More

    ರೈತ ಸಂಘದ ಕಾರ್ಯಕರ್ತರಿಂದ ಪ್ರತಿಭಟನೆ


    ಗುಂಡ್ಲುಪೇಟೆ: ಟೆಂಡರ್ ಕರೆಯದೆ 40 ಕೋಟಿ ರೂ.ಅನುದಾನ ದುರುಪಯೋಗಪಡಿಸಿಕೊಂಡಿರುವ ಬಂಡೀಪುರದ ಅರಣ್ಯ ಸಂರಕ್ಷಣಾಧಿಕಾರಿಯನ್ನು ಕೂಡಲೇ ಅಮಾನತುಪಡಿಸಬೇಕು ಎಂದು ಒತ್ತಾಯಿಸಿ ರೈತಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.


    ಬಂಡೀಪುರದ ಹುಲಿ ಯೋಜನೆಯ ಕಚೇರಿ ಎದುರು ಶನಿವಾರ ಜಿಲ್ಲಾ ರೈತಸಂಘದ ಕಾರ್ಯಾಧ್ಯಕ್ಷ ಮಾಡ್ರಹಳ್ಳಿ ಮಹದೇವಪ್ಪ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.


    ಮಹದೇವಪ್ಪ ಮಾತನಾಡಿ, ಗಜೇಂದ್ರ ವಸತಿ ಗೃಹಕ್ಕೆ 25 ಲಕ್ಷ ರೂ.ಕಾಮಗಾರಿ ನಡೆಸಿ ಹಣ ದುರುಪಯೋಗ ಪಡಿಸಿಕೊಂಡಿದ್ದಾರೆ. ಸಿಎಸ್‌ಆರ್ ನಿಧಿಯಡಿ 5 ಕೋಟಿ ರೂ.ಅನುದಾನ ಪಡೆದು ಮೇಲಧಿಕಾರಿಗಳ ಅನುಮತಿ ಇಲ್ಲದೆ ಬೇಕಾದವರಿಗೆ ಟೆಂಡರ್ ನೀಡಿದ್ದಾರೆ. ಡಿಎಂಎಫ್ ನಿಧಿಯಡಿ 75 ಲಕ್ಷ ರೂ. ಪಡೆದು ಬುಕ್‌ಲೆಟ್ ಮತ್ತಿತರ ವೆಚ್ಚ ತೋರಿಸಿ ಗುಳುಂ ಮಾಡಿದ್ದಾರೆ ಎಂದು ಆರೋಪಿಸಿದರು.


    ಬಿಟಿಸಿಎಫ್ ಅಡಿ 14 ಕೋಟಿ ರೂ.ಕ್ರೀಯಾ ಯೋಜನೆ ತಯಾರಿಸಿ 8 ಕೋಟಿ ರೂ. ಬಂಡಿಪುರಕ್ಕೆ ಬಳಸಿಕೊಂಡು ಯಾವುದು ಕಾಮಗಾರಿ ನಡೆಸದೆ ನಕಲಿ ಬಿಲ್ ಸೃಷ್ಟಿಸಿ ಹಣ ದುರ್ಬಳಕೆ ಮಾಡಿದ್ದಾರೆ. ಎರಡು ಸಫಾರಿ ಬಸ್ ಖರೀದಿಸಿ ಅದರ ಬಾಡಿ ವಿನ್ಯಾಸಕ್ಕೆ 22 ಲಕ್ಷ ರೂ.ಟೆಂಡರ್ ನೀಡದೆ ಮೊದಲೇ ಚೆಕ್ ನೀಡಿದ್ದು ಅವ್ಯವಹಾರಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಬೆಂಕಿ ಅವಧಿಯಲ್ಲಿ 3 ಕೋಟಿ ರೂ.ಗಳಲ್ಲಿ ವಿವಿಧ ಸಲಕರಣೆಗಳನ್ನು ಸಿಎಫ್ ನೇರವಾಗಿ ಖರೀದಿಸಿದ್ದಾರೆ. ಅಕ್ರಮ ಮಾಡಿ ಎಸಿಬಿ ದಾಳಿಗೆ ಸಿಕ್ಕಿದ್ದವನನ್ನು ಪ್ರಥಮ ದರ್ಜೆ ಸಹಾಯಕನಾಗಿ ಮಾಡಿಕೊಂಡು ಎನ್‌ಒಸಿ ನೀಡಲು ಕೂರಿಸಿದ್ದಾರೆ. ಸೋಲಾರ್ ತಂತಿ ಬೇಲಿ ಸೇರಿದಂತೆ ಸಾಕಷ್ಟು ಹಗರಣ ಮಾಡಿ ಸುಮಾರು 40 ಕೋಟಿ ರೂ.ಗಳಷ್ಟು ಅವ್ಯವಹಾರ ಮಾಡಿದ್ದಾರೆ ಎಂದು ಅರೋಪಿಸಿದರು.


    ಸ್ಥಳಕ್ಕೆ ಭೇಟಿ ನೀಡಿದ ಅಪರ ಜಿಲ್ಲಾಧಿಕಾರಿ ಕಾತ್ಯಾಯಿನಿದೇವಿ ಅವರಿಗೆ ಮನವಿ ಸಲ್ಲಿಸಿದರು. ಜಿಲ್ಲಾ ಉಪಾಧ್ಯಕ್ಷ ಕುಂದಕೆರೆ ಸಂಪತ್ತು, ರೈತ ಮುಖಂಡ ಕಡಬೂರು ಮಂಜುನಾಥ್, ತಾಲೂಕು ಅಧ್ಯಕ್ಷ ಕಂದೇಗಾಲ ಹೊಸೂರು ಮಹೇಶ್, ಷಣ್ಮುಖಸ್ವಾಮಿ, ಹಾಲಹಳ್ಳಿ ಮಹೇಶ್, ಮಾಡ್ರಹಳ್ಳಿ ನವೀನ್ ಮತ್ತಿತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts