More

    ಮೂವರು ಪ್ರಧಾನ ಸೇವಕರಿಗೆ ಗುರು ದೀಕ್ಷೆ

    ಹಳಿಯಾಳ: ಪಟ್ಟಣದ ಕಾರ್ವೆಲ್ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಗುರುವಾರ ಕ್ರೈಸ್ತ ಧರ್ಮದ ಮೂವರು ಪ್ರಧಾನ ಸೇವಕರಿಗೆ ಗುರು ದೀಕ್ಷೆ ಹಾಗೂ ಒಬ್ಬರಿಗೆ ಪ್ರಧಾನ ಸೇವಕರ ದೀಕ್ಷಾ ಸಮಾರಂಭ ನಡೆಯಿತು.

    ಸ್ಥಳೀಯ ಮಿಲಾಗ್ರಿಸ್ ಚರ್ಚ್ ವತಿಯಿಂದ ಈ ಧಾರ್ವಿುಕ ದೀಕ್ಷಾ ಸಮಾರಂಭ ಆಯೋಜಿಸಲಾಗಿತ್ತು. ಸಾನ್ನಿಧ್ಯ ವಹಿಸಿದ್ದ ಬೆಳಗಾವಿ ಧರ್ಮ ಪ್ರಾಂತ್ಯದ ಧರ್ವಧ್ಯಕ್ಷ ಹಾಗೂ ಕಾರವಾರ ಧರ್ಮಪ್ರಾಂತ್ಯದ ಧಾರ್ವಿುಕ ಆಡಳಿತಗಾರ ಡಾ. ಡೆರಿಕ್ ಫರ್ನಾಂಡೀಸ್ ಅವರು ಗುರುದೀಕ್ಷೆ ನೀಡಿದರು.

    ಈ ವೇಳೆ ಆಶೀರ್ವಚನ ನೀಡಿದ ಧರ್ವಧ್ಯಕ್ಷ ಡಾ. ಡೆರಿಕ್, ಗುರು ಸೇವೆಯು ಸರ್ವ ಶ್ರೇಷ್ಠ ಈಶ ಸೇವೆಯಾಗಿದೆ. ಧರ್ಮ ರಕ್ಷಣೆ, ಸಾಮಾಜಿಕ ನ್ಯಾಯ, ಶಾಂತಿ, ನೀತಿ, ಸತ್ಯ ಸಂರಕ್ಷಿಸುವ ಪವಿತ್ರ ವಾದ ಕಾಯಕದಲ್ಲಿ ಗುರುಗಳು ಜೀವನ ಸಮರ್ಪಿಸು ತ್ತಾರೆ. ಈ ಪವಿತ್ರ ಕಾಯಕದಲ್ಲಿ ತೊಡಗಿದವರಿಗೆ ಪ್ರತಿ ಹಂತದಲ್ಲೂ ಕಷ್ಟ, ಸಂಕಷ್ಟಗಳು ಎದುರಾದರೂ ಧೃತಿಗೆಡದೆ ನಮ್ಮ ಪವಿತ್ರ ಕಾಯಕ ಮುಂದುವರಿಸಬೇಕು ಎಂದರು.

    ದೀಕ್ಷಾ ಸಂಭ್ರಮ: ಪ್ರಧಾನ ಸೇವಕರಾದ ಹಳಿಯಾಳದ ವಿಲ್ಸನ್ ಡಿಸೋಜಾ, ಸಿದ್ದಾಪುರದ ಮಾರ್ಕ್ ಫರ್ನಾಂಡೀಸ್ ಹಾಗೂ ಖಾನಾಪುರ ತಾಲೂಕಿನ ಗುಂಡೊಳ್ಳಿ ಗ್ರಾಮದ ಸೈಮನ್ ಫರ್ನಾಂಡೀಸ್ ಅವರು ಗುರುದೀಕ್ಷೆ ಪಡೆದರು. ಇದೇ ಧಾರ್ವಿುಕ ಸಮಾರಂಭದಲ್ಲಿ ಶಿರಸಿಯ ಬ್ರದರ್ ರೋಶನ್ ಫರ್ನಾಂಡೀಸ್ ಅವರಿಗೆ ಡಿಯೆಕೊನೆಟ್(ಪ್ರಧಾನ ಸೇವಕರ) ದೀಕ್ಷೆ ನೀಡಲಾಯಿತು.

    ಹಳಿಯಾಳ ಚರ್ಚ್ ಪ್ರಧಾನ ಗುರು ಜ್ಞಾನಪ್ರಕಾಶ, ಕಾರವಾರ ಧರ್ಮಪ್ರಾಂತ್ಯದ ವಿ ಕೆರ್ ಜನರಲ್ ಗುರು ರಿಚರ್ಡ್ ರೊಡ್ರಿಗ್ಸ್, ಗುರು ನಿರ್ಮಲಕುಮಾರ ಮಿರಾಂಡಾ ಸೇರಿ ಉತ್ತರ ಕನ್ನಡ ಹಾಗೂ ನೆರೆಯ ಜಿಲ್ಲೆಗಳ ನೂರಕ್ಕೂ ಹೆಚ್ಚು ಗುರುಗಳು ಪಾಲ್ಗೊಂಡಿದ್ದರು. ಮಿಲಾಗ್ರಿಸ್ ಚರ್ಚ್ ಸಹಾಯಕ ಗುರು ಸಂತೋಷ ನೇತೃತ್ವದಲ್ಲಿ ಪೂಜಾವಿಧಿಯ ಪವಿತ್ರ ಗಾಯನಗಳು ನಡೆದವು. ಗುರು ಅಂತೋನಿ ಡಾಯಸ್ ಗುರುದೀಕ್ಷೆ ಪೂಜೆಯ ಕಾರ್ಯಕ್ರಮ ನಿರ್ವಹಿಸಿದರು. ನೂತನವಾಗಿ ಗುರುದೀಕ್ಷೆ ಹಾಗೂ ಪ್ರಧಾನ ಸೇವಕರ ದೀಕ್ಷೆಯನ್ನು ಪಡೆದ ಗುರುಗಳಿಗೆ ಹಾಗೂ ಅವರ ಪಾಲಕರನ್ನು ಸನ್ಮಾನಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts