More

    ಮಹನೀಯರ ತತ್ವ ಪಾಲನೆಯಿಂದ ಸಮಾನತೆ ಸಾಧ್ಯ : ಹೈಕೋರ್ಟ್ ನ್ಯಾಯಮೂರ್ತಿ ಕೆ.ಸೋಮಶೇಖರ್ ಅಭಿಮತ

    ಚಾಮರಾಜನಗರ : ಹನ್ನೆರಡನೇ ಶತಮಾನದಲ್ಲಿ ಬಸವಣ್ಣ ಆರಂಭಿಸಿದ ಅನುಭವ ಮಂಟಪದ ಆಧಾರದ ಮೇಲೆ ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನ ರಚಿಸಿದ್ದು, ಇಬ್ಬರು ಮಹನೀಯರ ತತ್ವಗಳನ್ನು ಪಾಲಿಸಿದರೆ ಸಮಾಜದಲ್ಲಿ ಸಮಾನತೆ ಸಾಧ್ಯ ಎಂದು ಹೈಕೋರ್ಟ್ ನ್ಯಾಯಮೂರ್ತಿ ಕೆ.ಸೋಮಶೇಖರ್ ಹೇಳಿದರು.

    ಗುಂಡ್ಲುಪೇಟೆ ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದ ಆವರಣದಲ್ಲಿ ಶನಿವಾರ ತಾಲೂಕು ವಕೀಲರ ಸಂಘದ ವತಿಯಿಂದ ಬಸವ ಜಯಂತಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.


    ಸೃಷ್ಟಿಯಲ್ಲಿ ಎಲ್ಲರೂ ಒಂದೇ ಆಗಿದ್ದರೂ ಸಮಾಜದಲ್ಲಿ ಜಾತಿ ವ್ಯವಸ್ಥೆಯಿಂದ ಅಸಮಾನತೆ ಹೆಚ್ಚಾಗಿದೆ. ಇದನ್ನು ನಿವಾರಿಸಿ ಸಮಾನತೆ ತರಲು 12 ನೇ ಶತಮಾನದಲ್ಲಿಯೇ ಬಸವಣ್ಣ ಎಲ್ಲ ವರ್ಗಗಳ ಸಮಾಜದ ಜನರನ್ನು ಒಳಗೊಂಡ ಅನುಭವಮಂಟಪ ಮೂಲಕ ಇಂದಿನ ಪಾರ್ಲಿಮೆಂಟ್ ಪರಿಕಲ್ಪನೆಯನ್ನು ಪಾಲಿಸುತ್ತಿದ್ದರು. ಜತೆಗೆ ಸಮಾಜದಲ್ಲಿ ಜಾತಿ ಲಿಂಗ ಸಮಾನತೆಗೆ ಶ್ರಮಿಸಿದ್ದರು. ಅದನ್ನೇ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಅಳವಡಿಸಿದ್ದಾರೆ ಎಂದರು.


    ಹೈಕೋರ್ಟ್ ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯರಿಯೂರ್ ಮಾತನಾಡಿ, ಬಸವಣ್ಣನವರ ವಚನಗಳನ್ನು ಹೇಳುವ ಬದಲು ಪಾಲನೆಯಾಗಬೇಕು. ಇದರಿಂದ ಸಮಾಜನದಲ್ಲಿ ಅಸಮಾನತೆ ನಿವಾರಣೆಯಾಗಿ ಸಮಾನತೆ ಬರಲು ಸಾಧ್ಯ ಎಂದರು.


    ಹೈಕೋರ್ಟ್‌ನ ಆಡಳಿತಾತ್ಮಕ ನ್ಯಾಯಮೂರ್ತಿ ಶಿವಶಂಕರ್ ಮಾತನಾಡಿ, ಸಕಲ ಜೀವರಾಶಿಗಳಿಗೂ ಲೇಸು ಬಯಸಿದ ಬಸವಣ್ಣ ಹಾಗೂ ಅಂಬೇಡ್ಕರ್ ಮಹಾನ್ ಮಾನವತಾವಾದಿಗಳು. 12 ನೇ ಶತಮಾನದಲ್ಲಿ ಸಮಾನತೆ, ಕಾಯಕ ಹಾಗೂ ಜಾತಿ ನಿರ್ಮೂಲನೆಗೆ ಹೋರಾಟ ನಡೆಸಿದ್ದರು. ಎಲ್ಲ ಧರ್ಮಗಳ ಸಾರವೂ ದಯೆಯೇ ಆಗಿದ್ದು, ಸ್ವರ್ಗ ಮತ್ತು ನರಕವನ್ನು ನಮ್ಮ ಆಚರಣೆಯಲ್ಲಿ ಕಾಣಬೇಕು ಎಂದು ಹೇಳಿದರು.


    ಕಾರ್ಯಕ್ರಮದಲ್ಲಿ ಜಿಲ್ಲಾ ಸತ್ರ ನ್ಯಾಯಾಧೀಶೆ ಬಿ.ಎಸ್.ಭಾರತಿ, ವಕೀಲರ ಸಂಘದ ಅಧ್ಯಕ್ಷ ಟಿ.ಎಸ್.ವೆಂಕಟೇಶ್, ಉಪಾಧ್ಯಕ್ಷರಾದ ಸತ್ಯನಾರಾಯಣ, ಸಿದ್ದಯ್ಯ, ಬಿ.ಪಿ.ಪುಟ್ಟಸ್ವಾಮಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts