More

    ಮೊಬೈಲ್ ಲೋನ್ ಆ್ಯಪ್ ನಿಂದ ಅತಿಥಿ ಉಪನ್ಯಾಸಕನಿಗೆ ಬ್ಲಾಕ್ ಮೇಲ್: ಪೊಲೀಸರಿಗೆ ದೂರು

    ಮೈಸೂರು: ಮೊಬೈಲ್ ಆ್ಯಪ್ ಮೂಲಕ ಸುಲಭವಾಗಿ ಸಾಲ ಪಡೆದಿದ್ದ ಮಾನಸಗಂಗೋತ್ರಿಯ ಅತಿಥಿ ಉಪನ್ಯಾಸಕರೊಬ್ಬರು ಈಗ ತೊಂದರೆಗೆ ಸಿಲುಕಿ, ಪೊಲೀಸರ ಮೊರೆ ಹೋಗಿದ್ದಾರೆ.
    ಮೊಬೈಲ್ ಆ್ಯಪ್‌ನಲ್ಲಿ ಸಾಲ ನೀಡಿ ದುಬಾರಿ ಬಡ್ಡಿ, ಎರಡರಷ್ಟು ಹಣ ವಸೂಲಿ ಮಾಡಲು ಮುಂದಾದ ಆ್ಯಪ್ ಕಂಪನಿಯವರು ಹೆಚ್ಚಿನ ಹಣ ನೀಡಲು ನಿರಾಕರಿಸಿದ ಅತಿಥಿ ಉಪನ್ಯಾಸಕರ ಅಶ್ಲೀಲ ಫೋಟೋ ಸೃಷ್ಟಿಸಿ ಸಂಬಂಧಿಕರು, ಸ್ನೇಹಿತರ ಮೊಬೈಲ್‌ಗಳಿಗೆ ಕಳುಹಿಸುವುದಾಗಿ ಬ್ಲಾೃಕ್‌ಮೇಲ್ ಮಾಡಿದ್ದಾರೆ. ಇದರಿಂದ ಮನನೊಂದ ಅತಿಥಿ ಉಪನ್ಯಾಸಕ ನಗರದ ಸೈಬರ್ ಠಾಣೆಗೆ ದೂರು ನೀಡಿದ್ದಾರೆ.
    ಮೇ 20 ರಂದು ಮೊಬೈಲ್‌ನಲ್ಲಿ ಬಂದ ಮೆಸೇಜ್‌ನ ಲೋನ್ ಆ್ಯಪ್ ಮೂಲಕ ಅಗತ್ಯ ದಾಖಲೆ ಸಲ್ಲಿಸಿ 3 ಸಾವಿರ ರೂ. ಸಾಲಕ್ಕೆ ಕೋರಿಕೆ ಸಲ್ಲಿಸಿದ್ದರು. ಆದರೆ ಅವರ ಬ್ಯಾಂಕ್ ಖಾತೆಗೆ ಕೇವಲ 1800 ರೂ. ಬಂದಿದೆ. ಸಾಲ ಪಡೆದ ಹಣವನ್ನು ಮರುಪಾವತಿ ಮಾಡಿದರೂ ಹೆಚ್ಚುವರಿ ಹಣ ಪಾವತಿ ಮಾಡಬೇಕು ಎಂದು ಮೊಬೈಲ್‌ಗೆ ಸಂದೇಶ ಬರಲಾರಂಭಿಸಿದೆ. ಹೆಚ್ಚಿನ ಹಣ ಪಾವತಿಗೆ ಅತಿಥಿ ಉಪನ್ಯಾಸಕ ನಿರಾಕರಿಸಿದ್ದರು. ಇದರಿಂದ ಅವರ ಮಾಹಿತಿಯನ್ನು ಹ್ಯಾಕ್ ಮಾಡಿ, ಅವರ ಅಶ್ಲೀಲ ಚಿತ್ರ ಸೃಷ್ಟಿಸಿ ಅದನ್ನು ಅತಿಥಿ ಉಪನ್ಯಾಸಕರ ವ್ಯಾಟ್ಸ್‌ಆ್ಯಪ್‌ಗೆ ಕಳುಹಿಸಿದ್ದಾರೆ. ಅಲ್ಲದೇ, ಈ ಫೋಟೋಗಳನ್ನು ನಿಮ್ಮ ಸ್ನೇಹಿತರು, ಸಂಬಂಧಿಕರಿಗೆ ಕಳುಹಿಸುವುದಾಗಿ ಬ್ಲಾೃಕ್‌ಮೇಲ್ ಮಾಡಿದ್ದಾರೆ.
    ಅನಾಮಧೇಯ ಲೋನ್ ಆ್ಯಪ್‌ಗಳಿಂದ ಸಾಲ ಪಡೆಯುವ ಮುನ್ನ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ತೊಂದರೆ ಸಿಲುಕಿಕೊಳ್ಳಬೇಕಾಗುತ್ತದೆ. ಆದ್ದರಿಂದ ಸಾಕಷ್ಟು ಎಚ್ಚರ ವಹಿಸಿ ಇಂತಹ ಲೋನ್ ಆ್ಯಪ್‌ಗಳಿಂದ ದೂರು ಇರುವಂತೆ ಪೊಲೀಸರು ಸಲಹೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts