More

    ರೈತರಿಗೆ ಗಾಬರಿಯಿಲ್ಲ, ಮಕ್ಕಳ ಜೋಪಾನ ಮಾಡಿ

    ಮಾದನಹಿಪ್ಪರಗಿ: ಸಮುದ್ರಕ್ಕೆ ಹೋಗಿ ನಾಲ್ಕು ಕಟ್ಟಿ ಪೂಜಿ ಮಾಡಿ ಬರೋದ್ರೊಳಗೆ ಇದಮಾಯಿ ಎದುರಿಗೆ ಬಂತಲೇ ತಮ್ಮಾ.. ಹಿಂಗಾರು- ಮುಂಗಾರು ಸಮ, ಆದ್ರೆ ಶಿಶುವಿಗೆ ಜ್ವಾಕಿ ಮಾಡಲೇ ತಮ್ಮಾ… ಇಲ್ಲಾಂದರ ಹಾದಿ ಬೀದಿ ಹೆಣ ಬಿದ್ದಾವು.. ರೈತ ಮಗಾ ಗಾಬರಿ ಬೀಳಬ್ಯಾಡ, ಬಸವಗ ಪೀಡಾ ಹಿಂದಾ ಹೋಯಿತಲೇ ತಮ್ಮಾ..

    ಇವು ಕೇರೂರ ಗ್ರಾಮದಲ್ಲಿ ಯುಗಾದಿ ಹಬ್ಬದಂದು ಜರುಗುವ ಬೀರಲಿಂಗೇಶ್ವರ ಜಾತ್ರೋತ್ಸವ ನಿಮಿತ್ತ ಬುಧವಾರ ಪೂಜಾರಿಗಳು ವರ್ಷದ ಭವಿಷ್ಯದ ಬಗ್ಗೆ ಹೇಳಿಕೆ ನೀಡಿದರು. ರೈತರಿಗೆ ಯಾವುದೇ ಸಮಸ್ಯೆ ಇಲ್ಲ, ಜಾನುವಾರುಗಳಿಗೆ ಎದುರಾಗಿದ್ದ ಪೀಡೆಯೂ ದೂರವಾಗಿದೆ. ಮುಂಬರುವ ಹಿಂಗಾರು- ಮುಂಗಾರು ಸಮನಾಗಿರಲಿದೆ. ಹೀಗಾಗಿ ಅನ್ನದಾತರು ಆತಂಕ ಪಡಬೇಕಿಲ್ಲ. ಆದರೆ ಶಿಶುಗಳನ್ನು ಮಾತ್ರ ಜೋಪಾನ ಮಾಡುವಂತೆ ಪೂಜಾರಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ.

    ಬೀರಲಿಂಗೇಶ್ವರ ಪಲ್ಲಕ್ಕಿಯಂದು ನಡೆಯುವ ಪೂಜಾರಿಗಳ ಹೇಳಿಕೆಗಳು ರೈತರ ಪಾಲಿಗೆ ಭವಿಷ್ಯವಾಣಿ ಎಂಬ ನಂಬಿಕೆ ಈ ಭಾಗದ ಜನರಲ್ಲಿದೆ. ಹೇಳಿಕೆ ಆಲಿಸಲು ಸುತ್ತಮತ್ತಲಿನ ಗ್ರಾಮಗಳ ರೈತರು ಆಗಮಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts