More

    ಮೂರು ದಿನಗಳ ಕೃಷಿ ಮೇಳಕ್ಕೆ ತೆರೆ

    ಧಾರವಾಡ: ಇಲ್ಲಿನ ಕೃಷಿ ವಿಶ್ವವಿದ್ಯಾಲಯ ಆಯೋಜಿಸಿದ್ದ 3 ದಿನಗಳ ಕೃಷಿ ಮೇಳ ಸೋಮವಾರ ತೆರೆ ಕಂಡಿದೆ. ‘ಪ್ರತಿ ಹನಿ-ಸಮೃದ್ಧ ತೆನಿ’ ಘೊಷವಾಕ್ಯದೊಂದಿಗೆ ಆಯೋಜಿಸಿದ್ದ ಮೇಳದಲ್ಲಿ ರೈತ ಬಾಂಧವರು, ಶಾಲಾ-ಕಾಲೇಜು ಮಕ್ಕಳು ಹಾಗೂ ವಿಸ್ತರಣಾ ಕಾರ್ಯಕತರು ಸೇರಿ 6 ಲಕ್ಷಕ್ಕೂ ಹೆಚ್ಚು ಜನರು ಮೇಳದ ಲಾಭ ಪಡೆದರು.

    ಈ ಬಾರಿ ಹಿಂಗಾರು ಬಿತ್ತನೆ ನಂತರ ಆಯೋಜಿಸಿದ ಹಿನ್ನೆಲೆಯಲ್ಲಿ ಬೀಜ ಮೇಳ ಇಲ್ಲವಾದ ಕಾರಣಕ್ಕೆ ಮೇಳಕ್ಕೆ ಕಳೆದ ವರ್ಷಗಳಷ್ಟು ರೈತರು ಬಂದಿರಲಿಲ್ಲ. ಆದಾಗ್ಯೂ, ನೂತನ ಪ್ರಯೋಗ, ಯಂತ್ರೋಪಕರಣ, ಕೃಷಿ ತಂತ್ರಜ್ಞಾನ ಹೀಗೆ ವಿವಿಧ ಮಾಹಿತಿ ನೀಡುವಲ್ಲಿ ಮೇಳ ಯಶಸ್ವಿಯಾಗಿದೆ.

    ಇಂದಿನ ದಿನಗಳಲ್ಲಿ ಸಾಂಪ್ರದಾಯಿಕ ಕೃಷಿಗಿಂತ ತಂತ್ರಜ್ಞಾನ ಅಳವಡಿಕೆಗೆ ಆದ್ಯತೆ ನೀಡಲಾಗುತ್ತಿದೆ. ಇದು ಅನಿವಾರ್ಯವೂ ಆಗಿದೆ. ಅಂತೆಯೇ, ವಿವಿಯ ಕೃಷಿ ತಂತ್ರಜ್ಞಾನ ಸಲಹಾ ಕೇಂದ್ರಕ್ಕೆ ಸಾವಿರಾರು ರೈತರು ಭೇಟಿ ನೀಡಿ ವಿಜ್ಞಾನಿಗಳ ಜತೆಗೆ ರ್ಚಚಿಸಿ ಸಲಹೆ, ಮಾರ್ಗದರ್ಶನ ಪಡೆದರು.

    ವಿಶ್ವ ವಿದ್ಯಾಲಯ ಕೇವಲ, ಚರ್ಚೆ, ವಿಚಾರಗೋಷ್ಠಿ, ಕಾರ್ಯಾಗಾರಕ್ಕೆ ಸೀಮಿತವಾಗಿಲ್ಲ. ಇಂತಹ ಕಾರ್ಯಕ್ರಮಗಳ ಆಯೋಜನೆ ಜತೆಗೆ ರೈತರಿಗೆ ಉಪಯುಕ್ತ ಮಾಹಿತಿ ಒದಗಿಸುವ ಪ್ರಕಟಣಾ ಕೇಂದ್ರವನ್ನೂ ಹೊಂದಿದೆ. ಈ ಬಾರಿಯ ಮೇಳದಲ್ಲಿ ಕೇಂದ್ರದಿಂದ ಲಕ್ಷಾಂತರ ರೂ. ಮೌಲ್ಯದ ಪುಸ್ತಕಗಳು ಮಾರಾಟವಾಗಿವೆ.

    ರೈತರಿಂದ ರೈತರಿಗಾಗಿ…” ಕೃಷಿ ಮೇಳ ಕೇವಲ ಸಾಮಗ್ರಿ ಖರೀದಿಗೆ ಸೀಮಿತವಾಗದೆ ಶ್ರೇಷ್ಠ ಕೃಷಿಕರು, ಪ್ರಗತಿಪರ ರೈತರು, ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಗಳಿಸಿದ ರೈತರಿಂದ ಮಾರ್ಗದರ್ಶನ ಕೊಡಿಸಿದ್ದು ವಿಶೇಷ. ‘ರೈತರಿಂದ ರೈತರಿಗೆ’ ಕಾರ್ಯಕ್ರಮದಲ್ಲಿ ಕೃಷಿ ಯಂತ್ರೋಪಕರಣ, ಒಣಭೂಮಿ ಬೇಸಾಯ, ತೋಟಗಾರಿಕೆ, ಆಧುನಿಕ ಯಂತ್ರೋಪಕರಣಗಳ ಅಳವಡಿಕೆ, ನೀರು ಸಂರಕ್ಷಣೆ, ಕೃಷಿ, ತೋಟಗಾರಿಕೆ ಸೇರಿದಂತೆ ಅನೇಕ ಮಾಹಿತಿಗಳನ್ನು ರೈತರೇ ರೈತರಿಗೆ ನೀಡಿದರು. ಬ್ಯಾಂಕ್ ಅಧಿಕಾರಿಗಳು ಹಾಗೂ ಕೃಷಿ ಮತ್ತು ಎಪಿಎಂಸಿ ಅಧಿಕಾರಿಗಳು ಕೃಷಿ ಅಭಿವೃದ್ಧಿಗೆ ಬ್ಯಾಂಕಿಂಗ್ ಕ್ಷೇತ್ರದಿಂದ ಲಭ್ಯವಿರುವ ಯೋಜನೆಗಳ ಬಗ್ಗೆ ಹಾಗೂ ಕೃಷಿ ಉತ್ಪನ್ನಗಳಿಗೆ ಸಿಗುವ ಬೆಂಬಲ ಬೆಲೆ ಮಾಹಿತಿ ನೀಡಿದರು.

    ಮತ್ತೆ ಇದೇ ವರ್ಷ ಮೇಳ

    2019ರ ಸಪ್ಟೆಂಬರ್ ತಿಂಗಳಲ್ಲಿ ನಡೆಯಬೇಕಿದ್ದ 2019-20ನೇ ಸಾಲಿನ ಕೃಷಿ ಮೇಳವನ್ನು ಜನವರಿಯಲ್ಲಿ ನಡೆಸಲಾಯಿತು. 2020-21ನೇ ಸಾಲಿನಲ್ಲಿನ ಕೃಷಿ ಮೇಳವನ್ನು ಇದೇ ವರ್ಷದ ಸಪ್ಟೆಂಬರ್​ನಲ್ಲಿ 4 ದಿನಗಳ ಕಾಲ ನಡೆಯಲಿದೆ. ಹೀಗಾಗಿ ಒಂದೇ ವರ್ಷದಲ್ಲಿ 2 ಕೃಷಿ ಮೇಳಗಳು ನಡೆದ ಸಾಧನೆಗೆ ಈ ವರ್ಷ ಸಾಕ್ಷಿಯಾಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts