More

    ವಿಜಯಪುರದ ಕೋಲಾರ-ದೇವನಹಳ್ಳಿ ಬೈಪಾಸ್ ರಸ್ತೆ ಕಾಮಗಾರಿ ಅಪೂರ್ಣ, ಹೆಚ್ಚಿದ ಅಪಘಾತ

    ವಿಜಯಪುರ: ಪಟ್ಟಣದ ಕೋಲಾರ-ದೇವನಹಳ್ಳಿ ಬೈಪಾಸ್ ರಸ್ತೆಯ ವಿಸ್ತರಣೆ ಕಾಮಗಾರಿ ಹಲವು ವರ್ಷಗಳಿಂದ ಕುಂಟುತ್ತಾ ಸಾಗಿದ್ದು, ರಸ್ತೆ ಎರಡೂ ಬದಿಯಲ್ಲಿ ಹಳ್ಳ ತೋಡಿರುವುದರಿಂದ ವಾಹನಗಳು ಹಳ್ಳಕ್ಕೆ ಬಿದ್ದು, ಅಪಘಾತ ಪ್ರಕರಣ ಹೆಚ್ಚುತ್ತಿವೆ.

    ಮಹಾರಾಷ್ಟ್ರದಿಂದ ಕೋಲಾರಕ್ಕೆ ಕೋಳಿಗೊಬ್ಬರ ಸಾಗಿಸುತ್ತಿದ್ದ 16 ಚಕ್ರಗಳ ಲಾರಿ ಮಂಗಳವಾರ ಪಲ್ಟಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

    ಕೋಲಾರ-ದೇವನಹಳ್ಳಿ ಮಾರ್ಗದ ಪ್ರಮುಖ ಹೆದ್ದಾರಿ ಇದಾಗಿದ್ದು, ವಾಹನ ದಟ್ಟಣೆ ಇದ್ದು, ಬೈಪಾಸ್‌ನ ಸುಮಾರು 4 ಕಿಮೀ ರಸ್ತೆ ಪೈಕಿ 2 ಕಿಮೀಗೂ ಹೆಚ್ಚು ಡಾಂಬರೀಕರಣ ಪೂರ್ಣಗೊಂಡಿದೆ. ಆದರೆ ಉಳಿದ ಕೆಲವೆಡೆ ಕಾಮಗಾರಿ ಮೊಟುಕುಗೊಂಡಿದ್ದು, ವೇಗವಾಗಿ ಬರುವ ವಾಹನಗಳು ಆಗಾಗ್ಗೆ ಅಪಘಾತಕ್ಕೀಡಾಗುವುದು ಸಾಮಾನ್ಯವಾಗಿದೆ. ಇನ್ನಾದರೂ ಸಂಬಂಧಿಸಿದ ಇಲಾಖೆ, ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

    ಕಾಮಗಾರಿ ಊರ್ಣಗೊಂಡಿರುವುದರಿಂದ ಅಪಘಾತ ಹೆಚ್ಚುತ್ತಿವೆ. ಇತ್ತೀಚೆಗೆ ನಾಡಕಚೇರಿ ಸಿಬ್ಬಂದಿ ನಾಗೇಶ್ ಅವರು ಇದೇ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಶೀಘ್ರವೇ ರಸ್ತೆ ಕಾಮಗಾರಿ ಪೂರ್ಣಗೊಳಿಸದಿದ್ದಲ್ಲಿ ಸುತ್ತಮುತ್ತಲ ಗ್ರಾಮಸ್ಥರು ಸೇರಿ ಪ್ರತಿಭಟನೆ ನಡೆಸಲಾಗುವುದು.
    ಬಸವರಾಜು
    ಜಿಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ

    ಕೆಲವು ಕಡೆ ರಸ್ತೆಯಲ್ಲಿನ ವಿದ್ಯುತ್ ಕಂಬ ಸ್ಥಳಾಂತರಿಸಬೇಕಿದೆ. ಬೆಸ್ಕಾಂನಿಂದ ಈಗ ಕ್ರಿಯಾಯೋಜನೆ ನೀಡಿದ್ದು, ಅದಕ್ಕೆ ತಗಲುವ ಹಣವನ್ನು ಲೋಕೋಪಯೋಗಿ ಇಲಾಖೆಯಿಂದ ಪಾವತಿಸಲಾಗುತ್ತಿದೆ. ಈ ಪ್ರಕ್ರಿಯೆ ಪೂರ್ಣಗೊಂಡ ನಂತರ ರಸ್ತೆ ಕಾಮಗಾರಿ ಪೂರ್ಣಗೊಳಿಸಲಾಗುವುದು.
    ಶ್ರೀನಿವಾಸ್
    ಸಹಾಯಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts