More

    ಮಾಯಾಜಾಲಗಳಿಗೆ ಬಲಿಯಾಗಬೇಡಿ

    ಕಾರವಾರ: ಯಾವುದೂ ಅಸಾಧ್ಯ ಎಂಬುದಿಲ್ಲ. ಇನ್ನೊಬ್ಬರನ್ನು ದೂರುವುದು ಮತ್ತು ನಮ್ಮ ಪರಿಸ್ಥಿತಿಗೆ ಬೇಸರಪಡುವುದನ್ನು ನಿಲ್ಲಿಸಬೇಕು. ಮಾಯಾಜಾಲಗಳಿಗೆ ಬಲಿಯಾಗದೆ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ಹರೀಶ ಕುಮಾರ ಕೆ. ವಿದ್ಯಾರ್ಥಿಗಳಿಗೆ ಕರೆ ನೀಡಿದರು.

    ಯುವ ಸಬಲೀಕರಣ ಇಲಾಖೆ, ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜ್, ಜಿಲ್ಲಾ ಲೀಡ್ ಬ್ಯಾಂಕ್​ನಿಂದ ಜಿಲ್ಲಾ ರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ರಾಷ್ಟ್ರೀಯ ಯುವ ಸಪ್ತಾಹ ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಕಾರ್ಯಕ್ರಮ ಉದ್ಘಾಟಿಸಿದ ರಾಮಕೃಷ್ಣಾಶ್ರಮದ ಸ್ವಾಮಿ ಭವೇಶಾನಂದಜಿ, ಸರ್ವ ಧರ್ಮದ ಸಮನ್ವಯ ಬಿತ್ತಿದ, ಬಡವರ ಸೇವೆಯೇ ದೇವರ ಸೇವೆ ಎಂದು ತಿಳಿಸಿಕೊಟ್ಟವರು ಸ್ವಾಮಿ ವಿವೇಕಾನಂದರು ಎಂದರು.

    ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜ್ ಪ್ರಾಧ್ಯಾಪಕ ವೆಂಕಟೇಶ ಗಿರಿ ಮಾತನಾಡಿ, ಸ್ವಾಮಿ ವಿವೇಕಾನಂದರು 39 ವರ್ಷ ಬದುಕಿದ್ದರು. ಆದರೆ, ಜೀವಿತದ ಅಲ್ಪಾವಧಿಯಲ್ಲಿ ಕೇವಲ ಭಾರತ ಮಾತ್ರವಲ್ಲದೇ ವಿದೇಶಗಳೂ ಅವರನ್ನು ಅನುಸರಿಸುವಂತೆ ಮಾಡಿದರು ಎಂದರು.

    ಪ್ರಾಂಶುಪಾಲೆ ಕಲ್ಪನಾ ಕೆರವಡಿಕರ್ ಸ್ವಾಗತಿಸಿದರು. ಉಪನ್ಯಾಸಕಿ ವಿಜಯಾ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು. ಯುವ ಸಬಲೀಕರಣ ಇಲಾಖೆ ಸಹಾಯಕ ನಿರ್ದೇಶಕಿ ಜಿ. ಗಾಯತ್ರಿ, ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಪಿ.ಎಂ. ಪಿಂಜಾರ ಇದ್ದರು.

    ಮೆರವಣಿಗೆ: ಸ್ವಾಮಿ ವಿವೇಕಾನಂದರ ಭಾವಚಿತ್ರ ಮೆರವಣಿಗೆ ಭಾನುವಾರ ನಡೆಯಿತು. ಸ್ವಾಮಿ ಭವೇಶಾನಂದಜೀ ಮೆರವಣಿಗೆಗೆ ಜಿಲ್ಲಾಧಿಕಾರಿ ಕಚೇರಿಯಿಂದ ಚಾಲನೆ ನೀಡಿದರು. ಶಾಲೆ, ಕಾಲೇಜ್ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿದ್ದರು.

    ಲ್ಯಾಪ್​ಟಾಪ್ ವಿತರಣೆ: ಜಿಲ್ಲೆಯಲ್ಲಿ ಪದವಿ ಓದುತ್ತಿರುವ 3,760 ವಿದ್ಯಾರ್ಥಿಗಳಿಗೆ ಲ್ಯಾಪ್​ಟಾಪ್​ಗಳು ಉನ್ನತ ಶಿಕ್ಷಣ ಇಲಾಖೆಯಿಂದ ಮಂಜೂರಾಗಿವೆ. ಕಾರವಾರ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ 378 ವಿದ್ಯಾರ್ಥಿಗಳು ಫಲಾನುಭವಿಗಳಾಗಿದ್ದಾರೆ. ಭಾನುವಾರ ಯುವ ಸಪ್ತಾಹ ಉದ್ಘಾಟನೆ ಕಾರ್ಯಕ್ರಮದಲ್ಲಿ 10 ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ವಿತರಿಸಲಾಯಿತು.

    ಯುವ ಸಬಲೀಕರಣ ಕೇಂದ್ರ ಉದ್ಘಾಟನೆ: ಇಲ್ಲಿನ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜ್​ನಲ್ಲಿ ಪ್ರಾರಂಭವಾಗಲಿರುವ ಯುವ ಸಬಲೀಕರಣ ಕೇಂದ್ರವನ್ನು ಜಿಲ್ಲಾಧಿಕಾರಿ ಡಾ. ಹರೀಶ ಕುಮಾರ ಕೆ. ಭಾನುವಾರ ಉದ್ಘಾಟಿಸಿದರು. ಪ್ರತಿ ಜಿಲ್ಲೆಗೊಂದು ಕೇಂದ್ರ ತೆರೆಯಲು ಸರ್ಕಾರ ಮುಂದಾಗಿದೆ. ಪ್ರತಿ ಶನಿವಾರ ಹಾಗೂ ಭಾನುವಾರ ಬೆಳಗ್ಗೆ 9 ರಿಂದ ಸಂಜೆ 5ರವರೆಗೆ ಈ ಕೇಂದ್ರ ತೆರೆದಿರಲಿದೆ. ಇಲ್ಲಿ ವಿದ್ಯಾರ್ಥಿಗಳಿಗೆ ಕೌಶಲಾಭಿವೃದ್ಧಿ ತರಬೇತಿ, ವಿವಿಧ ಪುಸ್ತಕಗಳು ಹಾಗೂ ನುರಿತು ಉಪನ್ಯಾಸಕರಿಗೆ ಅಗತ್ಯ ಸಲಹೆ ನೀಡಲಾಗುವುದು. ನಿರ್ವಹಣೆ ಸಂಬಂಧ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳ ಸಮಿತಿ ಕಾರ್ಯನಿರ್ವಹಿಸಲಿದೆ.

    ರಕ್ತದಾನ ಕಾರ್ಯಕ್ರಮ
    ಸ್ವಾಮಿ ವಿವೇಕಾನಂದರ 157ನೇ ಜನ್ಮ ದಿನದ ಅಂಗವಾಗಿ ಆಜಾದ್ ಯುತ್ ಕ್ಲಬ್, ಕಲ್ಲೂರು ಎಜುಕೇಶನ್ ಸೊಸೈಟಿ, ಪ್ರೇಮಾಶ್ರಮ ಚಾರಿಟಬಲ್ ಟ್ರಸ್ಟ್​ನಿಂದ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಕ್ರಿಮ್್ಸ ರಕ್ತನಿಧಿ ಕೇಂದ್ರದಲ್ಲಿ ಆಯೋಜಿಸಲಾಗಿತ್ತು. ಶಿವಾಜಿ ಪ್ರೌಢಶಾಲೆ ಮುಖ್ಯಾಧ್ಯಾಪಕ ದಿನೇಶ ಗಾಂವಕರ್ ಅತಿಥಿಯಾಗಿದ್ದರು. ಆರ್.ಜಿ. ಪ್ರಭು, ನಜೀರ್ ಶೇಖ್, ಇಬ್ರಾಹಿಂ ಕಲ್ಲೂರು, ಸಾಧಿಕ್ ಖಾನ್, ಮಂಜುನಾಥ ಮುದ್ಗೇಕರ್, ಅಂಗದ ಸಿಂಗ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts