More

    ಮಂಗಲದಲ್ಲಿ ಸಡಗರದ ದೊಡ್ಡು

    ಹನೂರು: ತಾಲೂಕಿನ ಮಂಗಲ ಗ್ರಾಮದಲ್ಲಿ 25 ವರ್ಷಗಳ ಬಳಿಕ ನಡೆಯುತ್ತಿರುವ ಆದಿಶಕ್ತಿ ಶ್ರೀ ಕೋಣನ ಮಾರಮ್ಮನ ಜಾತ್ರೋತ್ಸವದಲ್ಲಿ ಸೋಮವಾರ ರಾತ್ರಿ ದೊಡ್ಡು ಆಡುವ ಕಾರ್ಯಕ್ರಮ ಸುತ್ತೇಳು ಹಳ್ಳಿಯ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.


    ಸೋಮವಾರ ಬೆಳಗ್ಗೆ ದೇಗುಲದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ರಾತ್ರಿ 10ರ ಸುಮಾರು ಹೆಬ್ಬರದ ಕುಣಿತ ಮುಕ್ತಾಯದ ಬಳಿಕ ರಂಗದಮಾಳದ ರಂಗಕಂಬದ ಸುತ್ತ ದೊಡ್ಡು ಆಡುವ ಕಾರ್ಯಕ್ರಮ ತಡರಾತ್ರಿ 12.30ರವರೆಗೂ ಜರುಗಿತು.


    ಈ ವೇಳೆ ಕೋಣನ ವೇಷಧಾರಿಯನ್ನು ಸತ್ತಿಗೆ, ಸೂರಿಪಾನಿ ಹಾಗೂ ವಾದ್ಯಮೇಳದೊಂದಿಗೆ ಕರೆತರಲಾಯಿತು. ಬಿಲ್ಲುಗಾರಿಕೆ ಹಾಗೂ ಕತ್ತಿವರಸೆ ಅರ್ಚಕರು ಕುಣಿತ ಪ್ರಾರಂಭಿಸಿದಾಗ ದೈವಭಕ್ತಿಯಿಂದ ಕೋಣನ ವೇಷಧಾರಿ ಅರ್ಚಕರೊಂದಿಗೆ ಪೈಪೋಟಿಗೆ ಬಿದ್ದವರಂತೆ ವಿವಿಧ ಭಾವ ಭಂಗಿಯಲ್ಲಿ ಕುಣಿದು ಗಮನ ಸೆಳೆದರು. ನೆರೆದಿದ್ದ ಭಕ್ತರು ಘೋಷಣೆ ಮೊಳಗಿಸುವುದರ ಮೂಲಕ ಹುರಿದುಂಬಿಸಿದರು. ಬಳಿಕ ಬಿಲ್ಲುಗಾರಿಕೆ ಪ್ರಯೋಗಿಸಿದಾಗ ವೇಷಧಾರಿಯು ಕುಣಿತವನ್ನು ನಿಲ್ಲಿಸಿದರು.
    ಕುಣಿದು ಕುಪ್ಪಳಿಸಿದ ಭಕ್ತರು


    ಹೆಬ್ಬರದ ಕುಣಿತದಲ್ಲಿ ಮಂಗಲ, ಕಾಮಗೆರೆ, ಕಣ್ಣೂರು ಹಾಗೂ ಗುಂಡಾಪುರ ಗ್ರಾಮಗಳ ಭಕ್ತರು ಭಾಗಿಯಾಗಿದ್ದರು. ವಾದ್ಯದ ತಾಳಕ್ಕೆ ಕುಣಿದು ಕುಪ್ಪಳಿಸಿದರು. ನೆರೆದಿದ್ದ ಭಕ್ತರು ವೀಕ್ಷಿಸಿ ಖುಷಿಪಟ್ಟರು. ಹನೂರು ಪೊಲೀಸರು ಬಂದೋಬಸ್ತ್ ಕಲ್ಪಿಸಿದ್ದರು.


    ಕಂಗೊಳಿಸುವ ದೀಪಾಲಂಕಾರ: ದೇಗುಲ ಸೇರಿದಂತೆ ಗ್ರಾಮದ ಪ್ರತಿ ಬಡಾವಣೆಯನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದು, ಕಣ್ಣು ಕೊರೈಸುವಂತಿವೆ. 4 ಕಡೆ ವಿದ್ಯುತ್ ದೀಪದಿಂದ ಕಂಗೊಳಿಸುವ ಮಾರಮ್ಮನ ಮೂರ್ತಿಯನ್ನು ಅಳವಡಿಸಲಾಗಿದೆ. ಜೂ.7ರಂದು ತಂಪುಜ್ಯೋತಿ ಕಾರ್ಯಕ್ರಮ, 8ರಂದು ರಾಕ್ಷಸನ ಸಂಹಾರ, 9ರಂದು ಮಲ್ಲೇಶ್ವರಸ್ವಾಮಿ ಹಾಗೂ ಕೋಣನ ಮಾರಮ್ಮನ ರಥೋತ್ಸವ, 10 ರಂದು ಕೊಂಡೋತ್ಸವ ನಡೆಯಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts