More

    ಭಾರತೀಯ ಪರಂಪರೆಯಲ್ಲಿ ಸೂರ್ಯದೇವಗೆ ವಿಶೇಷ ಸ್ಥಾನ

    ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

    ರಥ ಸಪ್ತಮಿಯ ಪ್ರಯುಕ್ತ ನಗರದ ಧನ್ಯೋಸ್ಮಿ ಯೋಗ ಕೇಂದ್ರ ವತಿಯಿಂದ 108 ಸೂರ್ಯ ನಮಸ್ಕಾರ ಯಜ್ಞ ಕಾರ್ಯಕ್ರಮ ದೇಶಪಾಂಡೆ ನಗರದ ಜಿಮಖಾನ ಮೈದಾನದಲ್ಲಿ ಶನಿವಾರ ಏರ್ಪಡಿಸಲಾಗಿತ್ತು.

    ಯೋಗ ಪಟುಗಳು ಮತ್ತು ಹೆಗ್ಗೇರಿಯ ಆಯುರ್ವೆದ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಸೇರಿದಂತೆ 250ಕ್ಕೂ ಹೆಚ್ಚು ಯೋಗಾಸಕ್ತರು ಭಾಗವಹಿಸಿದ್ದರು. ಆಚಾರ್ಯ ರಘುಪತಿ ತಂತ್ರಿ ಅವರ ನೇತೃತ್ವದಲ್ಲಿ ಸೂರ್ಯ ಯಜ್ಞವು ನಡೆಯಿತು. ಮಲ್ಲೇಶ ಹೆಬಸೂರ, ನಾರಾಯಣ ಬಾಕಳೆ ದಂಪತಿ ಯಜ್ಞದ ಸೇವೆ ವಹಿಸಿದ್ದರು. ಯೋಗ ಗುರು ವಿನಾಯಕ ತಲಗೇರಿ ಸೂರ್ಯ ನಮಸ್ಕಾರದ ಮಂತ್ರ ವನ್ನು ವಿವರಿಸಿದರು.

    ಪ್ರಾಚಾರ್ಯ ಪ್ರೊ. ಸಂದೀಪ ಬೂದಿಹಾಳ ಮಾತನಾಡಿ, ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಸೈಕಲ್ ಜೋನ್ ಸೇರಿದಂತೆ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದೆ ಮಾದರಿಯಲ್ಲಿ ಅವಳಿ ನಗರದಲ್ಲಿ ಯೋಗ ಕೇಂದ್ರಗಳನ್ನು ಸ್ಥಾಪಿಸಬೇಕು ಎಂದು ವಿನಂತಿಸಿದರು. ನಯನಾ ದೇಸಾಯಿ ಹಾಡಿಗೆ ನಾಗಲಿಂಗ ಮುರಗಿ ತಬಲಾ ಸಾಥ್ ನೀಡಿದರು.

    ಎಸ್​ಪಿವೈಎಸ್​ಎಸ್: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ, ಯೋಗ ಸ್ಪರ್ಶ ಪ್ರತಿಷ್ಠಾನ ವತಿಯಿಂದ ನಗರದ ಮೂರು ಸಾವಿರ ಮಠದಲ್ಲಿ ರಥ ಸಪ್ತಮಿ ನಿಮಿತ್ತ 108 ಸಾಮೂಹಿಕ ಸೂರ್ಯ ನಮಸ್ಕಾರ ಶನಿವಾರ ಏರ್ಪಡಿಸಲಾಗಿತ್ತು.

    ಸ್ವರ್ಣ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ. ವಿ.ಎಸ್.ವಿ. ಪ್ರಸಾದ ಮಾತನಾಡಿ, ಸೂರ್ಯ ನಮಸ್ಕಾರದಿಂದ ದೇಹಕ್ಕೆ ಬಹಳಷ್ಟು ಲಾಭ ಆಗಲಿದೆ. ಇದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ. ಭಾರತೀಯ ಪರಂಪರೆಯಲ್ಲಿ ಸೂರ್ಯದೇವನಿಗೆ ವಿಶೇಷ ಸ್ಥಾನವಿದೆ ಎಂದರು.

    ವಕ್ತಾರ ಮಹಾದೇವ ಹೊಳೆಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು.

    ಕೈಲಾಸ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು.

    ಜಿಲ್ಲಾ ಸಂಚಾಲಕ ಗೋಪಾಲ ಜೋಶಿ, ಅಮರಾವತಿ ಗಾಣಿಗಿ, ರಘುನಾಥ ಪಾಟೀಲ, ದಾಕ್ಷಾಯಿಣಿ ತೋರಗಲ್, ದಯಾನಂದ ಮಗಜಿಕೊಂಡಿ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts