More

    ರಕ್ತದಾನ ಮಾಡಿ ಜೀವ ಉಳಿಸಿ

    ಔರಾದ್: ಆರೋಗ್ಯವಂತ ಯುವಕರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ಅನಾರೋಗ್ಯದಲ್ಲಿರುವ ಮತ್ತೊಬ್ಬರ ಜೀವವನ್ನು ಉಳಿಸುವ ಶ್ರೇಷ್ಠ ಕಾರ್ಯ ಮಾಡಬೇಕು ಎಂದು ತಹಸೀಲ್ದಾರ್ ಎಂ.ಚಂದ್ರಶೇಖರರಾವ ಹೇಳಿದರು.

    ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸ್ಮರಣೋತ್ಸವ ಹಾಗೂ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಂಗೊಳ್ಳಿ ರಾಯಣ್ಣ ಯುವ ಒಕ್ಕೂಟ ಹಾಗೂ ಸಂಭ್ರಮ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯಿಂದ ಮಂಗಳವಾರ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿ, ತುರ್ತು ಸಂದರ್ಭಗಳಲ್ಲಿ ರಕ್ತವು ಅನೇಕರ ಜೀವ ಉಳಿಸುತ್ತದೆ. ಹೀಗಾಗಿ ರಕ್ತದಾನ ಮಾಡಿ ಮತ್ತೊಬ್ಬರ ಬಾಳಿಗೆ ಸಂಜೀವಿನಿಯಾಗಬೇಕು ಎಂದರು.

    ತಾಲೂಕು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಸಂದೀಪ ಮೇತ್ರೆ, ಮುಖಂಡ ಸುಧಾಕರ ಕೊಳ್ಳುರ್ ಮಾತನಾಡಿ, ಸಂಗೊಳ್ಳಿ ರಾಯಣ್ಣ ಅವರ ದೇಶ ಪ್ರೇಮವನ್ನು ಯುವಕರು ಮೈಗೂಡಿಸಿಕೊಳ್ಳಬೇಕು ಎಂದರು.

    ಪಟ್ಟಣ ಪಂಚಾಯಿತಿ ಸದಸ್ಯ ಬಂಟಿ ದರ್ಬಾರೆ ಮಾತನಾಡಿದರು. ಡಾ. ಸಿದ್ಧಾರ್ಥ ಅಧ್ಯಕ್ಷತೆ ವಹಿಸಿದ್ದರು. ದಾಸ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎಂ. ಅಮರವಾಡಿ, ಗುಂಡಪ್ಪ ಮುದಾಳೆ, ಸಾಲೋಮನ್, ಶ್ರಾವಣಕುಮಾರ ಭಂಡೆ ಇದ್ದರು. ಸಂಗೊಳ್ಳಿ ರಾಯಣ್ಣ ಯುವ ಒಕ್ಕೂಟದ ಸಂಚಾಲಕ ರಾಜಕುಮಾರ ಮುದಾಳೆ, ಅರ್ಜುನ ಭಂಗೆ, ಆಕಾಶ ಮೇತ್ರೆ, ಸಂಜುಕುಮಾರ ಮುದಾಳೆ, ಕುಪೇಂದ್ರ, ಅನೀಲ ಕೊಳ್ಳುರ್, ದತ್ತಾತ್ರಿ ಬಾಪೂರೆ ಇದ್ದರು. ಶಿಬಿರದಲ್ಲಿ 45 ಯುವಕರು ರಕ್ತದಾನ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts