More

    ಮೊಹರಂನಲ್ಲಿ ಭಾವೈಕ್ಯ ಮೆರೆದ ಭಕ್ತರು

    ಗಜೇಂದ್ರಗಡ: ಪಟ್ಟಣದಲ್ಲಿ ಹಿಂದು-ಮುಸ್ಲಿಮರು ಶ್ರದ್ಧಾ ಭಕ್ತಿಯಿಂದ ಮೊಹರಂ ಆಚರಿಸಿದರು. ಮುಸ್ಲಿಮರ ಧಾರ್ವಿುಕ ಕಾರ್ಯಕ್ರಮಗಲ್ಲಿ ಹಿಂದುಗಳು ಪಾಲ್ಗೊಂಡು ಭಾವೈಕ್ಯ ಮೆರೆದರು.

    ಪಟ್ಟಣದ 18 ಮಸೀದಿಗಳಲ್ಲಿ ಪ್ರತಿಷ್ಠಾಪನೆಗೊಂಡು ಐದು ದಿನ ಪೂಜಿಸಲ್ಪಟ್ಟ ಪಾಂಜಾಗಳನ್ನು ರಾಜವಾಡೆ ಬಳಿ ಮಂಗಳವಾರ ಬೆಳಗಿನ ಜಾವ ಸಮಾಗಮಗೊಳಿಸಲಾಯಿತು. ಸಂಪ್ರದಾಯದಂತೆ ಘೊರ್ಪಡೆ ಮನೆತನದವರು ಎಲ್ಲ ದೇವರಿಗೆ ಮೊದಲು ಪೂಜೆ ಸಲ್ಲಿಸಿದರು.

    ರಾಜವಾಡೆ ಮೈದಾನಕ್ಕೆ ಮೆರವಣಿಗೆ ಮೂಲಕ ತರಲಾದ ಅಲೈ ದೇವರ ದರ್ಶನ ಪಡೆಯಲು ಭಕ್ತರು ಮುಗಿ ಬಿದ್ದಿದ್ದರು. ನೈವೇದ್ಯ ಸಮರ್ಪಿಸಿ ಧೂಪ ಹಾಕಿ ಢೋಲಿಗೆ ನಮಿಸಿದರು. ಬಳಿಕ ಸಾಮೂಹಿಕ ಧಾರ್ವಿುಕ ಕಾರ್ಯಕ್ರಮಗಳು ನಡೆದವು. ಯುವಕರ ಗುಂಪುಗಳು ಕೋಲಾಟ ಆಡಿ ಭಕ್ತರ ಮನ ರಂಜಿಸಿದರು. ಹುಲಿ, ಅಳ್ಳೊಳ್ಳಿ ಬುವ್ವಾ ವೇಶಭೂಷಣ ತೊಟ್ಟ ಭಕ್ತರು ಹರಕೆ ಸಲ್ಲಿಸಿದರು. ಪಾಂಜಾ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿ ಗಮನ ಸೆಳೆದರು. ಹಸೇನ್, ಹುಸೇನ್, ಬೀಬಿ ಫಾತಿಮಾರನ್ನು ಸ್ಮರಿಸಲಾಯಿತು.

    ಪಟ್ಟಣದ ಮುಖ್ಯ ಬೀದಿಯಲ್ಲಿ ಅಲೆ ದೇವರುಗಳನ್ನು ವಿವಿಧ ಸಂಗೀತ ವಾದ್ಯಗಳ ಜತೆಗೆ ಹೆಜ್ಜೆಮೇಳದೊಂದಿಗೆ ಮೆರವಣಿಗೆ ಮಾಡಲಾಯಿತು. ಭಕ್ತರು ದೇವರಿಗೆ ಸಮರ್ಪಿಸಿದ ನೈವೇದ್ಯ, ಸಿಹಿಖಾದ್ಯ ಚೊಂಗೆಯ ರುಚಿ ಸವಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts