More

    ಮೂಲ ದಾಖಲೆಗಳ ಪರಿಶೀಲನೆ ಜೂ.5ರಿಂದ

    ಹಾವೇರಿ: ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಗುತ್ತಿಗೆ ಆಧಾರದ ಮೇಲೆ ಶುಶ್ರೂಷಾಧಿಕಾರಿಗಳ ಹಾಗೂ ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿಗಳ ಅಂತಿಮ ಆಯ್ಕೆ ಪಟ್ಟಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನೆ ಜೂ.5ರಿಂದ 7ರವರೆಗೆ ನಡೆಯಲಿದೆ.
    ಆಯ್ಕೆಯಾದ ಅಭ್ಯರ್ಥಿಗಳು ಶೈಕ್ಷಣಿಕ ದಾಖಲೆಗಳಾದ ಎಸ್.ಎಸ್.ಎಲ್.ಸಿ., ಪಿಯುಸಿ ಅಂಕಪಟ್ಟಿ, ಜಿಎನ್‌ಎಂ/ಎಎನ್‌ಎಂ ಎಲ್ಲ ಅಂಕಪಟ್ಟಿ, ಕೆಎನ್‌ಸಿ ನೋಂದಣಿ ಪ್ರಮಾಣ ಪತ್ರ, ಜಾತಿ ಪ್ರಮಾಣಪತ್ರ, ಗ್ರಾಮೀಣ, ಕನ್ನಡ ಮಾಧ್ಯಮ, ಅಂಗವಿಕಲತೆ ಪ್ರಮಾಣಪತ್ರ, ಆಧಾರ್ ಕಾರ್ಡ್ ಬ್ಯಾಂಕ್ ಪಾಸ್‌ಬುಕ್ ಹಾಗೂ ಪಾನ್ ಕಾರ್ಡ್ ಸೇರಿದಂತೆ ಅಗತ್ಯ ಮೂಲದಾಖಲೆಗಳು ಹಾಗೂ ಒಂದು ಸೆಟ್ ದೃಢೀಕೃತ ಝರಾಕ್ಸ್ ಪ್ರತಿಗಳೊಂದಿಗೆ ಪರಿಶೀಲನೆಗೆ ಹಾಜರಾಗಬೇಕು.
    ದಾಖಲೆಗಳ ಪರಿಶೀಲನೆ ಜಿಲ್ಲಾ ಯೋಜನಾ ನಿರ್ವಹಣಾ ಘಟಕ ಹಾವೇರಿ, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಕೆಳಗಡೆ, ಡಿಸಿ ಆಫೀಸ ಕಾಂಪ್ಲೆಕ್ಸ್, ಬಿ ಬ್ಲಾಕ್ ದೇವಗಿರಿ-ಹಾವೇರಿ ಈ ವಿಳಾಸದಲ್ಲಿ ಜರುಗಲಿದೆ.
    ಜಿ.ಎನ್.ಎಂ. ಕ್ರ.ಸಂ.1ರಿಂದ 30ರವರೆಗೆ ಜೂ.5ರಂದು, ಕ್ರ.ಸಂ.31ರಿಂದ 60ರವರೆಗೆ ಜೂ.6ರಂದು ಹಾಗೂ 61ರಿಂದ 82ರವರೆಗೆ ಜೂ.7ರಂದು ಪರಿಶೀಲನೆ ಜರುಗಲಿದೆ. ಪಿಎಚ್‌ಸಿಒ ಕ್ರ.ಸಂ.1ರಿಂದ 17ರವರೆಗೆ ಜೂ.7ರಂದು ಪರಿಶೀಲನೆ ಜರುಗಲಿದೆ ಎಂದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಎಸ್.ರಾಘವೇಂದ್ರಸ್ವಾಮಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts