More

    ಮುರುಘಾಮಠದ ಕಾರ್ಯ ನಾಡಿಗೆ ಮಾದರಿ

    ಧಾರವಾಡ: ಜ್ಞಾನ, ದಾಸೋಹ ಸೇವೆಯಲ್ಲಿ ಮುರುಘಾಮಠದ ಮೃತ್ಯುಂಜಯ ಅಪ್ಪಗಳ ಹಾಗೂ ಮಹಾಂತಪ್ಪಗಳ ಕೊಡುಗೆ ಸ್ಮರಣೀಯ. ಅವರ ಆಶಯದಂತೆ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಶ್ರೀಮಠವನ್ನು ಮುನ್ನಡೆಸುತ್ತಿದ್ದಾರೆ. ಹೀಗಾಗಿ ಮುರುಘಾಮಠದ ಕಾರ್ಯಗಳು ನಾಡಿಗೆ ಮಾದರಿ ಎಂದು ಹುಬ್ಬಳ್ಳಿ ರುದ್ರಾಕ್ಷಿಮಠದ ಶ್ರೀ ಬಸವಲಿಂಗ ಮಹಾಸ್ವಾಮೀಜಿ ಹೇಳಿದರು.

    ನಗರದ ಮುರುಘಾಮಠದಲ್ಲಿ ಶ್ರೀ ಮದಥಣಿ ಮುರುಘೕಂದ್ರ ಮಹಾಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ಜರುಗಲಿರುವ ‘ಶರಣರ ಜೀವನ ದರ್ಶನ’ ಪ್ರವಚನ ಕಾರ್ಯಕ್ರಮಕ್ಕೆ ಮಂಗಳವಾರ ಚಾಲನೆ ನೀಡಿ ಅವರು ಆಶೀರ್ವಚನ ನೀಡಿದರು.

    ಪ್ರವಚನ ಕೇಳುವುದರಿಂದ ಬದುಕಿನಲ್ಲಿ ಅಮೂಲ್ಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬಹುದು. ಆದರೆ ಆಧುನಿಕತೆಯ ಭರದಲ್ಲಿ ನಮ್ಮ ಸಂಸ್ಕೃತಿ ಮರೆಯಾಗುತ್ತಿರುವುದು ವಿಷಾದನೀಯ ಎಂದರು.

    ಬಸವಕಲ್ಯಾಣ ಅನುಭವ ಮಂಟಪದ ಶ್ರೀ ಸಂಗಮೇಶ್ವರ ದೇವರು ಮಾತನಾಡಿ, ಶರಣರು ರಚಿಸಿದ ವಚನಗಳ ತತ್ತ್ವಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಮರಣ ಆಕಸ್ಮಿಕ, ಜನನ ಅಪರೂಪ. ಇವುಗಳ ಮಧ್ಯೆ ಸಮಾಜಕ್ಕೆ ಮಾದರಿಯಾಗಿ ಬದುಕು ಪಾವನಗೊಳಿಸಬೇಕು. ಒಂದು ದಿನ ಬದುಕುವ ಹೂವು ಇತರರಿಗೆ ಒಳ್ಳೆಯ ಪರಿಮಳ ನೀಡುತ್ತದೆ. ಅದೇ ರೀತಿ ನಾವು ಬದುಕಿರುವಷ್ಟು ದಿನ ಸಮಾಜ ಸ್ಮರಿಸುವಂತೆ ಜೀವನ ನಡೆಸಬೇಕು. ಜೀವನ ಎಂದರೆ ಸತ್ಕಾರ್ಯಗಳನ್ನು ಮಾಡುವುದು. ಸುತ್ತಲಿನ ಪ್ರಕೃತಿ ಮತ್ತು ಸಕಲ ಜೀವಿಗಳನ್ನು ಗೌರವಿಸಬೇಕು. ಅಂದಾಗ ಸಮಾಜ ನಮ್ಮನ್ನು ಗೌರವಿಸುತ್ತದೆ ಎಂದರು.

    ಬಸವೇಶ್ವರ ರೂರಲ್ ಸಂಸ್ಥೆಯ ಅಧ್ಯಕ್ಷ ಶರಣಪ್ಪ ಕೊಟಗಿ ಮಾತನಾಡಿ, ಮಲ್ಲಿಕಾರ್ಜುನ ಸ್ವಾಮೀಜಿ ವಸತಿ ನಿಲಯದ ವಿದ್ಯಾರ್ಥಿಗಳ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದಾರೆ. ಇಲ್ಲಿ ಅಭ್ಯಾಸ ಮಾಡಿದ ವಿದ್ಯಾರ್ಥಿಗಳು ಉತ್ತಮ ಸಂಸ್ಕಾರದೊಂದಿಗೆ ಉನ್ನತ ಹುದ್ದೆಗಳಲ್ಲಿ ಗಳಿಸಿದ್ದಾರೆ ಎಂದರು.

    ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನಾಗರಾಜ ಪಟ್ಟಣಶೆಟ್ಟಿ, ಡಿ.ಬಿ. ಲಕಮನಹಳ್ಳಿ, ವಿ.ಎಸ್. ಕಟಗಿ, ಎಸ್.ಎಸ್. ಲಕ್ಷೆ್ಮೕಶ್ವರ, ಬಸವರಾಜ ಗಡೇಕಾರ, ಚಂದ್ರಶೇಖರ ರೊಟ್ಟಿಗವಾಡ, ಇತರರಿದ್ದರು.

    ಗಾಯಕರಾದ ಅಂದಾನಯ್ಯ ಮಠದ, ಶಿವಯೋಗಿ ಹಿರೇಮಠ ಹಾಗೂ ಶೇಖರಯ್ಯ ಕೋರಿಮಠ ವಚನ ಸಂಗೀತ ಪ್ರಸ್ತುತಪಡಿಸಿದರು. ಬಸವರಾಜ ಹೂಗಾರ ತಬಲಾ ಸಾಥ್ ನೀಡಿದರು.

    ಶ್ರೀಮದಥಣಿ ಮುರುಘೇಂದ್ರ ಮಹಾಶಿವಯೋಗಿಗಳ ಜಾತ್ರಾ ಮಹೋತ್ಸವ 26ರಿಂದ

    ಶ್ರೀಮದಥಣಿ ಮುರುಘೕಂದ್ರ ಮಹಾಶಿವಯೋಗಿಗಳ ಜಾತ್ರಾ ಮಹೋತ್ಸವ, ಪ್ರವಚನ, ಗ್ರಂಥಗಳ ಲೋಕಾರ್ಪಣೆ, ಶ್ರೀ ಮೃತ್ಯುಂಜಯ-ಮಹಾಂತ ಪ್ರಶಸ್ತಿ ಪ್ರದಾನ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮ ಜ. 26 ರಿಂದ 30ರವರೆಗೆ ಮುರುಘಾಮಠದ ಶಿವಾನುಭವ ಮಂಟಪದಲ್ಲಿ ನಡೆಯಲಿದೆ ಎಂದು ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ತಿಳಿಸಿದರು.

    ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ. 26ರಂದು ಬೆಳಗ್ಗೆ 8.30ಕ್ಕೆ ಗರಗ ಮಡಿವಾಳೇಶ್ವರ ಮಠದ ಶ್ರೀ ಚನ್ನಬಸವ ಸ್ವಾಮೀಜಿ ಷಟ್​ಸ್ಥಲ ಧ್ವಜಾರೋಹಣ ನೆರವೇರಿಸುವರು. ಶ್ರೀ ನಿಜಗುಣ ಶಿವಯೋಗಿ ಸ್ವಾಮೀಜಿ, ಶ್ರೀ ಗುರುಸಿದ್ಧ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಶ್ರೀ ಶರಣಬಸವ ದೇವರು ಷಟ್​ಸ್ಥಲ ನುಡಿಗಳನ್ನಾಡುವರು. ಅತಿಥಿಗಳಾಗಿ ಮಹಾವೀರ ಜೈನ್, ಈಶ್ವರ ಸಾಣಿಕೊಪ್ಪ, ಯಾಸೀನ ಹಾವೇರಿಪೇಟ ಆಗಮಿಸುವರು ಎಂದರು.

    ಸಂಜೆ 6.30ಕ್ಕೆ ಜಾತ್ರಾ ಮಹೋತ್ಸವ ಉದ್ಘಾಟನೆ ಹಾಗೂ ಪುಸ್ತಕಗಳ ಲೋಕಾರ್ಪಣೆೆ ನಡೆಯಲಿದ್ದು, ಶ್ರೀ ಗುರುಮಹಾಂತ ಸ್ವಾಮೀಜಿ, ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ, ಶ್ರೀ ಶಾಂತವೀರ ಶರಣರು ಸಮ್ಮುಖ ವಹಿಸುವರು. ಗೃಹ ಸಚಿವ ಬಸವರಾಜ ಬೊಮ್ಮಾಯಿ ಕಾರ್ಯಕ್ರಮ ಉದ್ಘಾಟಿಸುವರು. ಬಾಲಲೀಲಾ ಮಹಾಂತ ಶಿವಯೋಗೀಶ್ವರ ಗ್ರಂಥಮಾಲೆ ಗ್ರಂಥಗಳ ಲೋಕಾರ್ಪಣೆ ಮಾಡಲಾಗುವುದು. ಸಚಿವೆ ಶಶಿಕಲಾ ಜೊಲ್ಲೆ ಅತಿಥಿಯಾಗಿ ಆಗಮಿಸುವರು. ಮಾಜಿ ಸಚಿವ ವಿನಯ ಕುಲಕರ್ಣಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

    ಜ. 27ರಂದು ಸಂಜೆ 6.30ಕ್ಕೆ ವಿಶೇಷ ಉಪನ್ಯಾಸ ಮಾಲೆ-1 ನಡೆಯಲಿದ್ದು, ಶ್ರೀ ಫಕೀರ ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯ, ಶ್ರೀ ಚನ್ನಬಸವ ಸ್ವಾಮೀಜಿ, ಶ್ರೀ ಶಿವಮೂರ್ತಿ ಸ್ವಾಮೀಜಿ ಸಮ್ಮುಖ ವಹಿಸುವರು. ಶಾಸಕರಾದ ಅರವಿಂದ ಬೆಲ್ಲದ, ಕುಸುಮಾವತಿ ಶಿವಳ್ಳಿ, ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಕೆಎಲ್​ಇ ಸಂಸ್ಥೆ ನಿರ್ದೇಶಕ ಶಂಕರಣ್ಣ ಮುನವಳ್ಳಿ ಅತಿಥಿಗಳಾಗಿ ಆಗಮಿಸುವರು. ಚನ್ನಪ್ಪ ಅಂಗಡಿ ಅವರು ಶರಣರ ಅನುಭಾವ ಕುರಿತು ಉಪನ್ಯಾಸ ನೀಡುವರು. ಜ. 28ರಂದು ಸಂಜೆ 6.30ಕ್ಕೆ ವಿಶೇಷ ಉಪನ್ಯಾಸ ಮಾಲೆ-2 ಹಾಗೂ ಅಖಿಲ ಭಾರತ ಶಿವಾನುಭವ ಸಂಸ್ಥೆಯ 78ನೇ ವಾರ್ಷಿಕ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಣೆ ನಡೆಯಲಿದೆ. ವಿವಿಧ ಮಠಗಳ ಸ್ವಾಮೀಜಿಗಳು ಸಾನ್ನಿಧ್ಯ ವಹಿಸುವರು. ಸಚಿವ ಜಗದೀಶ ಶೆಟ್ಟರ್, ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಶಾಸಕರಾದ ಅಮೃತ ದೇಸಾಯಿ, ಶಂಕರ ಪಾಟೀಲ ಮುನೇನಕೊಪ್ಪ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದರು.

    ಜ. 30ರಂದು ಬೆಳಗ್ಗೆ 4 ಗಂಟೆಗೆ ಡಾ. ಸುಜ್ಞಾನದೇವ ಶಿವಾಚಾರ್ಯ ಸ್ವಾಮೀಜಿ ಅವರಿಂದ ಲಿಂಗದೀಕ್ಷೆ ಸಮಾರಂಭ ನೆರವೇರಲಿದೆ. ಶ್ರೀ ಚನ್ನವೀರ ಸ್ವಾಮೀಜಿ, ಶ್ರೀ ಸ್ವಾಮಿನಾಥ ಸ್ವಾಮೀಜಿ, ಶ್ರೀ ಗುರುಶಾಂತ ಸ್ವಾಮೀಜಿ, ಶ್ರೀ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ನಂತರ ಸಂಜೆ 4 ಗಂಟೆಗೆ ಶ್ರೀ ಮದಥಣಿ ಮುರುಘೕಂದ್ರ ಮಹಾಶಿವಯೋಗಿಗಳ ರಥೋತ್ಸವಕ್ಕೆ ಡಾ. ಶಿವಮೂರ್ತಿ ಮುರುಘಾ ಶರಣರು ಚಾಲನೆ ನೀಡುವರು. ಹರಗುರು ಚರಮೂರ್ತಿಗಳು ಪಾಲ್ಗೊಳ್ಳಲಿದ್ದು, ಜಾತ್ರಾ ಮಹೋತ್ಸವದ ಎಲ್ಲ ಸಮಾರಂಭಗಳಿಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕೋರಿದರು.

    ನಾಗರಾಜ ಪಟ್ಟಣಶೆಟ್ಟಿ, ಡಿ.ಬಿ. ಲಕಮನಹಳ್ಳಿ, ವಿ.ಎಸ್. ಕಟಗಿ, ಎಸ್.ಎಸ್. ಲಕ್ಷೆ್ಮೕಶ್ವರ, ಎಂ.ವಿ. ವಡ್ಡೀನ, ರವಿಂದ್ರ ವಸ್ತ್ರದ, ಸಿ.ಎಸ್. ಪಾಟೀಲ, ವಿ.ಎಸ್. ಕಟ್ಟಿ, ಬಸವರಾಜ ಕಡಕಲ್, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts