More

    ರಾಹುಲ್​ಗಾಂಧಿ ವಜಾ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

    ಶೃಂಗೇರಿ:  ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರನ್ನು ಸಂಸದ ಸ್ಥಾನದಿಂದ ವಜಾಗೊಳಿಸಿದ್ದನ್ನು ಖಂಡಿಸಿ ಕುರುಬಕೇರಿ ಸರ್ಕಲ್​ನಲ್ಲಿ ಶನಿವಾರ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

    ಕಾಂಗ್ರೆಸ್ ವಕ್ತಾರ ಉಮೇಶ್ ಪೊದುವಾಳ್ ಮಾತನಾಡಿ, ನಾವು ಯಾವ ದೇಶದಲ್ಲಿ ವಾಸವಾಗಿದ್ದೇವೆ ಎಂಬ ಸಂದೇಹ ಉಂಟಾಗಿದೆ. ಸ್ವಾತಂತ್ರ್ಯ ಭಾರತದಲ್ಲಿ ನಮಗೆ ರಕ್ಷಣೆ ಇದೆ ಎಂಬ ಭರವಸೆ ಇತ್ತು. ಆದರೆ ಈಗ ಅದು ಸುಳ್ಳಾಗಿದೆ. ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗದ ಮುಖ್ಯ ಕಾರ್ಯ ನಾಗರಿಕರ ರಕ್ಷಣೆ. ರಾಹುಲ್ ಗಾಂಧಿ ಅವರ ಸದಸ್ವತ್ಯ ಅನರ್ಹಗೊಳಿಸಿದ್ದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದರು.

    ರಾಹುಲ್ ಗಾಂಧಿ ಅವರು ನೀರವ್, ಲಲಿತ್ ಮೋದಿ ಕುರಿತು ಹೇಳಿಕೆ ನೀಡಿದ್ದು ಅದನ್ನು ತಪ್ಪಾಗಿ ಗ್ರಹಿಸಿ ಅವರಿಗೆ ಶಿಕ್ಷೆ ವಿಧಿಸಿದ್ದು ವಿಪರ್ಯಾಸ. ನಾಗರಿಕರು ಕೂಡ ಭಯದಲ್ಲಿ ಜೀವಿಸುವ ವಾತಾವರಣ ದೇಶದಲ್ಲಿ ನಿರ್ವಣವಾಗಿದೆ. ದೇಶದ ಹಲವು ಪಕ್ಷಗಳು ಒಗ್ಗೂಡಿ ರಾಹುಲ್ ಗಾಂಧಿ ಅವರನ್ನು ಬೆಂಬಲಿಸಿವೆ ಎಂದು ಹೇಳಿದರು.

    ರಾಹುಲ್ ಗಾಂಧಿ ಕುರಿತು ಜಗತ್ತಿಗೆ ಗೊತ್ತಿದ್ದು ಅವರನ್ನು ಅನರ್ಹಗೊಳಿಸಿದ ಪಕ್ಷ ಮುಂದೆ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತದೆ. ಕಾಂಗ್ರೆಸ್ ಶಾಂತಿ ಹಾಗೂ ಸಂಯಮ ಕಾಪಾಡಿಕೊಂಡು ಬಂದ ಪಕ್ಷ. ಒಂದು ವೇಳೆ ರಾಹುಲ್ ಗಾಂಧಿ ಅವರಿಗೆ ನ್ಯಾಯ ದೊರಕದೇ ಇದ್ದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದರು. ಕಾಂಗ್ರೆಸ್ ಮುಖಂಡರಾದ ದಿನೇಶ್, ಸೌಭಾಗ್ಯ ಗೋಪಾಲನ್, ತ್ರಿಮೂರ್ತಿ, ಪಪಂ ಸದಸ್ಯರಾದ ಲತಾ ಸುಧಾಕರ್, ರೂಪಾ ಪೈ ಇತರರಿದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts