಿ ಸಹಕಾರ ಪಡೆದು ಸ್ವಚ್ಛಗೊಳಿಸಲಾಗುತ್ತಿದೆ.


    *ಹೇಗಿರಲಿದೆ ಸ್ವಾಗತ: ಶಾಲೆಗಳನ್ನು ತಳಿರು, ತೋರಣಗಳಿಂದ ಸಿಂಗರಿಸಿ, ವಿದ್ಯಾರ್ಥಿಗಳಿಗೆ ಹೂವಿನ ಮಳೆಗೈದು ಸ್ವಾಗತಿಸಲಾಗುವುದು. ಹಲವೆಡೆ ಜಿಲೇಬಿ, ಮೈಸೂರು ಪಾಕ್ ತಯಾರಿಸಿಕೊಳ್ಳಲಾಗುತ್ತಿದೆ. ಮಧ್ಯಾಹ್ನದ ಬಿಸಿಯೂಟಕ್ಕೆ ಪಾಯಸದೊಂದಿಗೆ ಸಿಹಿ ಹಂಚಿ ಮಕ್ಕಳ ಮನಸ್ಸನ್ನು ಸಂತೃಪ್ತಿಗೊಳಿಸಿ ಶೈಕ್ಷಣಿಕ ವರ್ಷಾರಂಭವನ್ನು ಅದ್ದೂರಿಯಾಗಿಯೇ ಆಚರಿಸಲು ತೀರ್ಮಾನಿಸಲಾಗಿದೆ.

    *ಕೋಟ್
    ಕಲಿಕೆಗೆ ಹಿಂದಿಗಿಂತಲೂ ಈ ಬಾರಿ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಹಿಂದುಳಿದ ಮಕ್ಕಳ ಕುರಿತು ವಿಶೇಷ ಗಮನ ಹರಿಸಲಾಗುವುದು. ಈ ನಿಟ್ಟಿನಲ್ಲಿ ಮೊದಲ ದಿನದಿಂದಲೇ ಶಿಕ್ಷಕರು ಮಹತ್ವದ ಪಾತ್ರ ವಹಿಸಲಿದ್ದಾರೆ.
    ಕೆ.ರವಿಶಂಕರ್ ರೆಡ್ಡಿ, ಡಿಡಿಪಿಐ
    (ರವಿಶಂಕರ್‌ರೆಡ್ಡಿ)

    *ಕೋಟ್
    ಗ್ರಾಮೀಣ ಸೊಗಡನ್ನು ಪರಿಚಯಿಸಲು ಎತ್ತಿನ ಗಾಡಿಗಳಿಂದಲೂ ಮಕ್ಕಳನ್ನು ಶಾಲೆಗೆ ಕರೆತರಲಾಗುವುದು. ಹಬ್ಬದ ರೀತಿಯಲ್ಲಿ ಶಾಲೆ ಆರಂಭವಾಗಲಿದೆ. ನಗರ, ಗ್ರಾಮೀಣ ಭಾಗಗಳಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
    ನಾಗಭೂಷಣ್, ಬಿಇಒ, ಹಿರಿಯೂರು

    ವಿದ್ಯಾರ್ಥಿಗಳ ನೋಂದಣಿ 2,56,541
    ಜಿಲ್ಲೆಯಲ್ಲಿ ಕಿರಿಯ ಪ್ರಾಥಮಿಕ 858, ಹಿರಿಯ ಪ್ರಾಥಮಿಕ 1,168 ಹಾಗೂ 490 ಪ್ರೌಢ ಸೇರಿ 2,516 ಶಾಲೆಗಳಿದ್ದು, ಈ ಬಾರಿ ಸರ್ಕಾರಿ, ಅಂತರಾಜ್ಯ, ಅನುದಾನ, ಅನುದಾನ ರಹಿತ, ಬುಡಕಟ್ಟು ಕಲ್ಯಾಣ ಇಲಾಖೆಯಡಿ 1ರಿಂದ 10ನೇ ತರಗತಿಗೆ ಈವರೆಗೂ 2,56,541 ವಿದ್ಯಾರ್ಥಿಗಳು ನೋಂದಣಿಯಾಗಿದ್ದಾರೆ. ಹಿಂದಿನ ವರ್ಷ 2,55,174 ನೋಂದಣಿಯಾಗಿದ್ದು, ವಿದ್ಯಾರ್ಥಿಗಳ ಸಂಖ್ಯೆಯಲ್ಲಿ 1,367 ಏರಿಕೆಯಾಗಿದೆ.

    ಜಿಲ್ಲೆಯಲ್ಲಿನ ಶಿಕ್ಷಕರ ವಿವರ
    ತಾಲೂಕು- ಸರ್ಕಾರಿ ಶಾಲೆ ಮಂಜೂರು- ಕಾರ್ಯನಿರ್ವಹಣೆ- ಅನುದಾನಿತ ಶಾಲೆ ಮಂಜೂರು- ಕಾರ್ಯನಿರ್ವಹಣೆ
    ಚಳ್ಳಕೆರೆ-1,658-1,308-573-433
    ಚಿತ್ರದುರ್ಗ-1,525-1,431-503-401
    ಹಿರಿಯೂರು-1385-1178-262-183
    ಹೊಳಲ್ಕೆರೆ-861-826-271-190
    ಹೊಸದುರ್ಗ-1,136-1,072-517-377
    ಮೊಳಕಾಲ್ಮೂರು-792-600-152-118

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts