More

    ಬೇರು ಮಟ್ಟದಿಂದ ಬಿಜೆಪಿ ಸಂಘಟಿಸೋಣ

    ಯಾದಗಿರಿ: ಮುಂಬರುವ ವಿಧಾನಸಭೆ ಚುನಾವಣೆ ದೃಷ್ಟಿಯಿಂದ ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಪ್ರತಿಯೊಬ್ಬ ಕಾರ್ಯಕರ್ತ ಸಜ್ಜಾಗುವಂತೆ ಶಾಸಕ ವೆಂಕಟರಡ್ಡಿ ಮುದ್ನಾಳ್ ಸಲಹೆ ನೀಡಿದರು.

    ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಜಿಲ್ಲಾ ಪ್ರಕೋಷ್ಠಗಳ ಸಂಚಾಲಕ, ಸಹ ಸಂಚಾಲಕರ ಸಭೆ ಉದ್ಘಾಟಿಸಿದ ಅವರು, ಕಾರ್ಯಕರ್ತರ ಬಲದಿಂದಲೇ ಪಕ್ಷ ಈ ಮಟ್ಟಿಗೆ ಬೆಳೆದಿದೆ. ಮುಂಬರುವ ಜಿಪಂ ಮತ್ತು ತಾಪಂ ಚುನಾವಣೆ ಗುರಿಯೊಂದಿಗೆ ಪಕ್ಷದ ಸಂಘಟನೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

    ಪಕ್ಷದ ಜಿಲ್ಲಾ ಪ್ರಭಾರಿ ಅಮರನಾಥ ಪಾಟೀಲ್ ಮಾತನಾಡಿ, ರಾಷ್ಟ್ರಭಕ್ತಿ, ದೇಶಸೇವೆ, ಶಿಸ್ತು ಮತ್ತು ಸಂಯಮ ಇವು ಪಕ್ಷದ ಸಿದ್ಧಾಂತಗಳಲ್ಲಿ ಪ್ರಮುಖವಾಗಿವೆ. ಕಾರ್ಯಕರ್ತರು ಶಿಸ್ತಿನ ಸಿಪಾಯಿಗಳಾಗಿ ಕೆಲಸ ಮಾಡುತ್ತಿದ್ದಾರೆ ಎಂಬ ಹೆಮ್ಮೆ ನಮ್ಮದು. ಕೋವಿಡ್ ಲಸಿಕೆ ನೀಡಿಕೆ, ಸೇವಾ ಕಾರ್ಯಗಳನ್ನು ಈ ಹಿಂದೆ ಪಕ್ಷ ಹಮ್ಮಿಕೊಂಡಿತ್ತು. ವಿವಿಧ ಯೋಜನೆಗಳಡಿ ಲಾನುಭವಿಗಳಿಗೆ ಪ್ರಯೋಜನ ಕೊಡಿಸಲು ಪಕ್ಷ ಶ್ರಮಿಸಿದೆ. ಇವೆಲ್ಲವು ಮತಗಳಾಗಿ ಪರಿವರ್ತನೆ ಮಾಡುವುದು ನಮ್ಮೆಲ್ಲರ ಮುಂದಿರುವ ಗುರಿ ಎಂದರು.

    ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳು ಬಹಳ ಮಹತ್ವದ್ದಾಗಿವೆ. ಇದರಲ್ಲಿ ಪಕ್ಷದ ಅಭ್ಯಥರ್ಿಗಳು ಎಲ್ಲ ಕ್ಷೇತ್ರಗಳಲ್ಲಿ ಗೆಲ್ಲುವಂತೆ ನೋಡಿಕೊಳ್ಳಬೇಕು. ಇದಕ್ಕಾಗಿ ಚುನಾವಣಾ ಅವಧಿಯಲ್ಲಿ ಪ್ರಕೋಷ್ಠಗಳ ಪದಾಧಿಕಾರಿಗಳು ಮತ್ತು ಸದಸ್ಯರು ಬೂತ್ ಮಟ್ಟದಲ್ಲಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

    ಜಿಲ್ಲಾಧಕ್ಷ ಡಾ.ಶರಣಭೂಪಾಲರಡ್ಡಿ ನಾಯ್ಕಲ್ ಮಾತನಾಡಿ, ಪ್ರಕೋಷ್ಠಗಳು ಪಕ್ಷದ ಬುನಾದಿ ಇದ್ದಂತೆ. ಪಕ್ಷ ಬೆಳೆಯುತ್ತ ಸಾಗಿದಂತೆ ಮೋಚರ್ಾಗಳನ್ನು ರಚಿಸಲಾಯಿತು. ಬಳಿಕ ಪ್ರಕೋಷ್ಠಗಳ ಮೂಲಕ ಪಕ್ಷ ವಿಸ್ತರಣೆ ಹೊಂದಿದೆ. ಇದೀಗ ಜಿಲ್ಲೆಗಳಿಗೆ ಪ್ರಕೋಷ್ಠಗಳ ಸಂಯೋಜಕರನ್ನು ನೇಮಿಸಲಾಗಿದೆ ಎಂದು ಹೇಳಿದರು.

    ಅಲೆಮಾರಿ, ಅರೆ-ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ದೇವಿಂದ್ರನಾಥ ನಾದ, ಮಾಜಿ ಶಾಸಕ ಡಾ.ವೀರಬಸವಂತರಡ್ಡಿ ಮುದ್ನಾಳ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುರೇಶ್ ಸಜ್ಜನ, ಜಿಲ್ಲಾ ಪ್ರಧಾನ ಕಾರ್ಯದಶರ್ಿ ವೆಂಕಟರಡ್ಡಿ ಅಬ್ಬೆತುಮಕೂರ, ಪ್ರಕೋಷ್ಟಗಳ ಜಿಲ್ಲಾ ಸಂಯೋಜಕ ಡಾ.ವೀರಭದ್ರಪ್ಪ ಹುಣಸಿಗಿ, ಮಲ್ಲೇಶಪ್ಪ ಪಾಟೀಲ್, ಮಲ್ಲಿಕಾಜರ್ುನ ಹಳಿಗೇರ, ಸಾಬಣ್ಣ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts