More

    ಬೋನಿಗೆ ಬಿದ್ದ ಚಿರತೆ

    ಪಾಂಡವಪುರ: ತಾಲೂಕಿನ ಚಿಕ್ಕಕೊಪ್ಪಲು ಸುತ್ತಮುತ್ತಲ ಗ್ರಾಮಗಳ ರೈತರಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆ ಶುಕ್ರವಾರ ಅರಣ್ಯ ಇಲಾಖೆ ಅಧಿಕಾರಿಗಳು ಇರಿಸಿದ್ದ ಬೋನಿಗೆ ಬಿದ್ದಿದೆ.

    ಈ ಭಾಗದ ಗ್ರಾಮಗಳ ಸುತ್ತಮುತ್ತಲೂ ಕಾಣಿಸಿಕೊಂಡು ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿದ್ದ ಚಿರತೆಯನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ದೂರು ನೀಡಿದ್ದರು. ಚಿರತೆಯ ಚಲನವಲನ ಆಧರಿಸಿ ಬೋನಿನಲ್ಲಿ ನಾಯಿಯನ್ನು ಕಟ್ಟಿಹಾಕಿ ಸೆರೆ ಹಿಡಿಯಲು ಅಧಿಕಾರಿಗಳ ಕ್ರಮಕೈಗೊಂಡಿದ್ದರು. ನಾಯಿಯನ್ನು ಬೇಟೆಯಾಡಲು ಬಂದಿದ್ದ ಸುಮಾರು 3ರಿಂದ 4 ವರ್ಷದ ಗಂಡು ಚಿರತೆ ಶುಕ್ರವಾರ ಬೆಳಗ್ಗೆ ಸೆರೆಯಾಗಿದೆ.

    ಚಿರತೆ ಸೆರೆಯಾದ ಬಳಿಕ ವಲಯ ಅರಣ್ಯಾಧಿಕಾರಿ ಪುಟ್ಟಸ್ವಾಮಿ, ಉಪ ಅರಣ್ಯಾಧಿಕಾರಿ ಇಮ್ರಾನ್, ಅರಣ್ಯ ರಕ್ಷಕರಾದ ಧನಂಜಯ, ಮಂಜು ಸ್ಥಳಕ್ಕೆ ಧಾವಿಸಿ ಸುರಕ್ಷಿತ ಅರಣ್ಯಕ್ಕೆ ರವಾನಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts