More

    ವರ್ಷಧಾರೆಯ ಅಬ್ಬರಕ್ಕೆ ಜನಜೀವನ ಅಸ್ತವ್ಯಸ್ತ

    ಮುಂಡರಗಿ: ಪಟ್ಟಣ ಸೇರಿ ತಾಲೂಕಿನ ವಿವಿಧೆಡೆ ಬುಧವಾರ ಎರಡು ಗಂಟೆಗೂ ಹೆಚ್ಚು ಸಮಯ ರಭಸದಿಂದ ಮಳೆ ಸುರಿದಿದೆ.

    ವರ್ಷಧಾರೆಯ ಅಬ್ಬರಕ್ಕೆ ಪಟ್ಟಣದ ಚರಂಡಿಗಳು ತುಂಬಿ ಹರಿದವು. ಶ್ರೀ ಕನಕದಾಸರ ವೃತ್ತದ ಬಳಿಯಿಂದ ಜೆ.ಎ. ಪಿಯು ಕಾಲೇಜ್ ಮುಂಭಾಗದ ರಸ್ತೆ ಮೇಲೆ ನೀರು ಸಂಗ್ರಹವಾಗಿ ಕೆಲಕಾಲ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ನಿರೀಕ್ಷಣ ಮಂದಿರದ ಆವರಣ, ಪೊಲೀಸ್ ಠಾಣೆ ಆವರಣ, ತರಕಾರಿ ಮಾರುಕಟ್ಟೆ ಆವರಣದಲ್ಲಿ ಅಪಾರ ಪ್ರಮಾಣದ ಮಳೆ ನೀರು ಸಂಗ್ರಹವಾಗಿತ್ತು. ಕಚ್ಚಾ ರಸ್ತೆಗಳ ಮೇಲೆ ನೀರು ನಿಂತು ಜನರ ಓಡಾಟಕ್ಕೆ ಅಡಚಣೆಯಾಯಿತು.

    ತಾಲೂಕಿನ ಕೆಲವೆಡೆ ಜಮೀನು ಹಾಗೂ ಬದುವುಗಳೆಲ್ಲ ಜಲಾವೃತವಾಗಿದ್ದವು. ಮೊದಲೇ ತೇವಾಂಶ ಹೆಚ್ಚಳವಾಗಿ ಉಳ್ಳಾಗಡ್ಡಿ, ಸೂರ್ಯಕಾಂತಿ ಬೆಳೆಗಳಿಗೆ ಹಳದಿ ರೋಗ ಸೇರಿ ಮತ್ತಿತರ ರೋಗಗಳು ಕಾಣಿಸಿಕೊಂಡಿದ್ದವು. ಬುಧವಾರ ಸುರಿದ ರಭಸದ ಮಳೆಗೆ ಕೆಲವೆಡೆ ಜಮೀನಿನ ಬೆಳೆಗಳು ಸಂಪೂರ್ಣವಾಗಿ ಜಲಾವೃತಾಗಿವೆ. ತೇವಾಂಶ ಹೆಚ್ಚಳವಾಗಿ ಬೆಳೆಗಳಿಗೆ ರೋಗಬಾಧೆ ಕಾಣಿಸಿಕೊಳ್ಳಲಿದೆ. ಈ ಬಗ್ಗೆ ಅಧಿಕಾರಿಗಳು, ಸರ್ಕಾರ ರೈತರ ನೆರವಿಗೆ ಬರಬೇಕು ಎಂದು ರೈತರಾದ ಮಹೇಶ ಹೆಬ್ಬಾಳ, ಬಸವರಾಜ ಅಂಕದ ಒತ್ತಾಯಿಸಿದರು.

    ವಿವಿಧೆಡೆ ದಿನವಿಡೀ ಮಳೆ: ಜಿಲ್ಲೆಯಾದ್ಯಂತ ವಿವಿಧೆಡೆ ಬುಧವಾರ ದಿನವಿಡೀ ಮಳೆ ಸುರಿಯಿತು. ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣ ಹಾಗೂ ತುಂತುರು ಮಳೆ ಇತ್ತಾದರೂ ಮಧ್ಯಾಹ್ನ ಸಾಧಾರಣವಾಗಿ ಮಳೆ ಸುರಿಯಿತು. ಗದಗ-ಬೆಟಗೇರಿ ಅವಳಿ ನಗರದಲ್ಲಿ ಬೆಳಗ್ಗೆ ಮಳೆ ಇರಲಿಲ್ಲ. ಮಧ್ಯಾಹ್ನದ ನಂತರ ಶುರುವಾದ ಮಳೆ ಸಂಜೆಯವರೆಗೂ ಸುರಿದಿದ್ದರಿಂದ ಜನರು ಸಂಚಾರಕ್ಕೆ ಕೊಂಚ ತೊಂದರೆ ಅನುಭವಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts